ಉಪಾಧ್ಯಕ್ಷ ಸತೀಶ್ ಕುಂಪಲ ಗ್ರಾ. ಪಂ.ಗಳಿಗೆ ಭೇಟಿ

ಕಿನ್ನಿಗೋಳಿ: 2014 ರಲ್ಲಿ ಮುಗಿಯ ಬೇಕಾಗಿದ್ದ ಕಿನ್ನಿಗೋಳಿ ಪರಿಸರದ 17 ಗ್ರಾಮಗಳಿಗೆ ನೀರು ಉದಗಿಸುವ ಉದ್ಧೇಶದಿಂದ ಪ್ರಾರಂಭಗೊಂಡ ಸುಮಾರು 16.8 ಕೋಟಿಯ ವೆಚ್ಚದ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುಂಠಿತಗೊಂಡಿದ್ದು ಸುಮಾರು 5 ಕೋಟಿ ರೂ ವೆಚ್ಚದ ತಾಂತ್ರಿಕ ಕಾಮಾಗಾರಿ ಕೆಲಸಗಳು ಇನ್ನೂ ಕೂಡಾ ಬಾಕಿ ಉಳಿದಿವೆ ಈ ಬಗ್ಗೆ ಮುಂದಿನ ವಾರದೊಳಗೆ ಸಂಬಂಧಪಟ್ಟ ಎಲ್ಲಾ ಗ್ರಾಮಗಳ ಕಾಮಾಗಾರಿಗಳ ಪ್ರಗತಿಯ ವರದಿಗಳನ್ನು ಕ್ರೋಡೀಕರಿಸಿ ಮುಂದಿನ ವಾರ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ದಕ್ಷಿಣ ಕನ್ನಡದಲ್ಲಿಯೇ ಕುಡಿಯುವ ನೀರಿನ ಯೋಜನೆ ಹಾಗೂ ಆದಾಯದಲ್ಲಿ ಉತ್ತಮ ಸ್ಥಾನದಲ್ಲಿರುವ ಕಿನ್ನಿಗೋಳಿ ಗ್ರಾಮ ಪಂಚಾಯಿತಿಗೆ ಮಂಗಳವಾರ ಬೇಟಿ ನೀಡಿ ವಿವಿಧ ಯೋಜನೆಗಳು, ಬಸವ ವಸತಿ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನೆ ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾತನಾಡಿದರು.
ಎರಡು ತಿಂಗಳ ಹಿಂದೆ ಜಿ.ಪಂ. ಅಧ್ಯಕ್ಷರೊಂದಿಗೆ ಈ ಕಾಮಾಗಾರಿಯ ಪರಿಶೀಲನೆ ನಡೆಸಿದ್ದು ಕಾಮಾಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಮನವಿ ಮಾಡಲಾಗಿದೆ. ಪ್ರಸ್ತುತ ಯೋಜನೆಯ ಸೌಆವರ ಹತ್ತಿರದ 8 ಟ್ಯಾಂಕ್ ಗಳಿಗೆ ಮಾತ್ರ ನೀರು ಸರಭರಾಜು ಆಗುತ್ತಿದ್ದು ಬೇಸಿಗೆ ಕಾಲದಲ್ಲಿ ಉಪ್ಪು ನೀರು ಬಂದಿದ್ದರಿಂದ ನಿಲ್ಲಿಸಲಾಗಿತ್ತು. ಕಾಮಾಗಾರಿಗೆ ಸಂಬಂಧಪಟ್ಟ ಗುತ್ತಿಗೆದಾರರು, ಇಲಾಖಾ ಇಂಜೀನಿಯರ್‌ಗಳ ವೈಫಲ್ಯ ಹಾಗು ನಿರ್ಲಕ್ಷದಿಂದಾಗಿ ಯೋಜನೆ ತಡವಾಗಿ ಆರಂಭವಾಗಲಿದೆ. 17 ಗ್ರಾಮ ಪಂಚಾಯಿತಿಗಳಿಗೂ ಸೂಕ್ತ ಮಾಹಿತಿ ಕೊರತೆ ಸಂಬಂದ ಪಟ್ಟವರು ನೀಡಿಲ್ಲದ ಕಾರಣ ಇನ್ನಾದರೂ ಗ್ರಾಮ ಪಂಚಾಯಿತಿ ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಇಲಾಖಾಧಿಕಾರಿಗಳಿಂದ ಆಗಬೇಕಾಗಿದೆ. ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ತಾಂತ್ರಿಕ ಹಾಗೂ ಅಧಿಕಾರಿಗಳ ಮಾಹಿತಿ ಕೊರತೆಗಳಿಂದ ಸುಮಾರು 3,300 ಬಸವ ವಸತಿ ಯೋಜನೆಯ ಮನೆಗಳು ಕಾರ್ಯರೂಪಕ್ಕೆ ಬಂದಿಲ್ಲ ಜಿಲ್ಲೆಯ 203 ಗ್ರಾಮ ಪಂಚಾಯಿತಿಗಳಿಗೆ 19.5 ಕೋಟಿ ಅನುದಾನ ಬಂದಿದ್ದು ಸುಮಾರು 12.5 ಕೋಟಿ ವಿದ್ಯುತ್‌ಬಿಲ್ಲು ಕಟ್ಟಲು ಬಳಸಲಾಗಿದ್ದು ಹೀಗಾದರೆ ಗ್ರಾಮೀಣ ಭಾಗದಲ್ಲಿ ಹೇಗೆ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 2800ಕಿ.ಮೀ. ಗ್ರಾಮೀಣ ಭಾಗದ ಕೊಂಡಿ ರಸ್ತೆ ಕೂಡು ರಸ್ತೆಗಳು ನಾದುರಸ್ಥಿಯಲ್ಲಿದ್ದು ಈ ಬಗ್ಗೆ ಸರಕಾರಕ್ಕೆ ಮನವಿ ನೀಡಿ ಹೆಚ್ಚಿನ ಅನುದಾನ ಒದಗಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಜಿ. ಪಂ. ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ , ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಆಶಾ ರತ್ನಾಕರ ಸುವರ್ಣ, ತಾ. ಪಂ. ಸದಸ್ಯ ರಾಜು ಕುಂದರ್, ಸಹಾಯಕ ಇಂಜೀನಿಯರ್ ದಯಾನಂದ ರಾಮಚಂದ್ರ ನಾಯಕ್, ಪದ್ಮನಾಭ ಉಳ್ಳಾಲ, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ , ಉಪಾಧ್ಯಕ್ಷ ಜಾನ್ಸನ್ ಜೆರೋಮ್ ಡಿಸೋಜ, ಪಿ. ಡಿ. ಒ ಅರುಣ್ ಪ್ರದೀಪ್ ಡಿಸೋಜ, ಕಾರ್ಯದರ್ಶಿ ಒಲಿವರ್ ಓಸ್ವಾಲ್ಡ್ ಪಿಂಟೋ , ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಮತ್ತಿತರು ಉಪಸ್ಥಿತರಿದ್ದರು.

ಇದೇ ಸಂದರ್ಭ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು ಮೆನ್ನಬೆಟ್ಟು ಮಾದರಿ ಗ್ರಾಮ ಪಂಚಾಯಿತಿ ಆಗಿ ಮುನ್ನಡೆಯುವ ಲಕ್ಷಣಗಳು ಕಾಣುತ್ತಿವೆ ಎಂದು ಹೇಳಿದರು.
ಮೆನ್ನಬೆಟ್ಟು ಗ್ರಾ. ಪಂ. ಕುಡಿಯುವ ನೀರು ಗ್ರಾಮದಲ್ಲಿ ಸರಭರಾಜು ಮಾಡಿ ಸುಮಾರು 11 ಲಕ್ಷ ಸಂಪಾದಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದೆ. ಅಲ್ಲದೆ ಪ್ರಸಕ್ತ ಸಾಲಿನಲ್ಲಿ 36 ಲಕ್ಷರೂ ತೆರಿಗೆ ವಸೂಲಾತಿ ಮಾಡಿ ಸಾಧನೆ ಮಾಡಿದೆ, ಗ್ರಾ. ಪಂ, ಮೆಸ್ಕಾಂ ಎಲ್ಲಾ ಬಿಲ್ಲು ಕಟ್ಟಿದ್ದು ಈಗ ಮೆಸ್ಕಾಂನಿಂದಲೇ 2.25 ಲಕ್ಷರೂ ಗ್ರಾ. ಪಂ. ಬರಲು ಬಾಕಿ ಇದೆ. ಸ್ವಚ್ಥ ಗ್ರಾಮ ಯೋಜನೆಯಡಿ 25 ಶೌಚಾಲಯ ನಿರ್ಮಾಣಗೊಂಡಿದೆ. ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ಮಾಡಿ ಉತ್ತಮ ನಿರ್ವಹಣೆ ಮಾಡಲಾಗುತ್ತಿರುವುದು ಶ್ಲಾಘನೀಯ ಎಂದು ಜಿ. ಪಂ. ಉಪಾಧ್ಯಕ್ಷ ಸತೀಶ ಕುಂಪಲ ಮೆನ್ನಬೆಟ್ಟು ಗ್ರಾ. ಪಂ. ಬೇಟಿ ನೀಡಿ ಕಡತಗಳನ್ನು ಪರಿಶೀಲಿಸಿ ಹೇಳಿದರು. ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ ಪಿ. ಡಿ.ಒ ಪ್ರಕಾಶ್‌ಬಿ, ಜಯಶಂಕರ್ ರೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-25091402

ಕಿನ್ನಿಗೋಳಿ ಗ್ರಾಮ ಪಂಚಾಯಿತಿ

Kinnigoli-25091403

ಮೆನ್ನಬೆಟ್ಟು ಗ್ರಾಮ ಪಂಚಾಯಿತಿ

Comments

comments

Comments are closed.

Read previous post:
Kinnigoli-25091401
ಶೈಕ್ಷಣಿಕವಾಗಿ ಮುನ್ನಡೆಯಲು ಪ್ರೇರಣೆ ಅಗತ್ಯ

ಕಿನ್ನಿಗೋಳಿ : ಪರಸ್ಪರ ಸೌಹಾರ್ದತಯುತ ಸಹಕಾರ ಮನೋಭಾವನೆಯೊಂದಿಗೆ ಸೇವಾ ಕಾರ್ಯ ಹಾಗೂ ಶೈಕ್ಷಣಿಕವಾಗಿ ಬಡವರ್ಗದವರಿಗೆ ಸಹಾಯ ಹಸ್ತ ನೀಡಿ ಭವಿಷ್ಯದಲ್ಲಿ ಆರ್ಥಿಕವಾಗಿ ಮುನ್ನಡೆಯಲು ಪ್ರೇರಣೆ ನೀಡಬೇಕು. ಎಂದು ಲಯನ್ಸ್...

Close