ಕಿನ್ನಿಗೋಳಿಯಲ್ಲಿ ಯೋಗ ಶಿಬಿರ

ಕಿನ್ನಿಗೋಳಿ: ಏಕಾಗ್ರತೆ, ಸ್ವಾಸ್ಥ್ಯ ಮನಸ್ಸಿನ ನಿರ್ಮಾಣವು ಯೋಗ ಹಾಗೂ ಪ್ರಾಣಾಯಾಮದಿಂದಾಗುತ್ತದೆ. ಎಂದು ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್ ಹೇಳಿದರು.
ಕಿನ್ನಿಗೋಳಿ ಲಯನ್ಸ್, ರೋಟರಿ, ಇನ್ನರ್‌ವೀಲ್ ಕ್ಲಬ್ ಸಂಯೋಜನೆಯಲ್ಲಿ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಸೋಮವಾರ ನಡೆದ ಏಳು ದಿನಗಳ ಉಚಿತ ಯೋಗ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಯೋಗ ಗುರು ಜಯ ಮುದ್ದು ಶೆಟ್ಟಿ ಶಿಬಿರ ಉದ್ಘಾಟಿಸಿದರು. ಲಯನ್ಸ್ ಅಧ್ಯಕ್ಷ ಬರ್ಟನ್ ಸಿಕ್ವೇರಾ, ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಇನ್ನರ್ ವೀಲ್ ಕಾರ್ಯದರ್ಶಿ ರಾಧಾ ಶೆಣೈ ಉಪಸ್ಥಿತರಿದ್ದರು.

Kinnigoli-07101404

Comments

comments

Comments are closed.

Read previous post:
Kinnigoli-07101403
ಕಿನ್ನಿಗೋಳಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕಿನ್ನಿಗೋಳಿ : ಕಿನ್ನಿಗೋಳಿ ಲಯನ್ಸ್-ಲಯನೆಸ್ ಕ್ಲಬ್, ಸೌತ್ ಕೆನರಾ ಫೋಟೋಗ್ರಾಪರ‍್ಸ್ ಅಸೋಸಿಯೇಶನ್ ಮೂಲ್ಕಿ ವಲಯ, ಎ.ವಿ.ಪಿ. ಏರಿಯಾ ಕೌನ್ಸಿಲ್ ಕಿನ್ನಿಗೋಳಿ, ಕ್ಯಾಥೋಲಿಕ್ ಸಭಾ ಕಿರೆಂ ಇವರ ಸಂಯುಕ್ತ ಆಶ್ರಯದಲ್ಲಿ...

Close