ಸನಿಲ್ ರವರು ನಮಗೆಲ್ಲರಿಗೂ ಮಾದರಿ

ಮುಲ್ಕಿ: ಸನಿಲ್ ರವರ ಜೀವನವು ನಮಗೆಲ್ಲರಿಗೂ ಮಾದರಿಯಾಗಿದ್ದು, ತನ್ನ ಜೀವಿತಾವಧಿಯಲ್ಲಿ ಅನುಸರಿಸಿದ ತತ್ವ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದು ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ ಯವರು ನುಡಿದರು.
ಅವರು ಮುಲ್ಕಿ ಬಪ್ಪನಾಡು ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸನಿಲ್ ರವರ ಶ್ರದ್ದಾಂಜಲಿ ಸಭೆಯಲ್ಲಿ ಈ ಮೇಲಿನಂತೆ ನುಡಿನಮನ ಸಲ್ಲಿಸಿದರು. ಸಭೆಯಲ್ಲಿ ಮುಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಮತ್ತು ನಮ್ಮ ಟಿವಿಯ ನವೀನ್ ಶೆಟ್ಟಿ ಎಡ್ಮೆಮಾರ್ ರವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಶೋಕ್ ಕುಮಾರ್ ಶೆಟ್ಟಿ ಚೆನ್ನೈ, ಅರವಿಂದ ಪೂಂಜ, ಮನೋಹರ್ ಶೆಟ್ಟಿ, ಡಾ| ದೇವಿ ಪ್ರಸಾದ್ ಶೆಟ್ಟಿ ಬೆಳಪು, ಮಾಧವ ತಿಂಗಳಾಯ, ಎಂ. ವಿಶ್ವನಾಥ ಭಟ್, ಬಂಟರ ಸಂಘ ಮುಂಬಾ ಮಾಜಿ ಅಧ್ಯಕ್ಷರಾದ ಭುಜಂಗ ಶೆಟ್ಟಿ, ಪ್ರಕಾಶ್ ಶೆಟ್ಟಿ ಸುಮನಿಲಯ, ಸುನೀಲ್ ಕುಮಾರ್ ಶೆಟ್ಟಿ ಬೆಂಗಳೂರು, ಸುಬ್ಬಯ್ಯ ಶೆಟ್ಟಿ ಮಂಗಳೂರು,  ಅನಿಶ್ ಕುಮಾರ್ ಮೆಲಾಂಟ, ಪಂಜದ ಗುತ್ತು ಶಾಂತಾರಾಮ ಶೆಟ್ಟಿ, ಬಿ. ಸೂರ‍್ಯಕುಮಾರ್, ಎಚ್. ವಸಂತ ಬೆರ್ನಾರ್ಡ್, ಡಾ| ಗಣೇಶ್ ಅಮೀನ್ ಸಂಕಮಾರ್, ಶಶೀಂದ್ರ ಎಂ. ಸಾಲ್ಯಾನ್, ಗಿರಿಜವ್ವ ಮೆಣಸಿನಕಾಯಿ, ಗಣೇಶ್ ಬಂಗೇರ, ವಿಜಯಕುಮಾರ್ ಸನಿಲ್ ಮೊದಲಾದವರು ಭಾಗವಹಿಸಿದರು. ಸುಷ್ಮಾ ತಾರನಾಥ್ ರವರು ಕಾರ್ಯಕ್ರಮ ನಿರೂಪಿಸಿದರು.

Kinnigoli-16091419

Comments

comments

Comments are closed.

Read previous post:
Kinnigoli-16091412
ಇಂಜಿನಿಯರ್ರ್ಸ್ ದಿನಾಚರಣೆ

ಮೂಲ್ಕಿ: ಉನ್ನತ ತಾಂತ್ರಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ತಮ್ಮ ಆರ್ಥಿಕ ಅಭಿವೃದ್ಧಿಯ ಗುರಿಯೊಂದಿಗೆ ದೇಶದ ಉನ್ನತಿಯತ್ತ ಸೇವೆ ಸಲ್ಲಿಸಿದರೆ ಸರ್ ಎಂ.ವಿಶ್ವೇಶ್ವರಯ್ಯ ರವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು...

Close