24ನೇ ಜಿಲ್ಲಾ ಇಂಟರ‍್ಯಾಕ್ಟ್ ಅಧಿವೇಶನ ಉದ್ಘಾಟನೆ

ಕಿನ್ನಿಗೋಳಿ : ಉತ್ಕಷ್ಟ ಮಟ್ಟದ ಜ್ಞಾನ ಸಂಪಾದನೆ, ಸಾಮರಸ್ಯದ ಜೀವನ ಹಾಗೂ ಪರೋಪಕಾರಿ ಮನೋಭಾವನೆ ಬೆಳೆಸಿದಾಗ ಯುವ ಪೀಳಿಗೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು ಎಂದು ರೋಟರಿ 3180 ರ ಜಿಲ್ಲಾ ಗವರ್ನರ್ ಡಾ. ಎಸ್. ಭಾಸ್ಕರ್ ಹೇಳಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಆತಿಥ್ಯದಲ್ಲಿ ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ 8 ಕಂದಾಯ ಜಿಲ್ಲೆಗಳನ್ನೊಳಗೊಂಡ 24ನೇ ಜಿಲ್ಲಾ ಇಂಟರ‍್ಯಾಕ್ಟ್ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.
ಪಠ್ಯ ವಿಷಯಗಳೊಂದಿಗೆ ಪ್ರಾಪಂಚಿಕ ಜ್ಞಾನ,ಆತ್ಮ ಸ್ಥೆರ್ಯ, ಸಹಬಾಳ್ವೆ ಮತ್ತು ಸಹಕಾರ ನಾಯಕತ್ವದ ಗುಣಗಳು ಇಂತಹ ತರಬೇತಿ ಶಿಬಿರಗಳಿಂದ ಹೆಚ್ಚಳವಾಗುತ್ತದೆ ಎಂದರು.
ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಮುಖ್ಯವಾಗಿರಬೇಕಾದ ಸಂಸ್ಕೃತಿ ಹಾಗೂ ಸಂಸ್ಕಾರ ನೀಡುವುದರೊಂದಿಗೆ ಅವರನ್ನು ಭಾವಿ ನಾಯಕರನ್ನಾಗಿ ರೂಪಿಸುವ ಇಂಟರ‍್ಯಾಕ್ಟ್ ಕಾರ್ಯ ಶ್ಲಾಘನೀಯ ಎಂದು ಶುಭಾಶಂಸನೆ ನೀಡಿದರು.
ಮಾಜಿ ರೋಟರಿ ಗವರ್ನರ್ ಎಎಸ್‌ಎನ್ ಹೆಬ್ಬಾರ್ ಶಿಖರೋಪನ್ಯಾಸ ನೀಡಿ, ವಿದ್ಯಾರ್ಥಿಗಳು ಯಾವುದೇ ಕಾರ್ಯದಲ್ಲಿ ಕೀಳರಿಮೆ ಪ್ರದರ್ಶಿಸದೆ ಧನಾತ್ಮಕ ಚಿಂತನೆ ಬೆಳೆಸಿಕೊಂಡಾಗ ಭವಿಷ್ಯದಲ್ಲಿ ಉತ್ತಮ ಗುಣ ಮಟ್ಟದ ನಾಯಕರಾಗಬಹುದು. ವಿದ್ಯೆಗೆ ಶೋಭೆ ನೀಡುವ ಶಿಸ್ತು ಸಂಸ್ಕಾರ ಮನಸ್ಸಿಗೆ ಶಾಂತಿ ಮುದ ನೀಡುವ ನಮ್ಮ ಭಾಷೆ ಸಂಸ್ಕೃತಿಯ ಬಗ್ಗೆ ಹೆಮ್ಮೆಯಿರಬೇಕು ಎಂದರು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇಂಟರ‍್ಯಾಕ್ಟ್ ಜಿಲ್ಲಾ ಸಭಾಪತಿ ಜಗನ್ನಾಥ ಕೋಟೆ ಪ್ರಸ್ತಾವಿಸಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಇಂಟರ‍್ಯಾಕ್ಟ್ ಸಭಾಪತಿ ಜಗನ್ನಾಥ್, ಜಿಲ್ಲಾ ಇಂಟರ‍್ಯಾಕ್ಟ್ ಉಪಸಭಾಪತಿ ಸದಾಶಿವ ಶೆಟ್ಟಿ ಸಹಾಯಕ ಗರ್ವನರ್ ಎಮ್.ಜಿ.ನಾಗೇಂದ್ರ ಜಿಲ್ಲಾ ಇಂಟರ‍್ಯಾಕ್ಟ್ ಪ್ರತಿನಿಧಿ ರೋಹನ್ ಜಿ.ಎಡ್ಕೆ, ನಿರ್ಗಮನ ಜಿಲ್ಲಾ ಇಂಟರ‍್ಯಾಕ್ಟ್ ಪ್ರತಿನಿಧಿ ಶಿಶಿರ್ ಬಾರ್ಕೂರ್, ಇಂಟರ‍್ಯಾಕ್ಟ್ ವಲಯ ಸಂಯೋಜಕರು ಬಾಲಕೃಷ್ಣ ಶೆಟ್ಟಿ ಕಳ್ಳಿಗೆ, ವಲಯ ಸೇನಾನಿ ಶರತ್ ಶೆಟ್ಟಿ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ವೀಣಾ ಶೆಟ್ಟಿ , ಅಧಿವೇಶನ ಸಂಚಾಲಕ ವಲೇರಿಯನ್ ಡಿ ಸೋಜ ಕಿನ್ನಿಗೋಳಿ ರೋಟರಿ ಕ್ಲಬ್ ಇಂಟರ‍್ಯಾಕ್ಟ್ ಸಭಾಪತಿ ಯಶವಂತ ಐಕಳ ಕಿನ್ನಿಗೋಳಿ ರೋಟರಿ ಕ್ಲಬ್ ಕಾರ್ಯದರ್ಶಿ ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.
ಮಾಜಿ ಸಹಾಯಕ ಗರ್ವನರ್‌ಗಳಾದ ಅಶೋಕ್ ಶೆಟ್ಟಿ . ಅಭಿನಂದನ್ ಶೆಟ್ಟಿ, ಜಿನರಾಜ ಸಿ. ಸಾಲ್ಯಾನ್, ಬಿ.ಎಮ್ ಭಟ್, ಪುಂಡಲಿಕ ಮರಾಠೆ, ಜೇಸೀ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್, ಕೃಷ್ಣಮೋಹನ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ವಿದ್ಯಾರ್ಥಿನಿ ಸತ್ಯಪ್ರಜ್ಞಾ ಪ್ರಾರ್ಥಿಸಿದರು, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ವಿಲಿಯಂ ಸಿಕ್ವೇರಾ ಸ್ವಾಗತಿಸಿದರು. ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ವಂದಿಸಿದರು. ರೂಪಶ್ರೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-15091401

 

Comments

comments

Comments are closed.

Read previous post:
Kinnigoli-16091424
ರಕ್ತದಾನ ಶಿಬಿರ

ಕಿನ್ನಿಗೋಳಿ: ಕಿನ್ನಿಗೋಳಿ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಆದರ್ಶ ಬಳಗ ಕೊಡೆತ್ತೂರು, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ, ಬಾಲಗಣೇಶೋತ್ಸವ ಸಮಿತಿ, ಮೂಲ್ಕಿ ವಲಯ ಛಾಯಾಗ್ರಾಹಕರ ಸಂಘಗಳ ಆಶ್ರಯದಲ್ಲಿ ಎ.ಜೆ ಶೆಟ್ಟಿ...

Close