ಹಿರಿಯರ ಸಂಸ್ಕಾರದ ಮಾರ್ಗದರ್ಶನ ಮುಖ್ಯ

ಕಿನ್ನಿಗೋಳಿ : ಕೊಡೆತ್ತೂರು-ಕಟೀಲು ಗ್ರಾಮಸ್ಥರ ಒಗ್ಗಟ್ಟು, ಹಿರಿಯರ ಸಂಸ್ಕಾರದ ಮಾರ್ಗದರ್ಶನ ಹಾಗೂ ಕಟೀಲಮ್ಮನ ನಿಯಮ ನಿಷ್ಠೆಯ ಆರಾಧನೆಯೊಂದಿಗೆ ನವರಾತ್ರಿ ಮೆರವಣಿಗೆ ನಡೆದು ಬರುತ್ತಿರುವುದು ಸಂತೋಷದಾಯಕ ಎಂದು ಗುರುಪುರ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.
ಕೊಡೆತ್ತೂರು- ಕಟೀಲು ನವರಾತ್ರಿ ಮೆರವಣಿಗೆ ಸೇವಾ ಸಮಿತಿಯ 50ನೇ ಸುವರ್ಣ ಮಹೋತ್ಸವ ಆಚರಣೆ ಸಂದರ್ಭ ಕೊಡೆತ್ತೂರು ಮೂಡುಮನೆಯ ಮುಂಭಾಗದ ಲಲಿತಾ ನಂದಿನಿ ವೇದಿಕೆಯಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಕಟೀಲು ದೇವಳ ಅರ್ಚಕರಾದ ವೆ. ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ, ವೆ. ಮೂ. ಹರಿನಾರಾಯಣದಾಸ ಆಸ್ರಣ್ಣ ಹಾಗೂ ವೆ. ಮೂ. ವಾಸುದೇವ ಆಚಾರ್ಯ ಶಿಬರೂರು ಶುಭಾಶಂಸನೆಗೈದರು.
ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿ ಹಿರಿಯರು ಪಾಲಿಸಿಕೊಂಡು ಬಂದ ನಿಯಮ ನಿಷ್ಠೆಗಳನ್ನು ಯಥಾವತ್ತಾಗಿ ಅನುಸರಿಸಿ ಜೀವನದಲ್ಲಿ ಯಶಸ್ಸು ಗಳಿಸಿ ಉಳಿಸಿ ಬೆಳೆಸಿದ ಕೀರ್ತಿ ಕೊಡೆತ್ತೂರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕಳೆದ ೫೦ ವರ್ಷಗಳಿಂದ ಕೊಡೆತ್ತೂರು ಮೆರವಣಿಗೆ ಸೇವಾ ಸಮಿತಿಯಲ್ಲಿ ಅಪಾರ ಸೇವೆಗೈದ ಬಿ. ವಿಶ್ವನಾಥ ಶೆಟ್ಟಿ ಕೊಡೆತ್ತೂರು, ಚಂದ್ರಕಾಂತ್ ನಾಯಕ್ ಕಟೀಲು, ಪ್ರಭಾಕರ ಶೆಟ್ಟಿ, ವಾಸುದೇವ ಆಚಾರ್ಯ ಹಾಗೂ ಕಂಬಳಿ ಅವರನ್ನು ಸುವರ್ಣ ವರ್ಷದ ನೆನಪಿಗಾಗಿ ಸನ್ಮಾನಿಸಲಾಯಿತು. ಸುವರ್ಣ ವರ್ಷದ ನೆನಪಿಗಾಗಿ ಸುವರ್ಣ ಸ್ಪರ್ಶ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭ ಸಮಿತಿಯ ವತಿಯಿಂದ ನಡೆದ ಉಚಿತ ನೇತ್ರ ಚಿಕಿತ್ಸೆಯ ಫಲಾನುಭಾವಿಗಳಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಉತ್ತಮ ಸಾಧನೆಗೈದ ಪರಿಸರದ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.
ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಹಿಂದು ಜಾಗರಣ ವೇದಿಕೆ ರಾಜ್ಯ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್, ಯುಗಪುರುಷದ ಭುವನಾಭಿರಾಮ ಉಡುಪ, ಮುಂಬಯಿ ಉದ್ಯಮಿ ಐಕಳ ಗಣೇಶ್ ವಿ. ಶೆಟ್ಟಿ, ದಿವ್ಯ ಕನ್‌ಸ್ಟ್ರಕ್ಷನ್ ಮಾಲಕ ಯಾದವ ಕೋಟ್ಯಾನ್ ಪೆರ್ಮುದೆ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ರಘುರಾಮ ಶೆಟ್ಟಿ ಪದವಿನಂಗಡಿ, ಮುಂಬಯಿ ಸಮಿತಿಯ ಗೌರವಾಧ್ಯಕ್ಷ ನಿರಂಜನ ಶೆಟ್ಟಿ ಕೊಡೆತ್ತೂರು ಮಾಗಂದಡಿ, ಮುಂಬಯಿ ಸಮಿತಿಯ ಅಧ್ಯಕ್ಷ ಭಾಸ್ಕರ ಶೆಟ್ಟಿ ಕೊಡೆತ್ತೂರು ಸಾಂತ್ಯ ಉಪಸ್ಥಿತರಿದ್ದರು.
ನವರಾತ್ರೀ ಸುವರ್ಣ ಮಹೋತ್ಸವ ಮೆರವಣಿಗೆ ಸೇವಾ ಸಮಿತಿ ಅಧ್ಯಕ್ಷ ಈಶ್ವರ ಕಟೀಲ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೊಡೆತ್ತೂರು ಗುತ್ತು ಹೊಸಮನೆ ದೇವಿಪ್ರಸಾದ್ ಎಸ್. ಶೆಟ್ಟಿ ಪ್ರಸ್ತಾವನೆಗೈದರು. ಕಾರ್ಯಧ್ಯಕ್ಷ ಲೋಕೇಶ್ ಶೆಟ್ಟಿ ಕೊಡೆತ್ತೂರು ಬಾಳಿಕೆ ಮನೆ ವಂದಿಸಿದರು. ಸೋಂದಾ ಭಾಸ್ಕರ ಭಟ್ ಕಾರ್ಯಕ್ರಮ ನಿರೂಪಿಸಿದರು.

Kodethoor 28091401

Comments

comments

Comments are closed.

Read previous post:
Kinnigoli-27091419
ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ

ಕಟೀಲು : ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿಯ 29 ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯು ಹುಲಿ ವೇಷ, ಸ್ಥಬ್ದ ಚಿತ್ರಗಳು ಹಾಗೂ ಇತರ ವೇಷಗಳೊಂದಿಗೆ ಶನಿವಾರ...

Close