ಬಾಲಿಕಾಶ್ರಮದ ಮಕ್ಕಳಿಗೆ ಬೆಡ್‌ಶೀಟ್ ವಿತರಣೆ

ಮೂಲ್ಕಿ: ಗ್ರಾಮೀಣ ಪ್ರದೇಶದ ಬಡ ಫಲಾನುಭವಿಗಳಿಗೆ ಸಹಕಾರಿಯಾಗಲು ಅಂತರಾಷ್ಟ್ರೀಯ ಲಯನ್ಸ್ ಫೌಂಡೇಶನ್ ಸಹಾಯ ಹಸ್ತ ನೀಡಿದ್ದು ಲಯನ್ಸ್ ಜಿಲ್ಲೆ  317ಡಿ ವ್ಯಾಪ್ತಿಯಲ್ಲಿ ಬರುವ 70 ಕ್ಲಬ್ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳನನ್ನು ಗುರುತಿಸಿ ಸಹಾಯ ನೀಡಲಾಗುವುದು ಎಂದು ಲಯನ್ಸ್ ಗವರ್ನರ್ ಎಚ್.ಎಂ.ಮಂಜುನಾಥ ಮೂರ್ತಿ ಹೇಳಿದರು.
ಭಾನುವಾರ ಮೂಲ್ಕಿ ಸಿ.ಎಸ್.ಐ ಬಾಲಿಕಾಶ್ರಮದ ಮಕ್ಕಳಿಗಾಗಿ ಬೆಡ್‌ಶೀಟ್ ವಿತರಿಸಿದ ಬಳಿಕ ಮಾತನಾಡಿದರು.
ಸಾರ್ವಜನಿಕ ಸೇವಾ ಸಂಸ್ಥೆ ಲಯನ್ಸ್ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು ಇದೀಗ ಲಯನ್ಸ್ ಫೌಂಡೇಶನ್ ಸಹಕಾರದಿಂದ ಇನ್ನೂ ಹೆಚ್ಚಿನ ಯೋಜನೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು ವಹಿಸಿದ್ದರು. ಪ್ರಾಂಥ್ಯೀಯ ಅಧ್ಯಕ್ಷ ಹರೀಶ್ ಪುತ್ರನ್, ಜಿಲ್ಲಾ ಸಂಪುಟ ಸದಸ್ಯರಾದ ಅಶೋಕ್ ಕುಮಾರ್ ಮತ್ತು ಕೇಶವ ಪ್ರಸಾದ್ ಕಾರ್ಯದರ್ಶಿ ವಿಜಯ ಕುಮಾರ್ ಕುಬೆವೂರು, ಕೋಶಾಧಿಕಾರಿ ಎಂಪಿ ಕಾಮತ್ ಮತ್ತು ಮೂಲ್ಕಿ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.

Kinnigoli-15091406

Bhagyavan Sanil

Comments

comments

Comments are closed.

Read previous post:
Kinnigoli-15091405
ಶ್ರದ್ಧಾಂಜಲಿ – ಎಚ್ ನಾರಾಯಣ ಸನಿಲ್

ಮುಲ್ಕಿ: ಹಳೆಯಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಫ್ರೌಢಶಾಲೆ, ಪ್ರಥಮ ದಜೆ ಕಾಲೆಜು ಸ್ತಾಪನೆ, ಪಿ ಸಿ ಎ ಸಹಕಾರಿ ಬ್ಯಾಂಕ್ ಸ್ತಾಪನೆ ಮೂಲಕ ಶಿಕ್ಷಣ ಹಾಗೂ ಸಹಕಾರಿ ರಂಗದಲ್ಲಿ...

Close