ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮೂಲ್ಕಿ : ಮುಂಡಾಳ ಸಮಾಜ ಅರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಡರಾಗಬೇಕು, ಈ ಹಿನ್ನಲೆಯಲ್ಲಿ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಶ್ಲಾಘನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.  ಮೂಲ್ಕಿ ಗೇರುಕಟ್ಟೆ ಒಂಬತ್ತು ಮಾಗಣೆಯ ಮುಂಡಾಳ ( ಪ. ಜಾ) ಶಿವ ಸಮಾಜ ಸೇವಾ ಸಂಘದ ಮಾಗಣೆಯ ಮುಂಡಾಳ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾಗಣೆಯ ಗುರಿಕಾರರನ್ನು ಹಾಗೂ ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರರವರನ್ನು ಸಮ್ಮಾನಿಸಲಾಯಿತು. ಶಿವಸಮಾಜ ಸೇವಾ ಸಂಘದ ಅಧ್ಯಕ್ಷ ಮಾಧವ ಕೆ ಅಧ್ಯಕ್ಷತೆವಹಿಸಿದ್ದರು. ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಬಂದರು ಕೆನರಾ ಬ್ಯಾಂಕ್ ಶಾಖೆಯ ಹಿರಿಯ ಪ್ರಬಂಧಕ ಭೋಜ ಅಮೀನ್ ಬ್ಯಾಂಕ್‌ನಿಂದ ದೊರಕುವ ಸವಲತ್ತು , ಶೈಕ್ಷಣಿಕ ಸಾಲದ ಬಗ್ಗೆ ಮಾಹಿತಿ ನೀಡಿದರು. ಗುರಿಕಾರ ವೆಂಕಪ್ಪ ಅಮೀನ್, ಯುವಕ ಸಂಘದ ತಿಲಕನಾಥ್, ಮಹಿಳಾ ಮಂಡಲದ ಪ್ರೀತಿಲತಾ, ಶೇಖರ ಗುರಿಕಾರ, ಗೌರವ ಅಧ್ಯಕ್ಷ ದೇಜಪ್ಪ , ಉಪಾಧ್ಯಕ್ಷ ಶ್ರೀಧರ ಪಕ್ಷಿಕೆರೆ ಮತ್ತಿತರಿದ್ದರು. ಪ್ರಧಾನ ಕಾರ್ಯದರ್ಶಿ ಕೆ. ಸಚ್ಚಿದಾನಂದ ಪ್ರಸ್ತಾವನೆ ಸಂಘ ನಡೆದು ಬಂದ ವಿವರ ನೀಡಿದರು. ಕಾರ್ಯದರ್ಶಿ ರವಿ ಕುಮಾರ್ ವಿ. ಎಸ್ ಸ್ವಾಗತಿಸಿದರು. ರವೀಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Kinnigoli-21091401

Comments

comments

Comments are closed.

Read previous post:
Kinnigoli-21091403
ಕನ್ನಡಕ ವಿತರಣೆ

ಕಿನ್ನಿಗೋಳಿ : ದಕ್ಷಿಣ ಕನ್ನಡ ಅಂಧರ ಸೇವಾ ಸಂಘ ಮತ್ತು ಮುಲ್ಕಿ ಬಂಟರ ಸಂಘ ಮಹಿಳಾ ವಿಭಾಗದ ಆಶ್ರಯದಲ್ಲಿ ಅಂಧರ ಸೇವಾ ಸಂಘದ ೧೯೩ ನೇ ನೇತ್ರ ತಪಾಸಣಾ...

Close