ಸದಸ್ಯರಿಗೆ ತರಬೇತಿ ಕಾರ್ಯಕ್ರಮ

ಮೂಲ್ಕಿ: ಪ್ರೋತ್ಸಾಹದಿಂದ ಮಾತ್ರ ಸುಪ್ತ ಪ್ರತಿಭೆ ಹೊರ ಹೊಮ್ಮಲು ಸಾಧ್ಯವಿದ್ದು ಮಕ್ಕಳಿ ಸೃಜನಶೀಲತೆಗಾಗಿ ವೇದಿಕೆ ನಿರ್ಮಿಸಿ ಮಾರ್ಗದರ್ಶನ ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಪ್ರಯತ್ನಿಸುವುದು ಸೇವಾ ಸಂಘಟನೆಗಳ ಕರ್ತವ್ಯ ಎಂದು ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕಿ ಮಧುಬಾಲಾ ಹೇಳಿದರು.
ಮುಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಗ್ರಹದಲ್ಲಿ ಸಂಘದ ಶ್ರೀ ನಾರಾಯಣ ಗುರು ಕ್ರಿಯಾ ಸಮಿತಿಯ ಸದಸ್ಯರಿಗೆ ಭಾನುವಾರ ಜರಗಿದ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಯೋಗಾಸನದಲ್ಲಿ ರಾಷ್ತ್ರೀಯ ಮಟ್ಟ್ಡದಲ್ಲಿ ಸಾzsನೆಗೈದ ಪ್ರಣೀಕ್ ರನ್ನು ಸನ್ಮಾನಿಸಲಾಯಿತು.ಬಳಿಕ ಪ್ರಣೀಕ್ ರವರಿಂದ ಯೋಗಾಸನ ಪ್ರದರ್ಶನ ನಡೆಯಿತು.
ಮುಲ್ಕಿ ಬಿಲ್ಲವ ಸಂಘದ ಉಪಾಧ್ಯಕ್ಷರಾದ ವಾಸು ಪೂಜಾರಿ,ಗೋಪಿನಾಥ ಪಡಂಗ,ಕಾರ್ಯದರ್ಶಿ ರಮೇಶ್ ಕೊಕ್ಕರ್ ಕಲ್,ಕೋಶಾಧಿಕಾರಿ ಪ್ರಕಾಶ್ ಸುವರ್ಣ,ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಸರೋಜಿನಿ ಸುವರ್ಣ ಉಪಸ್ಥಿತರಿದ್ದರು.

Kinnigoli-16091408

Bhagyavan Sanil

 

Comments

comments

Comments are closed.

Read previous post:
Kinnigoli-16091407
ನವರಾತ್ರಿ ಮೆರವಣಿಗೆಯ ಕಛೇರಿ ಉದ್ಘಾಟನೆ

ಕಿನ್ನಿಗೋಳಿ: ಕೊಡೆತ್ತೂರು ನವರಾತ್ರಿ ಮೆರವಣಿಗೆ ಸಮಿತಿಯ ಸುವರ್ಣ ಮಹೋತ್ಸವದ ಪ್ರಯುಕ್ತ ಕಟೀಲಿನಲ್ಲಿ ಸಮಿತಿಯ ಕಛೇರಿಯನ್ನು ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ದೀಪ ಬೆಳಗಿಸಿ ಕಛೇರಿ ಉದ್ಘಾಟಿಸಿದರು. ಈ...

Close