ಶ್ರೀ ಕಟೀಲು ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ವಾರ್ಷಿಕ ಮಹಾ ಸಭೆ.

 ಕಿನ್ನಿಗೋಳಿ : ಶ್ರೀ ಕಟೀಲು ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಬ್ಯಾಂಕಿನ ೨೦೧೩-೧೪ ನೇ ಸಾಲಿನ ವಾರ್ಷಿಕ ಮಹಾ ಸಭೆ ಬ್ಯಾಂಕಿನ ಅಧ್ಯಕ್ಷ ಸಂಜೀವ ಮಡಿವಾಳ ಕಟೀಲು ಅವರ ಅಧ್ಯಕ್ಷತೆಯಲ್ಲಿ, ಕಛೇರಿ ಆವರಣದಲ್ಲಿ ಜರಗಿತು.
ಬ್ಯಾಂಕಿನ ಉಪಾಧ್ಯಕ್ಷ ರಘುರಾಮ ಮುಗೇರ, ನಿರ್ದೇಶಕರುಗಳಾದ ಯಶೋದ ಆರ್, ಕೆ.ಬಿ.ಸುರೇಶ್, ಸೌಂದರ್ಯ ರಮೇಶ್, ರಾಮದಾಸ ಕಾಮತ್, ಈಶ್ವರ್ ಕಟೀಲು, ಸ್ಟ್ಯಾನಿ ಪಿಂಟೋ ಹಾಗೂ ಶಶಿಧರ ಶೆಟ್ಟಿ ಕೆರೆಮ ಉಪಸ್ಥಿತರಿದ್ದರು.
ಬ್ಯಾಂಕಿನ ಕಾರ್ಯನಿರ್ವಹಣಾಕಾರಿ ಉಷಾ ಅವರು 2013-14ನೇ ಸಾಲಿನ ಆರ್ಥಿಕ ತಃಖ್ತೆ, ಲೆಕ್ಕಪರಿಶೋಧನೆ ವರದಿ ಹಾಗೂ 2014-15 ನೇ ಸಾಲಿನ ಅಂದಾಜು ಆಯವ್ಯಯ ಬಜೆಟನ್ನು ವರದಿ ಮಂಡಿಸಿ, ಸರ್ವಾನುಮತದಿಂದ ಅಂಗೀಕರಿಸಲಾಯಿತು. ಮಾ.೩೧ಕ್ಕೆ ಇದ್ದಂತೆ ಬ್ಯಾಂಕು 87,67,422.61 ರೂ.ಗಳ ವಿವಿಧ ಠೇವಣಾತಿಗಳನ್ನು ಹೊಂದಿದ್ದು ಸದಸ್ಯರಿಗೆ ವಿವಿಧ ಉದ್ದೇಶಗಳಿಗೆ 1.51 ಕೋಟಿ ರೂ. ಸಾಲ ನೀಡಿದ್ದು ಬಂದ ಲಾಭಾಂಶದಲ್ಲಿ ಸದಸ್ಯರಿಗೆ ಶೇ. 12ರ ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಮುಂದಿನ ವರ್ಷ ಒಂದು ಕೋಟಿ ಠೇವಣಿ ಸಂಗ್ರಹ ಹಾಗೂ ಸಾಲ ನೀಡಲು ಯೋಜನೆ, ಅರ್ಹ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಯಶಸ್ವಿನಿ ಯೋಜನೆ, ನ್ಯಾಯ ಬೆಲೆ ಅಂಗಡಿಯ ತೆರೆಯಲು ಪ್ರಯತ್ನ, ಹೈನುಗಾರಿಕೆ ಹಾಗೂ ಸ್ವಸಹಾಯ ಗುಂಪುಗಳಿಗೆ ಪ್ರೋತ್ಸಾಹದ ಯೋಜನೆಗಳ ತೀರ್ಮಾನ ಮಾಡಲಾಯಿತು. ಬ್ಯಾಂಕಿನ ಕಾರ್ಯನಿರ್ವಹಣಾಕಾರಿ ಉಷಾ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Kinnigoli-30091401

Comments

comments

Comments are closed.

Read previous post:
ತೋಕೂರು ಸುಬ್ರಹ್ಮಣ್ಯ ದೇವಳ ಜೀರ್ಣೋದ್ದಾರ

ಕಿನ್ನಿಗೋಳಿ : ಹಳೆಯಂಗಡಿಯ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳವು ಸುಮಾರು ೮೦೦ ವರ್ಷಗಳ ಇತಿಹಾಸವಿದ್ದು ಪ್ರಸ್ತುತ ದೇವರ ಗರ್ಭಗುಡಿ ಹಾಗೂ ಸುತ್ತುಪೌಳಿಗಳು ೧೫೦ ವರ್ಷದಷ್ಟು ಹಳೆಯದಾಗಿದ್ದು ಜೀರ್ಣಾವಸ್ಥೆಯಲ್ಲಿದೆ....

Close