ಕಿನ್ನಿಗೋಳಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕಿನ್ನಿಗೋಳಿ : ಕಿನ್ನಿಗೋಳಿ ಲಯನ್ಸ್-ಲಯನೆಸ್ ಕ್ಲಬ್, ಸೌತ್ ಕೆನರಾ ಫೋಟೋಗ್ರಾಪರ‍್ಸ್ ಅಸೋಸಿಯೇಶನ್ ಮೂಲ್ಕಿ ವಲಯ, ಎ.ವಿ.ಪಿ. ಏರಿಯಾ ಕೌನ್ಸಿಲ್ ಕಿನ್ನಿಗೋಳಿ, ಕ್ಯಾಥೋಲಿಕ್ ಸಭಾ ಕಿರೆಂ ಇವರ ಸಂಯುಕ್ತ ಆಶ್ರಯದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ, ದಂತ ಮತ್ತು ನೇತ್ರ ತಪಾಸಣಾ ಶಿಬಿರ ಹಾಗೂ ಮಂಗಳೂರು ಹಿರಿಯ ನಾಗರಿಕರ ಸಂಘ ಇವರ ವತಿಯಿಂದ 60ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕರ್ನಾಟಕ ಸರಕಾರದಿಂದ ಗುರುತು ಚೀಟಿ ಪಡೆಯುವ ಬಗ್ಗೆ ಅರ್ಜಿ ಸ್ವೀಕರಿಸುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಬರ್ಟನ್ ಸಿಕ್ವೇರಾ, ಲಯನ್ಸ್ ಪ್ರಾಂತ್ಯಾಧ್ಯಕ್ಷ ಮೆಲ್ವಿನ್ ಡಿ’ಸೋಜ, ಶ್ರೀನಿವಾಸ ಆಸ್ಪತ್ರೆಯ ಡಾ|| ಶ್ರೀರಾಮ್ ಕಾರಂತ, ಡಾ|| ಪ್ರಭುದೇವ್, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಹಿರಿಯ ನಾಗರಿಕರ ಸಂಘದ ಸಿ.ಡಿ.ಕಾಮತ್, ರಮೇಶ್ ರಾವ್, ಸೌತ್ ಕೆನರಾ ಫೋಟೋಗ್ರಾಪರ‍್ಸ್ ಅಸೋಸಿಯೇಶನ್ ಮೂಲ್ಕಿ ವಲಯದ ಅಧ್ಯಕ್ಷ ನವೀನ್ ಕುಮಾರ್ ಕಟೀಲ್, ಕಿನ್ನಿಗೋಳಿ ಎ.ವಿ.ಪಿ. ಏರಿಯಾ ಕೌನ್ಸಿಲ್ ಅಧ್ಯಕ್ಷ ಲಾರೆನ್ಸ್ ಫೆರ್ನಾಂಡಿಸ್, ಕಿರೆಂ ಕ್ಯಾಥೋಲಿಕ್ ಸಭಾ ಅಧ್ಯಕ್ಷ ಜೇಮ್ಸ್ ಲೋಬೋ, ಮತ್ತಿತತರು ಉಪಸ್ಥಿತರಿದ್ದರು.

Kinnigoli-07101403

Comments

comments

Comments are closed.

Read previous post:
Kinnigoli-07101402
ನಿರಂತರ ಸಾಧನೆಯಿಂದ ಬ್ರಾಹ್ಮಣ್ಯತ್ವ ಲಭ್ಯ

ಕಿನ್ನಿಗೋಳಿ: ಧಾರ್ಮಿಕ ಚಿಂತನೆ ಶಿಸ್ತು ಸಂಸ್ಕಾರ ಜನರ ಮನಸ್ಸಿನಲ್ಲಿ ಮೂಡಿಸಲು ಸಂಘಟನೆಯ ಪಾತ್ರ ಬಹು ಮುಖ್ಯ ಪುನರೂರು ವಿಪ್ರ ಸಂಪದವು ಕ್ರೀಡೆಯ ಮೂಲಕ ಜನರನ್ನು ಸಂಘಟಿಸಿ ಭವಿಷ್ಯದ ದಿನಗಳಲ್ಲಿ...

Close