ಶೈಕ್ಷಣಿಕವಾಗಿ ಮುನ್ನಡೆಯಲು ಪ್ರೇರಣೆ ಅಗತ್ಯ

ಕಿನ್ನಿಗೋಳಿ : ಪರಸ್ಪರ ಸೌಹಾರ್ದತಯುತ ಸಹಕಾರ ಮನೋಭಾವನೆಯೊಂದಿಗೆ ಸೇವಾ ಕಾರ್ಯ ಹಾಗೂ ಶೈಕ್ಷಣಿಕವಾಗಿ ಬಡವರ್ಗದವರಿಗೆ ಸಹಾಯ ಹಸ್ತ ನೀಡಿ ಭವಿಷ್ಯದಲ್ಲಿ ಆರ್ಥಿಕವಾಗಿ ಮುನ್ನಡೆಯಲು ಪ್ರೇರಣೆ ನೀಡಬೇಕು. ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಮೆಲ್ವಿನ್ ಡಿಸೋಜ ಹೇಳಿದರು.
ಕಿನ್ನಿಗೋಳಿ ಲಯನ್ಸ್ ಹಾಗೂ ಲಯನೆಸ್ ಕ್ಲಬ್‌ಗಳಿಗೆ ಪ್ರಾಂತೀಯ ಅಧ್ಯಕ್ಷರ ಅಕೃತ ಭೇಟಿ ಸಂದರ್ಭ ಕಿನ್ನಿಗೋಳಿಯ ಹೋಟೇಲ್ ಸ್ವಾಗತ್ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಲಯಾಧ್ಯಕ್ಷ ಎನ್. ಎಸ್, ಮಾಧಮಯ್ಯ ಕಿನ್ನಿಗೋಳಿ ಲಯನ್ಸ್ ಮುಖವಾಣಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ವಲಯದ ವಿವಿಧ ಕ್ಲಬ್‌ಗಳ ಅಧ್ಯಕ್ಷರುಗಳದ ಗೋಪಾಲ ಶೆಟ್ಟಿ, ಒಸ್ವಾಲ್ಡ್ ಡಿಸೋಜ, ದಯಾನಂದ ಭಂಡಾರಿ, ರಮೇಶ ಶೆಟ್ಟಿ, ಮನೋಹರ್, ರೊಲ್ವಿನ ರೋಡ್ರಿಗಸ್, ಆಲ್ವಿನ್ ಮಿನೇಜಸ್, ವೈ. ಕೃಷ್ಣ ಸಾಲ್ಯಾನ್, ಕಿನ್ನಿಗೋಳಿ ಲಯನೆಸ್ ಅಧ್ಯಕ್ಷೆ ಟೀನಾ ಸಿಕ್ವೇರಾ ಉಪಸ್ಥಿತರಿದ್ದರು.
ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಬರ್ಟನ್ ಸಿಕ್ವೇರಾ ಸ್ವಾಗತಿಸಿದರು. ಶಾಂಭವಿ ಶೆಟ್ಟಿ ವಂದಿಸಿದರು. ಲಾರೆನ್ಸ್ ಫೆರ್ನಾಂಡಿಸ್, ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-25091401

Comments

comments

Comments are closed.

Read previous post:
Kinnigoli-22091402
ಮೂಲ್ಕಿ ಮೂರ್ತೆದಾರ  ಸಂಘದ ಮಹಾಸಭೆ

ಮೂಲ್ಕಿ : ಮೂಲ್ಕಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ  2013-14ನೇ ಸಾಲಿನ ವಾರ್ಷಿಕ ಮಹಾಸಭೆ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಸಂಘದ ಆಧ್ಯಕ್ಷ  ಯದೀಶ್ ಎಸ್....

Close