ದಿ. ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ

ಕಿನ್ನಿಗೋಳಿ: ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ, ಪ್ರಶಸ್ತಿ ಪ್ರದಾನ, ಸನ್ಮಾನ ಸಮಾರಂಭ ಶನಿವಾರ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ನಡೆಯಿತು.
ಮಂಗಳೂರು ಎ. ಜೆ. ಆಸ್ಪತ್ರೆಯ ನಿರ್ದೇಶಕ ಎ.ಜೆ. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಿರ್ವ ಸೈಂಟ್ ಮೇರೀಸ್ ಕಾಲೇಜು ಉಪನ್ಯಾಸಕ ಡಾ| ರಾಧಾಕೃಷ್ಣ ಭಟ್ ಪೆರ್ಲ ಅವರು ಸಂಸ್ಮರಣಾ ಭಾಷಣಗೈದರು.
ಅರ್ಚಕರ ನೆಲೆಯಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಪ್ರಧಾನ ಅರ್ಚಕ
ವೇ. ಮೂ. ನರಸಿಂಹ ಉಪಾಧ್ಯಾಯ, ಮೊಕ್ತೇಸರರ ನೆಲೆಯಲ್ಲಿ ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಳದ ಆನುವಂಶಿಕ ಮೊಕ್ತೇಸರ ಸುದರ್ಶನ ಶೆಟ್ಟಿ ಹಾಗೂ
ಕಲಾವಿದರ ನೆಲೆಯಲ್ಲಿ ಕಟೀಲು ಮೇಳದ ಸುರೇಶ ಕುಪ್ಪೆಪದವು ಅವರನ್ನು ಸನ್ಮಾನಿಸಲಾಯಿತು.
ಕದ್ರಿ ಬಳಗದ ಕೊಡುಗೆಯಾಗಿ ಕಟೀಲು ಮೇಳದ ಕಲಾವಿದ ಮಂಜುನಾಥ ಭಟ್ ಅವರಿಗೆ ದಿ. ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಯಕ್ಷಲಹರಿಯ ಇ. ಶ್ರೀನಿವಾಸ ಭಟ್, ಎಂ.ಸಿ.ಎಫ್‌ನ ಪ್ರಭಾಕರ ರಾವ್, ಬಜಪೆ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ಎ.ಪಿ.ಎಂ.ಸಿ. ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಶಂಕರನಾರಾಯಣ ಭಟ್ ಅವರನ್ನು ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮೂಡಬಿದ್ರಿಯ ಉದ್ಯಮಿ ಶ್ರೀಪತಿ ಭಟ್, ಮರವೂರು ಜಗದೀಶ ಶೆಟ್ಟಿ, ಭಂಡಾರಿ ಮಹಾಮಂಡಲದ ಅಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಮುಂಬೈ ಉದ್ಯಮಿಗಳಾದ ಐಕಳ ಗಣೇಶ್ ಶೆಟ್ಟಿ, ಭುಜಂಗ ಶೆಟ್ಟಿ, ನೀಲೇಶ್ ಶೆಟ್ಟಿಗಾರ್, ಲೀಲಾಕ್ಷ ಕರ್ಕೇರಾ, ಯುಗಪುರುಷ ಪ್ರಧನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಜಯಂತಿ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಕದ್ರಿ ನವನೀತ ಶೆಟ್ಟಿ, ದೊಡ್ಡಯ್ಯ ಮೂಲ್ಯ, ಮೋಹನ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
ಸಂಘಟಕ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ರಮ್ಯಾ ಆಸ್ರಣ್ಣ ಅವರು ಕಾರ್ಯಕ್ರಮ ನಿರೂಪಿಸಿದರು.

Kinnigoli-21091402

Comments

comments

Comments are closed.

Read previous post:
Kinnigoli-19091408
ಮೀನುಗಾರಿಕ ಫೆಡರೇಶನ್ ಅಧ್ಯಕ್ಷ ಕಿನ್ನಿಗೋಳಿ ಮಾರುಕಟ್ಟೆಗೆ ದಿಢೀರ್ ಭೇಟಿ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು 70 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಮಾರುಕಟ್ಟೆ ಕಟ್ಟಡಕ್ಕೆ ಮೀನುಗಾರಿಕ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಶುಕ್ರವಾರ ದಿಢೀರ್...

Close