ತೋಕೂರು ಸುಬ್ರಹ್ಮಣ್ಯ ದೇವಳ ಜೀರ್ಣೋದ್ದಾರ

ಕಿನ್ನಿಗೋಳಿ : ಹಳೆಯಂಗಡಿಯ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳವು ಸುಮಾರು ೮೦೦ ವರ್ಷಗಳ ಇತಿಹಾಸವಿದ್ದು ಪ್ರಸ್ತುತ ದೇವರ ಗರ್ಭಗುಡಿ ಹಾಗೂ ಸುತ್ತುಪೌಳಿಗಳು ೧೫೦ ವರ್ಷದಷ್ಟು ಹಳೆಯದಾಗಿದ್ದು ಜೀರ್ಣಾವಸ್ಥೆಯಲ್ಲಿದೆ. ಅಷ್ಟಮಂಗಳ ಪ್ರಶ್ನೆಯಂತೆ ಶ್ರೀ ಶ್ರೀ ಸುಬ್ರಹ್ಮಣ್ಯ ದೇವರು, ಮಹಾಗಣಪತಿ ಮತ್ತು ಶ್ರೀ ದುರ್ಗೆಯ ಗರ್ಭಗುಡಿಯನ್ನು ಪೂರ್ಣ ಶಿಲಾಮಯಗೊಳಿಸಿ ಪುನ: ನಿರ್ಮಾಣ ಸುತ್ತು ಪೌಳಿ ಹಾಗೂ ಇನ್ನಿತರ ಕೆಲಸ ಕಾರ್ಯಗಳು ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ತೋಕೂರು ಗುತ್ತು ಭಾಸ್ಕರ ಶೆಟ್ಟಿ ಹೇಳಿದರು.
ತೋಕೂರು ದೇವಳದಲ್ಲಿ ಭಾನುವಾರ ನಡೆದ ಪತ್ರಿಕಾ ಗೋಷ್ಟಿ ಉದ್ದೇಶಿಸಿ ಮಾತನಾಡಿದರು.
ಸುಬ್ರಹ್ಮಣ್ಯ ದೇವರ ಗರ್ಭಗುಡಿ, ಸುತ್ತು ಪೌಳಿ ಹಾಗೂ ದೇವಿ ದುರ್ಗೆಯ ಗರ್ಭಗುಡಿ ಯ ನಿರ್ಮಾಣಕ್ಕೆ ಮೊದಲ ಆಧ್ಯತೆ ನೀಡಿ ಸುಮಾರು ಮೂರು ಕೋಟಿ ವೆಚ್ಚದಲ್ಲಿ ನವೀಕರಿಸಲಾಗುವುದು.
ಈಗಾಗಲೆ ಕರ್ನಾಟಕ ಸರಕಾರದ ಹದಿನೈದು ಲಕ್ಷ ಅನುದಾನ ಮಂಜೂರಾಗಿದೆ. ಮಾತ್ರವಲ್ಲದೆ ದೇವಳದ ತೀರ್ಥಬಾವಿಯ ಕೆಲಸವನ್ನು ತೋಕೂರು ಮಾಗಂದಡಿ ಕುಟುಂಬಿಕರು ರಚಿಸಿಕೊಟ್ಟಿದ್ದಾರೆ. ಅಕ್ಟೋಬರ್ 1 ಬುಧವಾರ ಶಿಲಾ ಮುಹೂರ್ತ ಮಾಡುವುದರೊಂದಿಗೆ ಜೀರ್ಣೋದ್ಧಾರ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.
ದೇವಳದ ಉತ್ಸವ ಮತ್ತು ದೇವತಾ ಕಾರ್ಯಗಳಿಗೆ ಸಂಭಂಧ ಪಟ್ಟಂತೆ ಸೂಕ್ತವಾದ ಪಾಕಶಾಲೆ ಹಾಗೂ ಸಾಮಾಗ್ರಿ ಕೊಠಡಿಗಳನ್ನೊಳಗೊಂಡ ಭೋಜನ ಶಾಲೆಯ ನಿರ್ಮಾಣವೂ ಆಧ್ಯತೆಯಲ್ಲಿದೆ. ದೇವಳದ ಮುಂಭಾಗದ ರಾಜ ಗೋಪುರದ ನಿರ್ಮಾಣ ಮುಂತಾದ ಕೆಲಸ ಕಾರ್ಯಗಳ ನಡೆಯಲಿದ್ದು ಒಟ್ಟು ಸುಮಾರು ೫ ಕೋಟಿ ವೆಚ್ಚದಲ್ಲಿ ನವೀಕರಣ ಗೊಳ್ಳಲಿದ್ದು ಮುಂದಿನ 2016 ಮೇ ಒಳಗೆ ಕೆಲಸ ಕಾರ್ಯಗಳು ಪೂರ್ಣ ಗೊಂಡು ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು.
ಸಮಿತಿಯ ಗೌರವಾಧ್ಯಕ್ಷರುಗಳಾಗಿ ಯುವಜನ ಹಾಗೂ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಕರ್ನಾಟಕ ಸರಕಾರದ ಮಾಜಿ ಅಡ್ವೋಕೇಟ್ ಜನರಲ್, ಮಾಜಿ ಸಚಿವ ಅಮರನಾಥ ಶೆಟ್ಟಿ ಆಯ್ಕೆ ಮಾಡಲಾಗಿದೆ. ಕಾರ್ಯಾಧ್ಯಕ್ಷರಾಗಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಅಧ್ಯಕ್ಷರಾಗಿ ಟಿ. ವ್ಯಾಸರಾವ್ ಮಜಿಗುತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭ ಸಮಿತಿಯ ಗೌರವ ಸಲಹೆಗಾರರಾದ ಅತ್ತೂರು ಹೊಸಲೊಟ್ಟು ಬಾಬು ಶೆಟ್ಟಿ. ಬಾಬು ಶೆಟ್ಟಿ, ಕೊಲ್ನಾಡು ಉತ್ರುಂಜೆ ಭುಜಂಗ. ಎಮ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಜಿಗುತ್ತು ಕೆ. ವ್ಯಾಸರಾವ್, ಪದ್ಮನಾಭ ಆಚಾರ್ಯ, ವಿನೋದ್, ಪಡುಪಣಂಬೂರು ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-29091401
ಉಲ್ಲಂಜೆ ಪರಿಸರ ಸ್ವಚ್ಚತೆ

ಕಿನ್ನಿಗೋಳಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು, ಪ್ರಗತಿ ಬಂದು ಸ್ವಸಹಾಯ ಸಂಘ ಮೆನ್ನಬೆಟ್ಟು ಕಿಲೆಂಜೂರು ಒಕ್ಕೂಟ, ಭ್ರ್ರಾಮರಿ ಮಹಿಳಾ ಸಮಾಜ ರಾಜರತ್ನಪುರ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ...

Close