ಮರ ಬಿದ್ದು ಮನೆಗೆ ಹಾನಿ

ಮೂಲ್ಕಿ:  ಕಿಲ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೆಪ್ಪುಣಿಗುತ್ತು ಪಾಡಿಮನೆ ನಿವಾಸಿ ಭಾಸ್ಕರ ಆಚಾರ‍್ಯ ಎಂಬವರ ಮನೆಯ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಶನಿವಾರ ರಾತ್ರಿ ಬೀಸಿದ ಗಾಳಿಗೆ ಈ ಘಟನೆ ಸಂಭವಿಸಿದ್ದು ಮನೆ ಭಾಗಶ ಹಾನಿಯಾಗಿದೆ. ಮೊಯಿಲೊಟ್ಟಿನಲ್ಲಿ ರಿಕ್ಷಾ ಚಾಲಕರಾಗಿದ್ದುಕೊಂಡು ಜೀವನ ನಡೆಸುತ್ತಿರುವ ಭಾಸ್ಕರ ಆಚಾರ‍್ಯ ಬಡ ಕುಟುಂಬವಾಗಿದ್ದು ಮನೆ ಹಾನಿಯಿಂದ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಕಿಲ್ಪಾಡಿ ಪಂಚಾಯತಿ ಅಧ್ಯಕ್ಷರು ಭೇಟಿ ನೀಡಿ ಪರಿಶೀಲಿಸಿದ್ದಾರೆ .

PuneethKrishna

Kinnigoli-21091405

Comments

comments

Comments are closed.

Read previous post:
Kinnigoli-21091404
ಮಲ್ಲಿಗೆಯಂಗಡಿ ಪರಿಸರ ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ ವಲಯದ ನಡುಗೋಡು ಒಕ್ಕೂಟ, ಕೊಡೆತ್ತೂರು ನವರಾತ್ರಿ ಸೇವಾ ಸಮಿತಿ ಹಾಗೂ ಮಲ್ಲಿಗೆಯಂಗಡಿ ನಂದಿನಿ ಯುವಕ ಮತ್ತು ಯುವತಿ ಆಶ್ರಯದಲ್ಲಿ...

Close