ಹಳೆಯಂಗಡಿ: ರೈಲಿನಡಿಗೆ ಬಿದ್ದು ಸಾವು

ಮೂಲ್ಕಿ: ಹಳೆಯಂಗಡಿ ಸಮೀಪದ ಇಂದಿರಾನಗರದ ಬಳಿಯಲ್ಲಿ ಗುರುವಾರ ಬೆಳಿಗ್ಗೆ 10.30ರ ಸುಮಾರಿಗೆ ವ್ಯಕ್ತಿಯೊಬ್ಬ ರೈಲಿನಡಿಗೆ ಬಿದ್ದು ಮೃತ ಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ವಾಮಂಜೂರು ಪಿಲಿಕುಲ ನಿವಾಸಿ ಸಲೀಂ(45) ಎಂದು ಗುರುತಿಸಲಾಗಿದೆ. ಇವರು ಸಂಬಂದಿಕರಾದ ಸ್ಥಳಿಯ ನಿವಾಸಿ ಅನ್ವರ್ ಎಂಬವರ ಮನೆಯಲ್ಲಿ ಕಳೆದ ಐದು ವರ್ಷಗಳಿಂದ ವಾಸವಾಗಿದ್ದು ಬಲೂನು ಮಾರಾಟದ ವೃತ್ತಿ ನಡೆಸುತ್ತಿದ್ದರು. ವಾಮಂಜೂರಿನ ಪಿಲಿಕುಲದಲ್ಲಿ ಇವರ ಪತ್ನಿ ಮನೆಯಿದ್ದು ಗುರುವಾರ ಬೆಳಗ್ಗೆ ಅಲ್ಲಿಂದ ಅನ್ವರ್ ಮನೆಗೆ ಬಂದು 9.30 ಗಂಟೆಗೆ ಇಂದಿರಾನಗರದ ಮನೆಯಿಂದ ಹೊರಟು ಹಳೆಯಂಗಡಿ ಪೇಟೆಗೆ ನಡೆದುಕೊಂಡು ಬರುವಾಗ ಈ ದುರ್ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಮೃತರು ಪತ್ನಿ ಸಹಿತ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೂಲ್ಕಿ ಪೋಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.

Puneethkrishna

Kinnigoli-19091401

 

Comments

comments

Comments are closed.

Read previous post:
Kinnigoli-18091405
Shri Vishwakarma Pooja Mahotsav-2014,

Bahrain : Shri Vishwakarma Pooja Mahotsav-2014, To be held in Bahrain. KB JAGDISH ACHAR Founder President SHRI VISHWAKARMA SEVA BALAGA Kingdom...

Close