ಮೀನುಗಾರಿಕ ಫೆಡರೇಶನ್ ಅಧ್ಯಕ್ಷ ಕಿನ್ನಿಗೋಳಿ ಮಾರುಕಟ್ಟೆಗೆ ದಿಢೀರ್ ಭೇಟಿ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 70 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಮಾರುಕಟ್ಟೆ ಕಟ್ಟಡಕ್ಕೆ ಮೀನುಗಾರಿಕ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಶುಕ್ರವಾರ ದಿಢೀರ್ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಮೀನು ಮಾರುಕಟ್ಟೆಯ ಪ್ರವೇಶ ದ್ವಾರದ ಒಂದು ಬದಿಯಲ್ಲಿ ಇತರ ವ್ಯಾಪಾರಕ್ಕೆ ಸಂಬಂಧಪಟ್ಟ ಅಂಗಡಿಗಳಿದ್ದು ಆದ್ದರಿಂದ ಮೀನಿನ ವಾಹನ ಮೀನು ಮಾರುಕಟ್ಟೆ ಸಮೀಪ ಬರಲು ಕಷ್ಟ ಸಾಧ್ಯವಾಗಿದೆ. ಈ ಅಂಗಡಿಗಳನ್ನು ತೆರವುಗೊಳಿಸಿ ಮಾರುಕಟ್ಟೆಯ ಇತರ ಕಡೆಗಳಲ್ಲಿ ಸ್ಥಳವಕಾಶ ಕಲ್ಪಿಸಿ ಮೀನುಗಾರಿಕ ವಾಹನ ಸಾಗಲು ನೇರ ಸಂಪರ್ಕ ರಸ್ತೆ ನಿರ್ಮಾಣ ಮಾಡುವಂತೆ ಕಿನ್ನಿಗೋಳಿ ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ನೀಡಲಾಗಿದ್ದು ಅಲ್ಲದೆ ಮಾರುಕಟ್ಟೆಯ ಒಳಗೆ ಒಂದು ಬದಿಯಲ್ಲಿ ಮಾಂಸ ಮಾರಾಟದ ಅಂಗಡಿಗಳಿದ್ದು ಇದರಿಂದ ಮೀನು ಮಾರುಕಟ್ಟೆಯ ಒಳಗೆ ಸಾಗಲು ಇಕ್ಕಟ್ಟಾದ ಸನ್ನಿವೇಶ ಬಂದೊಗಿದೆ ಇದಕ್ಕೂ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಮೀನು ಮಾರಾಟಗಾರರ ಪರವಾಗಿ ಅಹಲ್ಯಾ , ವಿಶಾಲ, ಗೀತಾ ತಮ್ಮ ಸಮಸ್ಯೆಗಳನ್ನು ಫೆಡರೇಶನ್ ಅಧ್ಯಕ್ಷರಲ್ಲಿ ನಿವೇದಿಸಿಕೊಂಡರು.
ಈ ಬಗ್ಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಬಳಿ ಮಾತುಕತೆ ನಡೆಸಲಾಯಿತು.
ಸರಕಾರದ ಹಣ ಪೋಲಾಗಬಾರದು, ಉತ್ತಮ ನೀರು, ಚರಂಡಿ ವ್ಯವಸ್ಥೆ ಹಾಗೂ ನೈರ್ಮಲ್ಯತೆ ಬಗ್ಗೆ ಗಮನಕೊಟ್ಟು ಸರಿಪಡಿಸಬೇಕಾಗಿದೆ ಎಂದು ಮೀನುಗಾರಿಕ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ತಿಳಿಸಿದರು.
ಮೀನುಗಾರಿಕ ಫೆಡರೇಶನ್ ನಿರ್ದೆಶಕ ಸುಧೀರ್ ಶ್ರೀಯಾನ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಉಪಾಧ್ಯಕ್ಷ ಜಾನ್ಸನ್ ಡಿಸೋಜ, ಪಿಡಿಒ ಪ್ರದೀಪ್ ಡಿಸೋಜ , ಗ್ರಾ. ಪಂ. ಸದಸ್ಯ ಸಂತಾನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Kinnigoli-19091408

Comments

comments

Comments are closed.

Read previous post:
Kinnigoli-19091405
ಪೋಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಿ

ಕಿನ್ನಿಗೋಳಿ: ಫೋಷಕರು ತಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರವನ್ನು ಬೆಳೆಸಿದಾಗ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಎಂದು ಬ್ರದರ್ ಹೆಕ್ಟರ್ ಹೇಳಿದರು. ಮಂಗಳವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ...

Close