ಮಲ್ಲಿಗೆಯಂಗಡಿ ಉಚಿತ ನೇತ್ರ ತಪಾಸಣಾ ಶಿಬಿರ

ಕಿನ್ನಿಗೋಳಿ: ಜನಪರ ಸೇವಾ ಕಾರ್ಯಗಳನ್ನು ಸಂಘ ಸಂಸ್ಥೆಗಳು ಹಮ್ಮಿಕೊಂಡಾಗ ಸಮಾಜದ ಮೆಚ್ಚುಗೆಗೆ ಪಾತ್ರವಾಗುತ್ತದೆ ಹಾಗೂ ಸಮಾಜದ ಅಭಿವೃದ್ಧಿಯು ಸಾಧ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಿನ ಎಂ. ಸಿ. ಎಫ್ ಹಾಗೂ ಜೆಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಹಾಗೂ ನವರಾತ್ರಿ ಮೆರವಣಿಗೆ ಸೇವಾ ಸಮಿತಿ ಕೊಡೆತ್ತೂರು ಕಟೀಲು ಇದರ ಆಶ್ರಯದಲ್ಲಿ ಭಾನುವಾರ ಕಟೀಲು ಮಲ್ಲಿಗೆಯಂಗಡಿಯ ನಂದಿನಿ ಸಭಾಭವನದಲ್ಲಿ ನಡೆದ ಉಚಿತ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭ ಹಾರೈಸಿದರು. ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಯುಗಪುರುಷದ ಭುವನಾಭಿರಾಮ ಉಡುಪ ಎಂ. ಸಿ. ಎಫ್ ಹಿರಿಯ ಅಧಿಕಾರಿ ಕೆ. ಪ್ರಭಾಕರ ರಾವ್ ಉಪಸ್ಥಿತರಿದ್ದರು. ಡಾ| ಕೆ. ಯೋಗೀಶ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಸಿದರು. ಗುರುರಾಜ ಮಲ್ಲಿಗೆಯಂಗಡಿ ವಂದಿಸಿದರು.

Kinnigoli-16091401 Kinnigoli-16091402 Kinnigoli-16091403 Kinnigoli-16091404 Kinnigoli-16091405

Photo: Arun Ullanje

Comments

comments

Comments are closed.

Read previous post:
Kinnigoli-15091406
ಬಾಲಿಕಾಶ್ರಮದ ಮಕ್ಕಳಿಗೆ ಬೆಡ್‌ಶೀಟ್ ವಿತರಣೆ

ಮೂಲ್ಕಿ: ಗ್ರಾಮೀಣ ಪ್ರದೇಶದ ಬಡ ಫಲಾನುಭವಿಗಳಿಗೆ ಸಹಕಾರಿಯಾಗಲು ಅಂತರಾಷ್ಟ್ರೀಯ ಲಯನ್ಸ್ ಫೌಂಡೇಶನ್ ಸಹಾಯ ಹಸ್ತ ನೀಡಿದ್ದು ಲಯನ್ಸ್ ಜಿಲ್ಲೆ  317ಡಿ ವ್ಯಾಪ್ತಿಯಲ್ಲಿ ಬರುವ 70 ಕ್ಲಬ್ ವ್ಯಾಪ್ತಿಯಲ್ಲಿ ಅರ್ಹ...

Close