ಮೂಲ್ಕಿ ಅಭಿವೃದ್ಧಿಗೆ ಜಿಲ್ಲಾಧಿಕಾರಿಗೆ ನಿಯೋಗ

ಮೂಲ್ಕಿ: ಮೂಲಭೂತ ಸೌಕರ್ಯದಿಂದ ವಂಚಿತಗೊಂಡ ಮೂಲ್ಕಿ ಸಮಸ್ಯೆಗಳಿಗೆ ಸ್ಪಂದಿಸಲು ಸಂಘ ಸಂಸ್ಥೆಗಳ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮೂಲ್ಕಿಯಲ್ಲಿ ವಿಶೇಷ ಸಭೆಯನ್ನು ಸಂಯೋಜಿಸಲು ಶುಕ್ರವಾರ ಕಾರ್ನಾಡು ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಮೂಲ್ಕಿ ವಿವಿಧ ಸಂಘದ ಪ್ರಮುಖ ತೀರ್ಮಾನಿಸಿದರು.
ಮೂಲ್ಕಿ ರೋಟರಿ ಕ್ಲಬ್‌ನ ಅಧ್ಯಕ್ಷ ಜಾಯಲ್ ಹೆರಾಲ್ಡ್ ಡಿ ಸೋಜಾರವರ ಅಧ್ಯಕ್ಷತೆಯಲ್ಲಿ ನಡೆದ ಲಯನ್ಸ್, ಜೇಸಿಐ, ರೋಟರಿ ಕ್ಲಬ್‌ನ ಪ್ರಮುಖರ ಸೌಹಾರ್ದತೆಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ವಿಷಯವನ್ನು ಪ್ರಸ್ತಾಪಿಸಿದ ಅಧ್ಯಕ್ಷರು ಮೂರು ಸಂಸ್ಥೆಗಳು ಸೇರಿಕೊಂಡು ಮೂಲ್ಕಿಯಲ್ಲಿನ ಸಮಸ್ಯೆಗೆ ಸ್ಪಂದಿಸಲು ಸಭೆಯಲ್ಲಿ ಅಭಿಪ್ರಾಯವನ್ನು ಸಂಗ್ರಹಿಸಿದರು.
ಮಂಗಳೂರು, ಉಡುಪಿಯಂತೆ ಸಕಲ ಸೌಕರ್ಯ ಇದ್ದ ಮೂಲ್ಕಿಯಲ್ಲಿ ಹಿನ್ನಡೆ ಆಗಿದೆ,
ಮೂಲ್ಕಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ದೇವಪ್ರಸಾದ ಪುನರೂರು, ಜೇಸಿಐ ಶಾಂಭವಿ ಮೂಲ್ಕಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ವಿಜಯಕುಮಾರ್ ಕುಬೆವೂರು, ಐವನ್ ಡಿಸೋಜಾ, ಜೋವಿನ್ ಪ್ರಕಾಶ್, ಚಂದ್ರಮೋಹನ್ ಅಂಚನ್, ಎನ್.ಪಿ.ಶೆಟ್ಟಿ, ನೋಣಯ್ಯ ರೆಂಜಾಳ, ಜೋನ್ ಡಿ ಸೋಜಾ, ಜಿನರಾಜ್ ಸಾಲ್ಯಾನ್, ಬಾಲಚಂದ್ರ ಸನಿಲ್, ಹರೀಶ್ ಪುತ್ರನ್, ಮುರಳೀಧರ ಭಂಡಾರಿ, ವಿಷ್ಣುಮೂರ್ತಿ, ನರೇಂದ್ರ ಕೆರೆಕಾಡು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪ್ರತಿ ಸಂಸ್ಥೆಯಿಂದ ಮೂರು ಜನರನ್ನು ನಿಯುಕ್ತಿಗೊಳಿಸಿ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮೂಲ್ಕಿಯಲ್ಲಿ ಸಾರ್ವಜನಿಕ ಸಭೆಯನ್ನು ನಡೆಸುವುದೆಂದು ತೀರ್ಮಾನಿಸಲಾಯಿತು. ವಿಲ್‌ಹೆಲ್ಮ್ ಮಾಬೆನ್, ಅಬ್ದುಲ್ ರೆಹಮಾನ್ ಉಪಸ್ಥಿತರಿದ್ದರು.

Kinnigoli-15091403Bhagyavan Sanil

 

Comments

comments

Comments are closed.

Read previous post:
Kinnigoli-15091402
ಎಂ. ಸಿ. ಎಫ್ ಮುಚ್ಚುಗಡೆಗೆ ಬಿಡುವುದಿಲ್ಲ

ಕಿನ್ನಿಗೋಳಿ: ಮಂಗಳೂರು ಪಣಂಬೂರಿನಲ್ಲಿರುವ ಎಂ. ಸಿ. ಎಫ್ ಮುಚ್ಚುಗಡೆ ಮಾಡದೆ ಮುಂದಿನ ಕೆಲವು ದಿನಗಳಲ್ಲಿಯೇ ಕಂಪನಿಯ ಅಧಿಕಾರಿ ಹಾಗೂ ಕಾರ್ಮಿಕ ವರ್ಗಗಳ ನಿಯೋಗದೊಂದಿಗೆ ಪ್ರಧಾನಿ ಹಾಗೂ ಎಂದು ಸಚಿವ...

Close