ಪರಸ್ಪರ ಸಹಕಾರದಿಂದ ಗಾಮದ ಶ್ರೇಯೋಭಿವೃದ್ಧಿ ಸಾಧ್ಯ

ಕಿನ್ನಿಗೋಳಿ : ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳ ಪರಸ್ಪರ ಪಾರದರ್ಶಕತೆಯ ಸಹಕಾರದಿಂದ ಮಾತ್ರ ಗಾಮದ ಶ್ರೇಯೋಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯತಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪಂಚಾಯತಿ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಹಾಗೂ ಕಿನ್ನಿಗೋಳಿ ಮಾರುಕಟ್ಟ್ಟೆಂiಲ್ಲಿ ೭೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಹೈಟೆಕ್ ಮಹಿಳಾ ಮೀನು ಮಾರುಕಟ್ಟೆ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನಾ ಮತ್ತು ಶಿಲಾನ್ಯಾಸ ನೆಯನ್ನು ಪಂಚಾಯತ್ ನ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ ಸುವರ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ, ಸದಸ್ಯ ರಾಜು ಕುಂದರ್ ,ದ,ಕ, ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ಪಿ.ವಿ ದೇಸಾಯಿ, ಕಾರ್ಯನಿರ್ವಾಹಕ ಅಭಿಯಂತರಾದ ರೋಹಿದಾಸ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಪಿ.ಎ. ಗಣಪತಿ, ಮಂಗಳೂರು ಎ.ಪಿಎಂ.ಸಿ.ಸದಸ್ಯ ಪ್ರಮೋದ್ ಕುಮಾರ್, ಮುಲ್ಕಿ ವಿಶೇಷ ತಹಶೀಲ್ದಾರ್ ಎ.ಜಿ. ಖೇಣಿ, ಕಿನ್ನಿಗೋಳಿ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಪಂಚಾಯತಿ ಉಪಾಧ್ಯಕ್ಷ ಜೋನ್ಸನ್ ಜೊರೊಂ ಡಿಸೋಜಾ,
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ ಪ್ರಸ್ತಾವನೆಗೈದು, ಪಂಚಾಯಿತಿ ಸದಸ್ಯ ಸಂತಾನ್ ಡಿಸೋಜಾ ಸ್ವಾಗತಿಸಿದರು. ಪಿ.ಡಿ.ಓ. ಅರುಣ್ ಪ್ರದೀಪ್ ಡಿಸೋಜಾ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-29091401

Comments

comments

Comments are closed.

Read previous post:
Kinnigoli-2101403
ಎಕ್ಕಾರು ನವರಾತ್ರಿ ಮೆರವಣಿಗೆ 2014

ಎಕ್ಕಾರು: ನವರಾತ್ರಿಯ ಮೂಲನಕ್ಷತ್ರ ದಿನದಂದು ಎಕ್ಕಾರು ನವರಾತ್ರಿ ಮೆರವಣಿಗೆ ಸಮಿತಿಯ 56ನೇ ವರ್ಷದ ಮೆರವಣಿಗೆ ಉತ್ಸವ ನಡೆಯಿತು.

Close