ಬಳ್ಕುಂಜೆ ಸ್ವಾಸ್ಥ್ಯ ಸಂಕಲ್ಪ

ಕಿನ್ನಿಗೋಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ವೇದಿಕೆ ಇವರ ಆಶ್ರಯದಲ್ಲಿ ಬಳ್ಕುಂಜೆ ಸಂತ ಪೌಲರ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಯುಗಪುರುಷದ ಭುವನಾಭಿರಾಮ ಉಡುಪರು ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷೆ ಮಮತಾ ಡಿ. ಪೂಂಜ ಅಧ್ಯಕ್ಷತೆವಹಿಸಿದ್ದರು. ವಹಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಉಮೇಶ ರಾವ್ ಎಕ್ಕಾರುರವರು ಮಾಹಿತಿ ನೀಡಿದರು. ಈ ಸಂದರ್ಭ ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಕರುಣಾಕರ ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ, ಸಂತ ಪೌಲರ ಪ್ರೌಢಶಾಲಾ ಶಿಕ್ಷಕ ಸಿಲ್ವಾ ಮಿನೆಜಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉದಯ ನಾಯ್ಕ ಜಯಲಕ್ಷ್ಮೀ, ಪ್ರವೀಣ್, ಧ.ಗ್ರಾ.ಯೋ. ಕಿನ್ನಿಗೋಳಿ ವಲಯ ಮೇಲ್ವಿಚಾರಕ ಸತೀಶ್ ಉಪಸ್ಥಿತರಿದ್ದರು.

Kinnigoli-19091403

Comments

comments

Comments are closed.

Read previous post:
Kinnigoli-19091402
ಅನಂತರಾಯ ಕಾಮತ್

ಮೂಲ್ಕಿ :  ಪ್ರಗತಿ ಪರ ಕೃಷಿಕ ಮೂಲ್ಕಿ ಕಕ್ವ ನಿವಾಸಿ ಅನಂತರಾಯ ಕಾಮತ್(75ವರ್ಷ)ಅಲ್ಪ ಸಮಯದ ಅಸೌಖ್ಯದಿಂದ ಸ್ವಗ್ರಹದಲ್ಲಿ ಬುಧವಾರ ನಿಧನರಾದರು. ಉತ್ತಮ ಹೃದಯವಂತಿಗೆಯ ಮಾದರಿ ವ್ಯಕ್ತಿತ್ವದ ಅವರು...

Close