ಇಂಜಿನಿಯರ್ರ್ಸ್ ದಿನಾಚರಣೆ

ಮೂಲ್ಕಿ: ಉನ್ನತ ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ತಮ್ಮ ಆರ್ಥಿಕ ಅಭಿವೃದ್ಧಿಯ ಗುರಿಯೊಂದಿಗೆ ದೇಶದ ಉನ್ನತಿಯತ್ತ ಸೇವೆ ಸಲ್ಲಿಸಿದರೆ ಸರ್ ಎಂ.ವಿಶ್ವೇಶ್ವರಯ್ಯ ರವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಇಂಜಿನಿಯರ್ ಜೀವನ್ ಶೆಟ್ಟಿ ಹೇಳಿದರು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಸೋಮವಾರ ನಡೆದ ಇಂಜೀನಿಯರ‍್ಸ್ ದಿನಾಚರಣೆಯ ಪ್ರಯುಕ್ತ ಶ್ರೀ ನಾರಾಯಣ ಗುರು ಕ್ರೀಯಾ ಸಮಿತಿ ಸದಸ್ಯರಾಗಿ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಕೇವಲ ಅಂಕಗಳಿಕೆಯ ಬಗ್ಗೆ ಮಹತ್ವ ನೀಡುತ್ತಿದ್ದು ಅವರಲ್ಲಿ ಕಾರ್ಯಕ್ಷಮತೆ ಕಡಿಮೆಯಾಗುತ್ತಿರುವುದು ವಿಪರ್ಯಾಸ ಎಂದ ಅವರು ರಜಾ ದಿನಗಳಲ್ಲಿ ತಮ್ಮ ಕಾರ್ಯ ಕ್ಷೇತ್ರಗಳಲ್ಲಿ ತರಬೇತಿ ಪಡೆದಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್ ವಹಿಸಿದ್ದರು. ಈ ಸಂದರ್ಭ ಶಿಕ್ಷಣ ಮುಗಿಸಿ ಉದ್ಯೋಗ ಪಡೆದ ಸದಸ್ಯರಾದ ಪ್ರಜ್ಞಾ ಮತ್ತು ಮನೋಜ್ ರವರನ್ನು ಗೌರವಿಸಲಾಯಿತು.
ಅತಿಥಿಗಳಾಗಿ ಮೂಲ್ಕಿ ಪ್ರದೇಶದ ಇಂಜಿನಿಯರ್ ರವರಾದ ಹರಲೋಚನ್, ಶರತ್ ಗುತ್ತಿಗೆದಾರರಾದ ಯೋಗೀಶ್ ಕೋಟ್ಯಾನ್,ಶ್ರೀ ನಾರಾಯಣ ಗುರು ಸೇವಾದಳದಳದ ಅಧ್ಯಕ್ಷ ಸತೀಶ್ ಅಂಚನ್, ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಸರೋಜಿನಿ ಸುವರ್ಣ,ಗೌ,ಕಾರ್ಯದರ್ಶಿ ರಮೇಶ ಕೊಕ್ಕರಕಲ್ ಉಪಸ್ಥಿತರಿದ್ದರು.
ಹರಿಶ್ಚಂದ್ರ ಸಾಲ್ಯಾನ್ ಸ್ವಾಗತಿಸಿದರು. ನೆರೇಂದ್ರ ಕೆರೆಕಾಡು ನಿರೂಪಿಸಿದರು.ರಮೇಶ್ ಅಮೀನ್ ವಂದಿಸಿದರು.

Kinnigoli-16091412

Bhagyavan Sanil

Comments

comments

Comments are closed.

Read previous post:
Kinnigoli-16091411
ರಾಷ್ತ್ರೀಯ ಕುಟುಂಬ ಪರಿಹಾರ ಧನ ಸಹಾಯ

ಮುಲ್ಕಿ: ರಾಷ್ತ್ರೀಯ ಕುಟುಂಬ ಪರಿಹಾರ ಧನ ಮತ್ತು ಮುಖ್ಯ ಮಂತ್ರಿಯವರ ಪರಿಹಾರ ನಿಧಿಯಲ್ಲಿ ಹಳೆಯಂಗಡಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಲ್ಕಿ ಹೋಬಳಿಯ ಫಲಾನುಭವಿಗಳಾದ ಕುಸುಮಾ, ಲೀಲಾವತಿ, ಸುಮಲತಾ, ಶೋಭಾ, ಆಶಾ...

Close