ಮೂಲ್ಕಿ: ಶಿಕ್ಷಕ ರಕ್ಷಕ ಸಭೆ

ಮೂಲ್ಕಿ: ವಿಜಯ ಪದವಿ ಪೂರ್ವಕಾಲೇಜು 2014-15ನೇ ಸಾಲಿನ ಶಿಕ್ಷಕ ರಕ್ಷಕ ಸಭೆ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ಆಶಾ ಜ್ಯೋತಿಯವರು ಪಾಲ್ಗೊಂಡಿದ್ದರು. ಅವರು ಕಾರ್ಯಕ್ರಮವನ್ನು ಉದ್ದೇಶಿಸಿ   ಭಾರತ ದೇಶವು ವಿಶಿಷ್ಟ ಪರಂಪರೆಯನ್ನು ಹೊಂದಿರುವ ದೇಶ. ಇಂದಿನ ಯುವಜನತೆ ದಾರಿತಪ್ಪುತ್ತಿರುವುದರಿಂದ ಪ್ರಸ್ತುತ ಸಂದರ್ಭದಲ್ಲಿ ದೇಶದ ಸಂಸ್ಕೃತಿಯು ವಿನಾಶದ ಅಂಚಿಗೆ ಬಂದು ತಲುಪುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಗಿಡವಾಗಿದ್ದಾಗಲೇ ಬಗ್ಗಿಸಿ ಉತ್ತಮ ಸಂಸ್ಕಾರ, ಶಿಕ್ಷಣ, ಪ್ರೀತಿ- ಸ್ನೇಹ, ಜೀವನ ಮೌಲ್ಯಗಳನ್ನು , ನೈತಿಕತೆಯನ್ನು ಕಲಿಸುವುದರ ಮೂಲಕ ಅವರನ್ನು ಸತ್ಪ್ರಜೆಯನ್ನಾಗಿ ರೂಪಿಸುವ ಜವಬ್ದಾರಿ  ಪೋಷಕರದ್ದಾಗಬೇಕು ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಿಜಯ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಡಾ. ಎಂ. ಎ. ಆರ್ ಕುಡ್ವರವರು  ವಹಿಸಿಕೊಂಡಿದ್ದರು. ವಿಜಯ ಪದವಿ ಪೂರ್ವ ಕಾಲೇಜಿನ  ಪ್ರಾಂಶುಪಾಲರಾದ  ಪಮೀದ ಬೇಗಂರವರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ವಿಜಯ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಕೆ.ಆರ್ ಶಂಕರ್‌ರವರು  ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2014-15ನೇ ಸಾಲಿನ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಯಾಗಿ  ಶಶಿಕಲಾರವರನ್ನು ಆಯ್ಕೆ ಮಾಡಲಾಯಿತು. 2013-14 ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸ್ಮರಣಿಕೆ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.  ಆಂಗ್ಲ ವಿಭಾಗದ ಉಪನ್ಯಾಸಕರಾದ  ರೂಪಶ್ರೀಯವರು ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ವಂದಿಸಿದರು, ಕನ್ನಡ ವಿಭಾಗದ ಉಪನ್ಯಾಸಕರಾದ  ರಾಧಿಕರವರು ಕಾರ್ಯಕ್ರಮವನ್ನು ನಿರೂಪಿಸಿದರು.

Bhagyavan Sanil

Kinnigoli-08101415

Comments

comments

Comments are closed.

Read previous post:
Kinnigoli-08101414
ಹಳೆಯಂಗಡಿ ಗ್ರಾಮ ಪಂ ಮಾಸಿಕ ಸಭೆ

ಮೂಲ್ಕಿ: ಅಧ್ಯಕ್ಷರ ಸಹಿ ಪೋರ್ಜರಿ ಪ್ರಕರಣ, ಹಳೆಯಂಗಡಿ ಮೀನು ಮಾರುಕಟ್ಟೆ ಸಮಸ್ಯೆ,ಸಾರ್ವಜನಿಕ ಶೌಚಾಲಯ ನಿರ್ಮಾಣ, ಬಸ್ಸು ನಿಲ್ದಾಣದಲ್ಲಿ ಮೀನು ಮಾರಾಟದ ಬಗ್ಗೆ ಆಕ್ಷೇಪ,ಸಾರ್ವಜನಿಕ ಸಮಸ್ಯೆಗಳ ಬಗ್ಗೆ ನೀಡಲಾದ ದೂರಿಗೆ...

Close