ನಿರಂತರ ಸಾಧನೆಯಿಂದ ಬ್ರಾಹ್ಮಣ್ಯತ್ವ ಲಭ್ಯ

ಕಿನ್ನಿಗೋಳಿ: ಧಾರ್ಮಿಕ ಚಿಂತನೆ ಶಿಸ್ತು ಸಂಸ್ಕಾರ ಜನರ ಮನಸ್ಸಿನಲ್ಲಿ ಮೂಡಿಸಲು ಸಂಘಟನೆಯ ಪಾತ್ರ ಬಹು ಮುಖ್ಯ ಪುನರೂರು ವಿಪ್ರ ಸಂಪದವು ಕ್ರೀಡೆಯ ಮೂಲಕ ಜನರನ್ನು ಸಂಘಟಿಸಿ ಭವಿಷ್ಯದ ದಿನಗಳಲ್ಲಿ ಬ್ರಾಹ್ಮಣರ ಉನ್ನತಿಗೆ ಶ್ರಮಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಉದ್ಯಮಿ ಅಗರಿ ರಾಘವೇಂದ್ರ ರಾವ್ ಹೇಳಿದರು.
ಕಿನ್ನಿಗೋಳಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ವಿಪ್ರ ಸಂಪದ ಪುನರೂರು ಆಶ್ರಯದಲ್ಲಿ ನಡೆದ ಪುನರೂರು, ತೋಕೂರು, ಕೆರೆಕಾಡು ವಲಯದ ವಿಪ್ರ ಸಮಾಗಮ -೨೦೧೪ ರ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಧಾರ್ಮಿಕ ಚಿಂತಕ ಕೊಲೆಕಾಡಿ ವಾದಿರಾಜ ಉಪಾಧ್ಯಾಯರು ಮಾತನಾಡಿ, ನಿರಂತರ ಸಾಧನೆಯಿಂದ ಲಭ್ಯವಾಗುವ ಬ್ರಾಹ್ಮಣ್ಯತ್ವದ ಮೇಲೆ ಎಲ್ಲಾ ವರ್ಣ ಮತ್ತು ವರ್ಗಗಳಿಗೂ ಅಧಿಕಾರವಿದ್ದು ಬ್ರಾಹ್ಮಣ್ಯತ್ವದ ಉನ್ನತಿಗಾಗಿ ಸಹಕರಿಸುವುದು ಎಲ್ಲರ ಆದ್ಯ ಕರ್ತವ್ಯ. ಸಂಸ್ಕಾರಯುತ ಆದರ್ಶ ಹಾಗೂ ಆಚಾರ ವಿಚಾರಗಳನ್ನು ಯುವ ಪೀಳಿಗೆಯಲ್ಲಿ ಆಸಕ್ತಿ ವಹಿಸುವಂತೆ ನೋಡಿಕೊಳ್ಳುವುದು ಹಿರಿಯರ ಕರ್ತವ್ಯ ಎಂದರು.
ಈ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿನಿ ಮಯೂರಿ ಅವರನ್ನು ಗೌರವಿಸಲಾಯಿತು, ಕ್ರೀಡಾಕೂಟದಲ್ಲಿ ವಿಜೇತರಾದರಿಗೆ ಬಹುಮಾನ ನೀಡಲಾಯಿತು.
ಪುನರೂರು ಶ್ರೀ ವಿಶ್ವನಾಥ ದೇವಳದ ಆಡಳಿತ ಮೊಕ್ತೇಸರ ಪಟೇಲ್ ವೆಂಕಟೇಶ್ ರಾವ್, ಉದ್ಯಮಿ.ಕೆ. ರಾಮಚಂದ್ರ ಭಟ್, ಬೆಂಗಳೂರು ಉದ್ಯಮಿ ಎನ್.ಕೆ. ನಾಗರಾಜ್, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಪುನರೂರು ವಿಪ್ರ ಸಂಪದ ಗೌರವಾಧ್ಯಕ್ಷ ಪಟೇಲ್ ವಾಸುದೇವ ರಾವ್, ಅಧ್ಯಕ್ಷ ಸುರೇಶ್ ರಾವ್ ಪುನರೂರು ಉಪಸ್ಥಿತರಿದ್ದರು.
ಪಟೇಲ್ ವಾಸುದೇವ ರಾವ್ ಸ್ವಾಗತಿಸಿದರು, ಗಣಪತಿ ಆಚಾರ್ಯ ವಂದಿಸಿದರು. ಪ್ರ್ರಾಣೇಶ್ ಭಟ್ ದೇಂದಡ್ಕ ಕಾರ್ಯಕ್ರಮ ನಿರೂಪಿಸಿದರು.

Kinnigoli-07101402

Comments

comments

Comments are closed.