ಎಂ. ಸಿ. ಎಫ್ ಮುಚ್ಚುಗಡೆಗೆ ಬಿಡುವುದಿಲ್ಲ

ಕಿನ್ನಿಗೋಳಿ: ಮಂಗಳೂರು ಪಣಂಬೂರಿನಲ್ಲಿರುವ ಎಂ. ಸಿ. ಎಫ್ ಮುಚ್ಚುಗಡೆ ಮಾಡದೆ ಮುಂದಿನ ಕೆಲವು ದಿನಗಳಲ್ಲಿಯೇ ಕಂಪನಿಯ ಅಧಿಕಾರಿ ಹಾಗೂ ಕಾರ್ಮಿಕ ವರ್ಗಗಳ ನಿಯೋಗದೊಂದಿಗೆ ಪ್ರಧಾನಿ ಹಾಗೂ ಎಂದು ಸಚಿವ ಅನಂತ ಕುಮಾರ್ ಅವರಲ್ಲಿ ಸಾಧ್ಯತಾ ಭಾದ್ಯತೆಗಳ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಭಾನುವಾರ ಕಟೀಲು ಮಲ್ಲಿಗೆಯಂಡಿಯಲ್ಲಿ ಎಂ. ಸಿ. ಎಫ್ ಹಾಗೂ ಕೊಡೆತ್ತೂರು ಮೆರವಣಿಗೆ ಸಮಿತಿಯ ಆಶ್ರಯದಲ್ಲಿ ನಡೆದ ಕಣ್ಣಿನ ಶಿಬಿರದಲ್ಲಿ ಭಾಗವಹಿಸಿದ ಸಂದರ್ಭ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಈ ಹಿಂದಿನ ಸರಕಾರ ನಾಪ್ತಾ ಕೊರತೆಯ ನೆಪದಿಂದ ಮುಚ್ಚುಗಡೆಯ ನಿರ್ದಾರ ಮಾಡಿದ್ದು ನರೇಂದ್ರ ಮೋದಿಯವರ ಸರಕಾರ ಆಡಳಿತ ಬಂದ ಬಳಿಕ ಮೂರು ತಿಂಗಳ ಹೆಚ್ಚಿನ ಅವಕಾಶ ನೀಡಲಾಗಿದ್ದು ನಾಪ್ತಾಕ್ಕೆ ಪರ್ಯಾಯವಾಗಿರುವ ದೊರೆಯುವ ಗ್ಯಾಸ್‌ನ ಮೂಲಕ ಕೊರತೆಯನ್ನು ನೀಗಿಸಿ ಕಂಪನಿಯನ್ನು ಪುರ್ನಶ್ಚೇತನಗೊಳಿಸುವಂತೆ ತಿಳಿಸಿಲಾಗಿದೆ. ಎಂದು ತಿಳಿಸಿದರು. ಈ ಸಂದರ್ಭ ಎಂ. ಸಿ. ಎಫ್ ಸಂಸ್ಥೆಯ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಕೆ. ಸೂರ್ಯನಾರಾಯಣರವರ ನೇತೃತ್ವದಲಿ ಸಂಸದರಿಗೆ ಮನವಿ ನೀಡಲಾಯಿತು.
ತಾಕತ್ತಿದ್ದರೆ ಮುಸ್ಲಿಂ ಸೆಮಿ ಸಂಘಟನೆಗೆ ನಿಷೇಧ ಹಾಕಲಿ
ಮುಖ್ಯ ಮಂತ್ರಿಗಳು ಹಿಂದೂ ಪರ ಸಂಘಟನೆಗಳನ್ನು ನಿಷೇಧಿಸುವ ದಿಟ್ಟ ನಿರ್ಧಾರ ಸರಿಯಾಗಿದ್ದಲ್ಲಿ, ತಾಕತ್ತಿದ್ದರೆ ಭಯೋತ್ಪಾದನೆ ಮುಸ್ಲಿಂ ಸಂಘಟನೆಯಾದ ಸೆಮಿ ಸಂಘಟನೆಯನ್ನು ಕೂಡಾ ನಿಷೇಧಿಸಲಿ, ನಕ್ಸಲರನ್ನು ಹಿಡಿಯಲಿ, ಎಂದು ಸಂಸದರು ಕಿಡಿಕಾರಿದರು.

Kinnigoli-15091402

Comments

comments

Comments are closed.

Read previous post:
Kinnigoli-15091401
24ನೇ ಜಿಲ್ಲಾ ಇಂಟರ‍್ಯಾಕ್ಟ್ ಅಧಿವೇಶನ ಉದ್ಘಾಟನೆ

ಕಿನ್ನಿಗೋಳಿ : ಉತ್ಕಷ್ಟ ಮಟ್ಟದ ಜ್ಞಾನ ಸಂಪಾದನೆ, ಸಾಮರಸ್ಯದ ಜೀವನ ಹಾಗೂ ಪರೋಪಕಾರಿ ಮನೋಭಾವನೆ ಬೆಳೆಸಿದಾಗ ಯುವ ಪೀಳಿಗೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು ಎಂದು ರೋಟರಿ 3180 ರ ಜಿಲ್ಲಾ...

Close