ಪುನರೂರಿನಲ್ಲಿ ವಿಪ್ರ ಸಮಾಗಮ

ಕಿನ್ನಿಗೋಳಿ: ಪುನರೂರು ವಿಪ್ರ ಸಂಪದ ( ಪುನರೂರು, ಕೆರೆಕಾಡು, ತೋಕೂರು ವಲಯ)ಆಶ್ರಯದಲ್ಲಿ ವಿಪ್ರಸಮಾಗಮ- 2014 ಹಾಗೂ ಬ್ರಾಹ್ಮಣ ಬಂಧುಗಳಿಗಾಗಿ ಕ್ರೀಡಾ ಕೂಟ ಬಾನುವಾರ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ವಿಪ್ರ ಸಮಾಗಮ 2014 ನ್ನು ಬೆಳಿಗ್ಗೆ ಬೆಂಗಳೂರಿನ ಅಧ್ಯಾತ್ಮ ಚಿಂತಕ, ಅಂತರಾಷ್ಟ್ರೀಯ ವಾಸ್ತು ತಜ್ಞರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಿಲಿದ್ದಾರೆ. ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಲಿದ್ದಾರೆ. ಕಟೀಲು ದೇವಳ ಅರ್ಚಕ ವೆ. ಮೂ. ಅನಂತಪದ್ಮನಾಭ ಆಸ್ರಣ್ಣ ಶುಭಾಶಂಸೆನೆಗೈಯಲಿದ್ದಾರೆ. ಪುನರೂರು ದೇವಳದ ಧರ್ಮದರ್ಶಿ ಪಠೇಲ್ ವೆಂಕಟೇಶ್ ರಾವ್, ಪಾವಂಜೆ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಪ್ರಧಾನ ಅರ್ಚಕ ಪಾವಂಜೆ ಕೃಷ್ಣ ಭಟ್, ಮಾಜಿ ಶಾಸಕ ರಘಪತಿ ಭಟ್,ಮೂಡಬಿದಿರಿಯ ಉದ್ಯಮಿ ಶ್ರೀಪತಿ ಭಟ್, ಜಿಲ್ಲಾ ಕಸಾಪದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಯುಗಪುರುಷದ ಭುವನಾಭಿರಾಮ ಉಡುಪ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿರುವರು.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುರತ್ಕಲ್ ಅಗರಿ ಸಂಸ್ಥೆಯ ಮಾಲಕ ಅಗರಿ ರಾಘವೇಂದ್ರ ರಾವ್ ಅಧ್ಯಕ್ಷತೆಯಲ್ಲಿ ಮಂಗಳೂರಿನ ರಾಮನಾಥ ಸಂಸ್ಥೆಯ ಕೆ. ರಾಮಚಂದ್ರ ಭಟ್ ಬಹುಮಾನ ವಿತರಣೆ ಮಾಡಲಿರುವರು. ಧಾರ್ಮಿಕ ಚಿಂತಕ ವೆ. ಮೂ. ವಾದಿರಾಜ ಉಪಾಧ್ಯಾಯ, ಬೆಂಗಳೂರಿನ ಉದ್ಯಮಿ ಎನ್. ಕೆ. ನಾಗರಾಜ್, ಮೂಲ್ಕಿ ಲಯನ್ಸ್ ಅಧ್ಯಕ್ಷ ದೇವಪ್ರಸಾದ್ ಪುನರೂರು ಭಾಗವಹಿಸಲಿದ್ದಾರೆ. ಎಂದು ಪುನರೂರು ವಿಪ್ರ ಸಂಪದದ ಅಧ್ಯಕ್ಷ ಸುರೇಶ್ ರಾವ್ ಹಾಗೂ ಭುವನಾಭಿರಾಮ ಉಡುಪ ಬುಧವಾರ ಪುನರೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಪ್ರಸಂಪದದ ಗೌರವಾಧ್ಯಕ್ಷ ಪಠೇಲ್ ವಾಸುದೇವ ರಾವ್, ಪಠೇಲ್ ವೆಂಕಟೇಶ ರಾವ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ದೇವಪ್ರಸಾದ್ ಪುನರೂರು, ಜನಕರಾಜ್ ರಾವ್, ವಿಶ್ವನಾಥ ರಾವ್ ಪುನರೂರು, ಸುಧಾಕರ ರಾವ್, ರಾಜೇಂದ್ರ ರಾವ್, ಗಣಪತಿ ಆಚಾರ್ಯ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Kinnigoli-07101401

Comments

comments

Comments are closed.

Read previous post:
Kinnigoli-14101417
ಕಿನ್ನಿಗೋಳಿ ಬೃಹತ್ ಗ್ರಾಮ ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ: ರಾಷ್ಟ್ರೀಯ ಸೇವಾ ಯೋಜನೆ ಪೊಂಪೈ ಕಾಲೇಜು ಐಕಳ, ವಿದ್ಯಾರ್ಥಿ ಕ್ಷೇಮ ಪಾಲನಾ ಘಟಕ, ರೆಡ್ ರಿಬ್ಬನ್ ಕ್ಲಬ್, ಕಿನ್ನಿಗೋಳಿ ಮತ್ತು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ, ಯುಗಪುರುಷ, ಕಿನ್ನಿಗೋಳಿ...

Close