ಪೂರಕ ಪೌಷ್ಠಿಕ ಆಹಾರ ಸಪ್ತಾಹ ಹಾಗೂ ಸ್ಪರ್ಧೆ

ಎಕ್ಕಾರು: ಮಕ್ಕಳ ಬವಿಷ್ಯದ ಬದುಕು ರೂಪಿಸುವಲ್ಲಿ ಗುರುವಿನ ಹಾಗೂ ಮಾತೆಯ ಪಾತ್ರ ಮಹತ್ತರವಾದುದು. ಅವರನ್ನು ಸಾಮಾಜಿಕ ಜಾಗೃತಿ ಮೂಡಿಸಿ, ಪ್ರತಿಭೆಗಳನ್ನು ಅನಾವರಣಗೊಳಿಸಿ ನಾಡಿನ ಆಸ್ತಿಯನ್ನಾಗಿ ಮಾರ್ಪಡಿಸುವ ಕಾಯಕದಲ್ಲಿ ಬದುಕಿನ ದಾರಿಯ ಓರೆ-ಕೋರೆಗಳನ್ನು ಬಾಲ್ಯಾದಿಂದಲೇ ಕೆಲಸವನ್ನು ಶಿಕ್ಷಕರು ಸಮರ್ಥವಾಗಿ ನಿರ್ವಹಿಸಿದಾಗ ಕೌಟುಂಬಿಕ ಹಾಗೂ ಸಾಮಾಜಿಕ ಸಮತೋಲನ ಕಾಪಾಡಬಹುದು ಎಂದು ಕಟೀಲು ಶ್ರೀ ದುರ್ಗಾಪರಮೆಶ್ವರೀ ದೇವಳದ ಅರ್ಚಕ ಕೆ. ಲಕ್ಷ್ಮೀ-ನಾರಾಯಣ ಆಸ್ರಣ್ಣ ಅವರು ಹೇಳಿದರು.
ಅವರು ಎಕ್ಕಾರು-ಕೆಂಚಗುಡ್ದೆ ಅಂಗನವಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಎಕ್ಕಾರು ಅಂಗನವಾಡಿ ಆಶ್ರಯದಲ್ಲಿ ಜರಗಿದ ಪೂರಕ ಪೌಷ್ಠಿಕ ಆಹಾರ ಸಪ್ತಾಹ, ಪೌಷ್ಠಿಕ ಆಹಾರ ಸ್ಪರ್ಧೆ -ಪ್ರಾತ್ಯಕ್ಷಿಕೆ ಹಾಗೂ ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನವಿತ್ತರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನ ಮೆಚ್ಚಿದ ಶಿಕ್ಷಕಿ ಸಾಹಿತಿ, ನಿವೃತ್ತಿ ಉಪಪ್ರಾಚಾರ್ಯ ಉಮೇಶ್ ರಾವ್ ಎಕ್ಕಾರು ಅವರಿಗೆ ಗುರುವಂದನೆ ಗೌರವ ಸಲ್ಲಿಸಲಾಯಿತು. ಲಕ್ಷೀನಾರಾಯಣ ಆಸ್ರಣ್ಣ ಅವರು ವರ್ಷಂಪ್ರತಿ ಅಂಗನವಾಡಿ ಅವಶ್ಯಕ ಕೊಡುಗೆಗಳನ್ನು ನೀಡುತ್ತಿದ್ದು ಈ ಬಾರಿ ಕಾಬಾಟು ಕೊಡುಗೆ ಹಸ್ತಾಂತರಿಸಿದರು.
ತಾಯಂದಿರು ನಿಸರ್ಗದತ್ತ ಆಹಾರ ಸಾಮಾಗ್ರಿಗಳಿಂದ ತಾವೇ ತಯಾರಿಸಿದ ನಾನಾ ಬಗೆಯ ಪೌಷ್ಠಿಕ ಆಹಾರಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚಂದ್ರಪ್ರಭಾ ಸ್ಪರ್ಧೆಯ ತೀರ್ಪುಗಾರರಾಗಿ ಪಾಲ್ಗೊಂಡು ಅವರು ಪೌಷ್ಠಿಕ ಆಹಾರ ತಯಾರಿಕೆ ಬಳಕೆ – ಉಪಯುಕ್ತತೆಗಳ ಬಗ್ಗೆ ಮಾಹಿತಿ ನೀಡಿದರು. ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಗಣಪತಿ ದೇವಳದ ಕಾರ್ಯದರ್ಶಿ ಶ್ರೀಧರ್, ಲಯನ್ಸ್ ಕ್ಲ್ಲಬ್ ಮಾಜಿ ಅಧ್ಯಕ್ಷ ಪ್ರಶಾಂತ್, ಶಿಕ್ಷಕಿ ಅಮೃತಾ ರೈ, ಎಕ್ಕರು ಶಾಲಾ ಶಿಕ್ಷಕಿ ವಿಜಯ ಲಕ್ಷ್ಮೀ ಉಪಸ್ಥಿತರಿದ್ದರು.
ಅಂಗನವಾಡಿ ಮೇಲ್ವಿಚಾರಕಿ ಅಶ್ವಿನಿ ಸ್ವಾಗತಿಸಿದರು. ಮಂಗಳೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಹಾಗೂ ಎಕ್ಕಾರು – ಕೆಂಚಗುಡ್ಡೆ ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ ಭಾಸ್ಕರ ಭಟ್ ಅವರು ಕಾರ್ಯಕ್ರಮ ನಿರೂಪಿಸಿದರು.

Arun Ullanje

Kinnigoli-22091401

Comments

comments

Comments are closed.

Read previous post:
Kinnigoli-21091405
ಮರ ಬಿದ್ದು ಮನೆಗೆ ಹಾನಿ

ಮೂಲ್ಕಿ:  ಕಿಲ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೆಪ್ಪುಣಿಗುತ್ತು ಪಾಡಿಮನೆ ನಿವಾಸಿ ಭಾಸ್ಕರ ಆಚಾರ‍್ಯ ಎಂಬವರ ಮನೆಯ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಶನಿವಾರ ರಾತ್ರಿ ಬೀಸಿದ...

Close