ಸಂಘಟನಾ ಶಕ್ತಿಯೊಂದಿಗೆ ಜೀವನದಲ್ಲಿ ಯಶಸ್ಸು

ಕಿನ್ನಿಗೋಳಿ: ಸಂಘಟನಾ ಶಕ್ತಿಯೊಂದಿಗೆ ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಹಾಗೂ ಗೌರವ ಕಾಣಲು ಸಾಧ್ಯ ಎಂದು ದ.ಕ ಮತ್ತು ಉಡುಪಿ ಜಿಲ್ಲಾ ಸೌತ್ ಕೆನರಾ ಪೋಟೋಗ್ರಾಫರ‍್ಸ್ ಎಸೋಸಿಯೇಶನ್ ಜಿಲ್ಲಾಧ್ಯಕ್ಷ ವಾಸುದೇವ ರಾವ್ ಹೇಳಿದರು.
ಕಿನ್ನಿಗೋಳಿ ರಾಜಾಂಗಣದಲ್ಲಿ ಬುಧವಾರ ನಡೆದ ಸೌತ್ ಕೆನರಾ ಪೋಟೋಗ್ರಾಪರ‍್ಸ್ ಎಸೋಸಿಯೇಶನ್ ಮೂಲ್ಕಿ ವಲಯದ ಮಹಾ ಸಭೆಯಲ್ಲಿ ಮಾತನಾಡಿದರು.
ಮಉಲ್ಕಿ ವಲಯದ ಅಧ್ಯಕ್ಷ ನವೀನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಹರ್ಷಾಕರ್, ಉಪಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್, ಕರುಣಾಕರ ಗೌಡ, ಕೋಶಾಧಿಕಾರಿ ಜಗನ್ನಾಥ ಶೆಟ್ಟಿ ಉಪಸ್ಥಿತರಿದ್ದರು.
ಮುಲ್ಕಿ ವಲಯ ಅಧ್ಯಕ್ಷ ನವೀನ್ ಕುಮಾರ್ ಸ್ವಾಗತಿಸಿ ಕಾರ್ಯದರ್ಶಿ ಕೆ.ಬಿ.ಸುರೇಶ್ ವರದಿ ಮಂಡಿಸಿದರು, ಯೋಗೀಶ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.

Kinnigoli-18091402

Comments

comments

Comments are closed.

Read previous post:
Kinnigoli-18091403
ಆಗ್ನೆಸ್ ರಾಡ್ರಿಗಸ್

ಮೂಲ್ಕಿ: ಮೂಲ್ಕಿ ರೋಡ್ರಿಗಸ್ ಕಂಪೌಂಡು ನಿವಾಸಿ ಆಗ್ನೆಸ್ ರಾಡ್ರಿಗಸ್(92) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಮೃತರಾಗಿದ್ದಾರೆ.

Close