ಹಳೆಯಂಗಡಿ ಗ್ರಾಮ ಪಂ ಮಾಸಿಕ ಸಭೆ

ಮೂಲ್ಕಿ: ಅಧ್ಯಕ್ಷರ ಸಹಿ ಪೋರ್ಜರಿ ಪ್ರಕರಣ, ಹಳೆಯಂಗಡಿ ಮೀನು ಮಾರುಕಟ್ಟೆ ಸಮಸ್ಯೆ,ಸಾರ್ವಜನಿಕ ಶೌಚಾಲಯ ನಿರ್ಮಾಣ, ಬಸ್ಸು ನಿಲ್ದಾಣದಲ್ಲಿ ಮೀನು ಮಾರಾಟದ ಬಗ್ಗೆ ಆಕ್ಷೇಪ,ಸಾರ್ವಜನಿಕ ಸಮಸ್ಯೆಗಳ ಬಗ್ಗೆ ನೀಡಲಾದ ದೂರಿಗೆ ಪಿಡಿಒ ವಿಳಂಭ ಧೋರಣೆಯ ಬಗ್ಗೆ ಆಕ್ಷೇಪ ಮುಂತಾದ ದೂರುಗಳೊಂದಿಗೆ ಹಳೆಯಂಗಡಿ ಗ್ರಾಮ ಪಂ ಮಾಸಿಕ ಸಭೆ ಶನಿವಾರ ನಡೆಯಿತು. ಪಂಚಾಯತಿ ಅಧ್ಯಕ್ಷೆ ಪೂರ್ಣಿಮಾ ಮಧು ಅಧ್ಯಕ್ಷತೆಯಲ್ಲಿ ನಡೆದ ಸಮಾನ್ಯ ಸಭೆಯಲ್ಲಿ ವಿಪಕ್ಷ ಸದಸ್ಯ ನಾಗರಾಜ್ ರವರು ಕ್ರಿಯಾ ಯೋಜನೆಯ ವರದಿಯಲ್ಲಿ ಅಧ್ಯಕ್ಷರು ವಿಭಿನ್ನರೀತಿಯಲ್ಲಿ ಸಹಿ ಹಾಕಿದ್ದು ಇವುಗಳಲ್ಲಿ ಸರಿ ಯಾವುದು ಎಂದು ಅಧ್ಯಕ್ಷರ ಗಮನ ಸೆಳೆದರು. ಈ ಬಗ್ಗೆ ಪರೀಶೀಲಿಸಿದ ಅಧ್ಯಕ್ಷರು ಈ ಸಹಿ ನನ್ನದಲ್ಲ ಹಿಂದಿನ ಪಿಡಿಒ ಇರುವ ಸಂದರ್ಭ ನಡೆದಿರಬಹುದು ಎಂದು ಅನುಮಾನ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಮಾಜಿ ಅಧ್ಯಕ್ಷ ಮಹಾಬಲ ಸಾಲ್ಯಾನ್, ಸಹಿಯನ್ನು ಪೋರ್ಜರಿ ಮಾಡುವುದು ದೊಡ್ಡ ಅಫರಾಧ ಈ ಬಗ್ಗೆ ಕೂಲಂಕುಷ ತನಿಖೆಮಾಡಿ ಪ್ರಕರಣ ಲೋಕಾಯುಕ್ತಕ್ಕೆ ನೀಡಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಚರ್ಚೆನಡೆದು ಹಿಂದಿನ ಪಿಡಿಒ ರವರನ್ನು ಕರೆಸಿ ಅವರನ್ನು ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸಭೆ ನಿರ್ಧರಿಸಿತು. ಹಳೆಯಂಗಡಿ ಮೀನು ಮಾರುಕಟ್ಟೆಯ ಹಿಂದಿನ ನಿವಾಸಿಗಳಿಗೆ ಸಹಕಾರಿಯಾಗಲು ಮಾರುಕಟ್ಟೆಯ ಬಳಿ ರಸ್ತೆ ನಿರ್ಮಿಸಲಾಗಿದ್ದು ಈ ಬಗ್ಗೆ ಮೀನುಗಾರ ಸಂಘಟನೆಗಳು ವಿರೋಧ ವ್ಯಕ್ತ ಪಡಿಸಿರುವ ಹಿನ್ನಲೆಯಲ್ಲಿ ಎಲ್ಲಾ ಸಂಘಟನೆಗಳ ನಿಯೋಗ ಕರೆದು ಪಂಚಾಯತಿ ಸದಸ್ಯರೊಂದಿಗೆ ಚರ್ಚಿಸಿ ಒಮ್ಮತದ ನಿರ್ಣಯಕ್ಕೆ ಬರುವಂತೆ ಮಾಜಿ ಅಧ್ಯಕ್ಷ ವಸಂತ ಬೆರ್ನಾಡ್ ಸಲಹೆಗೆ ಸಭೆ ಸಮ್ಮತಿಸಿತು. ಹಳೆಯಂಗಡಿ ಬಸ್ಸು ನಿಲ್ದಾಣದಲ್ಲಿ ಮೀನು ಮಾರಾಟ ಮಾಡುವುದರಿಂದ ಬಸ್ಸಿಗಾಗಿ ಕಾಯುವವರಿಗೆ ಸಮಸ್ಯೆಯಾಗುತ್ತದೆ. ಮೀನಿನ ನೀರಿನ ದುರ್ವಾಸನೆ ತಡೆಯಲು ಸಾಧ್ಯವಿಲ್ಲ ಎಂದು ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಸದಸ್ಯ ಖಾಸಿಂ ಸಾಹೇಬ್ ಶೀಘ್ರ ಬಸ್ಸು ನಿಲ್ದಾಣದಲ್ಲಿ ಮೀನು ಮಾರುವವರ ವಿರುದ್ದ ಪಂಚಾಯತಿ ಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದರು. ಈ ಸಮಸ್ಯೆಯ ಬಗ್ಗೆ ದನಿ ಕೂಡಿಸಿದ ಸದಸ್ಯೆ ದೇವಕಿ ಮೆಂಡನ್ ಮಾತನಾಡಿ, ಸುಮಾರು 150ಕ್ಕೂ ಅಧಿಕ ಮಹಿಳೆಯರು ಮೀನು ಮಾರುತ್ತಿದ್ದರೂ ಮಾರುಕಟ್ಟೆಯಲ್ಲಿ ಮಾರಲು ಬರುವವರು ಕೇವಲ ಬೆರಳೆಣಿಕೆಯ ಮಂದಿ ಉಳಿದವರು ಬಸ್ಸು ನಿಲ್ದಾಣ ಮತ್ತು ಮನೆಮನೆಗೆ ಮಾರಾಟಕ್ಕೆ ಹೋಗುತ್ತಾರೆ ಕೇವಲ ಕೆಲ ಮಂದಿಗೋಸ್ಕರ ಮಾರುಕಟ್ಟೆಯ ಅವಶ್ಯಕತೆ ಏನು? ಈ ಬಗ್ಗೆ ಎಲ್ಲರನ್ನು ಕರೆದು ಅವರಿಂದ ಸಹಿ ಪಡೆದ ಬಳಿಕ ಮಾರುಕಟ್ಟೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ರಸ್ತೆ ಜಾಗ ಬಿಡದೆ ಅಕ್ರಮ ನಿರ್ಮಾಣದಲ್ಲಿ ತೊಡಗಿರುವ ಸಂದರ್ಭ ಸದಸ್ಯರು ಅಥವಾ ನಾಗರೀಕರು ಪಂಚಾಯತಿಗೆ ದೂರಿದಲ್ಲಿ ಪಿಡಿಒ ತಕ್ಷಣ ಕ್ರಮ ಕೈಗೊಳ್ಳದೆ ವಿಳಂಭ ಧೋರಣೆ ಅನುಸರಿಸಿ ಜನ ಸಾಮಾನ್ಯರಿಗೆ ಸಮಸ್ಯೆಯುಂಟು ಮಾಡುತ್ತಿದ್ದಾರೆ ಎಂದು ಮಹಾಬಲ ಸಾಲ್ಯಾನ್ ದೂರಿದರು. ಸಾದ್ಯವಾದಷ್ಟು ಸ್ಥಳಗಳಿಗೆ ತೆರಳಿ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಲುತ್ತಿದ್ದೇವೆ ಎಂದು ಪಿಡಿಒ ಹಸನಬ್ಬ ಉತ್ತರಿಸಿದರು. ಬೆಳೆಯುತ್ತಿರುವ ನಗರ ಹಳೆಯಂಗಡಿ ಪೇಟೆಯಲ್ಲಿ ಶೌಚಾಲಯ ವಿಲ್ಲದೆ ಪ್ರಯಾಣಿಕರಿಗೆ ಮತ್ತು ಜನ ಸಾಮಾನ್ಯರಿಗೆ ನಿಸರ್ಗ ಕರೆ ಪೂರೈಸಲು ಸಮಸ್ಯೆಯಾಗಿದೆ ಈ ಬಗ್ಗೆ ಶೀಘ್ರ ವ್ಯವಸ್ಥೆಯಾಗ ಬೇಕು ಎಂದು ವಿಪಕ್ಷ ಸದಸ್ಯರು ಆಗ್ರಹಿಸಿದರು. ಸಧ್ಯ ಪೇಟೆಯಲ್ಲಿ ಸ್ಥಳವನ್ನು ನಿಗದಿ ಪಡಿಸಿದ್ದು ಸಹೃದಯ ದಾನಿ ಶೌಚಾಲಯ ನಿರ್ಮಿಸುವ ಕೊಡುಗೆ ನೀಡಿದ್ದಾರೆ ಶೀಘ್ರ ಶೌಚಾಲಯ ನಿರ್ಮಾಣ ಗೊಳ್ಳಲಿದೆ ಎಂದು ಉಪಾಧ್ಯಕ್ಷ ಅಬ್ದುಲ್ ಖಾದರ್ ಹೇಳಿದರು.ಸದಸ್ಯೆ ಸುಜಾತಾ ವಾಸುದೇವ್ ಮಾಜಿ ಅಧ್ಯಕ್ಷ ಸಂತೋಷ್ ಗ್ರಾಮದ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು ಪಿಡಿಒ ಹಸನಬ್ಬ ವಂದಿಸಿದರು.

Bhagyavan Sanil

Kinnigoli-08101414

Comments

comments

Comments are closed.

Read previous post:
Kinnigoli-08101413
ದ್ವನಿ ತಂಡ ಚೆನ್ನಯ್

ದ್ವನಿ  ತಂಡ  ಚೆನ್ನಯ್  ಇವರಿಂದ  ನೃತ್ಯ  ವೈವಿದ್ಯಾ ಕಾರ್ಯಕ್ರಮ ನಡೆಯಿತು.  Arun Ullanje  

Close