ಮೆನ್ನಬೆಟ್ಟು ಗ್ರಾಮಸ್ನೇಹಿ ಯೋಜನೆ

ಕಿನ್ನಿಗೋಳಿ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮೀಣ ಜನರ ಕುಂದು ಕೊರತೆಗಳನ್ನು ಬಗೆ ಹರಿಸಲು ಜಿಲ್ಲಾ ಪಂಚಾಯತ್ ವಿನೂತನ ಗ್ರಾಮ ಸ್ನೇಹಿ ಯೋಜನೆಯನ್ನು ಹಮ್ಮಿಕೊಂಡಿದೆ. ಗ್ರಾಮದ ಜನರು ಇದನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದು ಕಟೀಲು ಜಿ. ಪಂ. ಸದಸ್ಯ ಈಶ್ವರ್ ಕಟೀಲ್ ಹೇಳಿದರು.
ಮಂಗಳವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ನಡೆದ ಗ್ರಾಮಸ್ನೇಹಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಟೀಲಿನ ಅರ್ಚಕ ವೆ.ಮೂ. ಶ್ರೀಹರಿನಾರಾಯಣದಾಸ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು.
೬೫ ಮಂದಿ ವಿಕಲಚೇತನರಿಗೆ ವೈದ್ಯಕೀಯ ಪ್ರಮಾಣ ಪತ್ರ ಗುರುತು ಚೀಟಿ ನೀಡಲಾಯಿತು. ೧೫೦ ಕ್ಕಿಂತಲೂ ಹೆಚ್ಚು ಹಿರಿಯ ನಾಗರೀಕರ ಗುರುತಿನ ಚೀಟಿ ಮಾಡಲಾಯಿತು. ೨೦ ಮಂದಿ ರಕ್ತದಾನ ಮಾಡಇದರು. ಆರೋಗ್ಯ ತಪಾಸಣಾ ಹಾಗೂ ನೇತ್ರ ತಪಾಸಣಾ ಶಿಬಿರ ನಡೆಯಿತು.
ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ತಾ. ಪಂ. ಸದಸ್ಯರಾದ ಬೇಬಿ ಸುಂದರ ಕೋಟ್ಯಾನ್, ರಮೇಶ್ ಶೆಟ್ಟಿ ಎಕ್ಕಾರು, ವಜ್ರಾಕ್ಷಿ ಶೆಟ್ಟಿ, ಯುಗಪುರುಷದ ಭುವನಾಭಿರಾಮ ಉಡುಪ, ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಪ್ರಭಾ, ಡಾ. ಕಿಶೋರ್, ಗ್ರಾಮಕರಣಿಕರಾದ ಲೋಕೇಶ್, ಕಿರಣ್ ಕುಮಾರ್, ಕಿನ್ನಿಗೋಳಿ ಗ್ರಾ. ಪಂ. ಮಾಜಿ ಅಧ್ಯಕ್ಷರಾದ ದೇವಪ್ರಸಾದ್ ಪುನರೂರು, ಕೆಮ್ರಾಲ್ ಗ್ರಾ. ಪಂ. ಅಧ್ಯಕ್ಷೆ ರೇವತಿ ಶೆಟ್ಟಿಗಾರ್, ಚೇಳ್ಯಾಯರು ಗ್ರಾ. ಪಂ. ಅಧ್ಯಕ್ಷೆ ಪುಪ್ಪಾ , ಉಪಾಧ್ಯಕ್ಷ ಪುಷ್ಪರಾಜ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಅಶ್ವಿನಿ , ಪಿಡಿಒ ಪ್ರಕಾಶ್ ಬಿ. ವಿವಿಧ ಗ್ರಾಮಗಳ ಪಂ. ಸದಸ್ಯರು ಉಪಸ್ಥಿತರಿದ್ದರು. ರೇವತಿ ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು.

Kinnigoli-07101405

Kinnigoli-08101402 Kinnigoli-08101403 Kinnigoli-08101404 Kinnigoli-08101405 Kinnigoli-08101406 Kinnigoli-08101407

Comments

comments

Comments are closed.

Read previous post:
Kinnigoli-07101404
ಕಿನ್ನಿಗೋಳಿಯಲ್ಲಿ ಯೋಗ ಶಿಬಿರ

ಕಿನ್ನಿಗೋಳಿ: ಏಕಾಗ್ರತೆ, ಸ್ವಾಸ್ಥ್ಯ ಮನಸ್ಸಿನ ನಿರ್ಮಾಣವು ಯೋಗ ಹಾಗೂ ಪ್ರಾಣಾಯಾಮದಿಂದಾಗುತ್ತದೆ. ಎಂದು ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್ ಹೇಳಿದರು. ಕಿನ್ನಿಗೋಳಿ ಲಯನ್ಸ್, ರೋಟರಿ, ಇನ್ನರ್‌ವೀಲ್ ಕ್ಲಬ್ ಸಂಯೋಜನೆಯಲ್ಲಿ...

Close