ಸುವರ್ಣ ಸಂಭ್ರಮದ ಕೊಡೆತ್ತೂರು ಹುಲಿ – Part I

ಕಿನ್ನಿಗೋಳಿ : ನವರಾತ್ರಿಯ ಲಲಿತಾ ಪಂಚಮಿ ಪ್ರಯುಕ್ತ ಸೋಮವಾರ ಕೊಡೆತ್ತೂರು ಮೆರವಣಿಗೆ ಸೇವಾ ಸಮಿತಿಯ ಸುವರ್ಣ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯು ಹುಲಿ ವೇಷ, ಟ್ಯಾಬ್ಲೊ ಹಾಗೂ ಇತರ ವೇಷಗಳೊಂದಿಗೆ ಕೊಡೆತ್ತೂರು ಮಲ್ಲಿಗೆಯಂಗಡಿಯ ಮೂಡುಮನೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸನ್ನಿಧಿ ತನಕ ನಡೆಯಿತು.
ಸುವರ್ಣ ಸಂಭ್ರಮದ ಕೊಡೆತ್ತೂರು ಮೆರವಣಿಗೆ ಸಮಿತಿಯ ಇತಿಹಾಸದಲ್ಲಿ 112 ಹುಲಿವೇಷಗಳು ಕಂಡು ಬಂದಿದ್ದು ವಿಶೇಷವಾಗಿತ್ತು. ಮೂವರು ಮರಕಾಲು ಹುಲಿ ವೇಷದಾರಿಗಳು ನರ್ತನೆ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾದರು.
ವಿವಿಧ ಬಗೆಯ 18 ಪೌರಾಣಿಕ ಹಾಗೂ ಇತರ ಸ್ಥಬ್ದಚಿತ್ರಗಳು ದಾರಿಯುದ್ದಕ್ಕೂ ಪ್ರೇಕ್ಷಕರ ಗಮನ ಸೆಳೆದವು. ಮೆರವಣಿಗೆ ಪ್ರಾರಂಭಗೊಂಡ ವರ್ಷದಿಂದ ಪುರಂದರ ದಾಸರ ವೇಷ ಹಾಕಿ ಸುವರ್ಣ ವರ್ಷದಲ್ಲಿ ಕೂಡಾ ವೇಷ ಧರಿಸಿ ಭಜನೆ ಮೂಲಕ ಮೆರವಣಿಗೆಯಲ್ಲಿ ಸಾಗುತ್ತಿದ್ದ ದೊಂಬ ಪೂಜಾರಿ ತನ್ನ ಇಳಿ ವಯಸ್ಸಿನಲ್ಲಿಯೂ ಯುವಜನರಿಗೆ ಪ್ರೇರಣೆ ನೀಡುವಲ್ಲಿ ಹಾಗೂ ಶಿಸ್ತು ಸಂಸ್ಕಾರವನ್ನು ಜನಮಾನಸದಲ್ಲಿ ಪಸರಿಸುವಲ್ಲಿ ಯಶಸ್ವಿಯಾದರು.
ಮಹಿಳೆಯರಿಂದ ಭಜನೆ ಸಂಕೀರ್ತನೆ, ಚೆಂಡೆ ವಾದ್ಯ ಕೊಂಬು ಕಹಳೆಗಳ ನಿನಾದದೊಂದಿಗೆ ಕಲ್ಲಡ್ಕದ ಗೊಂಬೆ, ಕೀಲು ಕುದುರೆ, ನವಿಲು ವಾಹನದಾರಿ ಸುಬ್ರಹ್ಮಣ್ಯ, ದೈತ್ಯ ಗೊರಿಲ್ಲಾ, ಕರಡಿ, ಕಾಡುಕೋಣ, ಚೀನೀ ಡ್ರ್ಯಾಗನ್, ಕೇರಳದ ಪೂಕಾವಾಡಿ ನೃತ್ಯ, ಡೊಳ್ಳುಕುಣಿತ, ಕರಗ ನೃತ್ಯ, ಮಲ್ಲಕಂಬ ಜನ ಮೆಚ್ಚುಗೆ ಕಂಡಿತು.

Kodethoor-29091401 Kodethoor-29091402 Kodethoor-29091403 Kodethoor-29091404 Kodethoor-29091405 Kodethoor-29091406 Kodethoor-29091407 Kodethoor-29091408 Kodethoor-29091409 Kodethoor-29091410 Kodethoor-29091411 Kodethoor-29091412 Kodethoor-29091413 Kodethoor-29091414 Kodethoor-29091415 Kodethoor-29091416 Kodethoor-29091417 Kodethoor-29091418 Kodethoor-29091419 Kodethoor-29091420 Kodethoor-29091421 Kodethoor-29091422 Kodethoor-29091423 Kodethoor-29091424 Kodethoor-29091425 Kodethoor-29091426

Comments

comments

Comments are closed.

Read previous post:
Kodethoor 28091401
ಹಿರಿಯರ ಸಂಸ್ಕಾರದ ಮಾರ್ಗದರ್ಶನ ಮುಖ್ಯ

ಕಿನ್ನಿಗೋಳಿ : ಕೊಡೆತ್ತೂರು-ಕಟೀಲು ಗ್ರಾಮಸ್ಥರ ಒಗ್ಗಟ್ಟು, ಹಿರಿಯರ ಸಂಸ್ಕಾರದ ಮಾರ್ಗದರ್ಶನ ಹಾಗೂ ಕಟೀಲಮ್ಮನ ನಿಯಮ ನಿಷ್ಠೆಯ ಆರಾಧನೆಯೊಂದಿಗೆ ನವರಾತ್ರಿ ಮೆರವಣಿಗೆ ನಡೆದು ಬರುತ್ತಿರುವುದು ಸಂತೋಷದಾಯಕ ಎಂದು ಗುರುಪುರ ಶ್ರೀ...

Close