ಕಿನ್ನಿಗೋಳಿ ಬೃಹತ್ ಗ್ರಾಮ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ: ರಾಷ್ಟ್ರೀಯ ಸೇವಾ ಯೋಜನೆ ಪೊಂಪೈ ಕಾಲೇಜು ಐಕಳ, ವಿದ್ಯಾರ್ಥಿ ಕ್ಷೇಮ ಪಾಲನಾ ಘಟಕ, ರೆಡ್ ರಿಬ್ಬನ್ ಕ್ಲಬ್, ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ, ಯುಗಪುರುಷ, ಕಿನ್ನಿಗೋಳಿ ರೋಟರಿ, ರೋಟರಾಕ್ಟ್ ಕ್ಲಬ್, ಇನ್ನರ್‌ವೀಲ್ ಕ್ಲಬ್, ರಿಕ್ಷಾ-ಚಾಲಕ ಮಾಲಕರ ಸಂಘ, ಕಿನ್ನಿಗೋಳಿ ಮತ್ತು ಮುಲ್ಕಿ ಲಯನ್ಸ್ ಕ್ಲಬ್ ಗಳ ಜಂಟೀ ಆಶ್ರಯದಲ್ಲಿ ಗುರುವಾರ ಗಾಂಧಿ ಜಯಂತಿ ಪ್ರಯುಕ್ತ ನಡೆದ ಬೃಹತ್ ಗ್ರಾಮ ಸ್ವಚ್ಛತಾ ಅಭಿಯಾನವನ್ನು ಕಿನ್ನಿಗೋಳಿಯಲ್ಲಿ ಐಕಳ ಪೊಂಪೈ ಕಾಲೇಜಿನ ಪ್ರಿನ್ಸಿಪಾಲ್ ಉದ್ಘಾಟಿಸಿದರು. ಐಕಳ ಪೊಂಪೈ ಕಾಲೇಜಿನ ವಿದ್ಯಾರ್ಥಿಗಳು ಕಿನ್ನಿಗೋಳಿ ಪೇಟೆ ಪರಿಸರದ ರಸ್ತೆಯ ಇಕ್ಕೆಲಗಳಲ್ಲಿರುವ ಕಳೆಗಿಡಗಳು ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದು ಸ್ಚಚ್ಚಗೊಳಿಸಿದರು.
ಈ ಸಂದರ್ಭ ಕಿನ್ನಿಗೋಳಿ ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ಪಿ ಹೆಗ್ಡೆ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷ ಜನಾರ್ಧನ್ ಕಿಲೆಂಜೂರು, ಯುಗಪುರುಷದ ಭುವನಾಭಿರಾಮ ಉಡುಪ, ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರ, ರೋಟರ‍್ಯಾಕ್ಟ್ ಅಧ್ಯಕ್ಷ ಸಂತೋಷ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಬರ್ಟನ್ ಸಿಕ್ವೇರ, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಯೋಗೀಶ್ ಕೊಟ್ಯಾನ್, ಪ್ರವೀಣ ಪೂಜಾರಿ, ವಲೇರಿಯನ್ ಸಿಕ್ವೇರಾ, ಕಾಲೇಜು ಉಪನ್ಯಾಸಕರಾದ ಪ್ರೊ. ಗುಣಕರ್ ಎಸ್, ಥಾಮಸ್ ಜಿ ಯಂ ಮತ್ತಿತರರು ಉಪಸ್ಥಿತರಿದ್ದರು.

Kinnigoli-14101417

Comments

comments

Comments are closed.

Read previous post:
Kinnigoli-29091401
ಪರಸ್ಪರ ಸಹಕಾರದಿಂದ ಗಾಮದ ಶ್ರೇಯೋಭಿವೃದ್ಧಿ ಸಾಧ್ಯ

ಕಿನ್ನಿಗೋಳಿ : ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳ ಪರಸ್ಪರ ಪಾರದರ್ಶಕತೆಯ ಸಹಕಾರದಿಂದ ಮಾತ್ರ ಗಾಮದ ಶ್ರೇಯೋಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು....

Close