ಶಾಂಭವಿ ಜೇಸಿಐ ಆಶ್ರಯದಲ್ಲಿ ಜರಗಿದ ಜೇಸಿ ಸಪ್ತಾಹ

ಮುಲ್ಕಿ: ಜೇಸಿಐ ಸಂಸ್ಥೆಯು ತರಬೇತಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಯುವ ಸಮುದಾಯದ ಪ್ರತಿಭೆಯನ್ನು ಗುರುತಿಸಿ ತರಬೇತಿ ನೀಡುವ ಮೂಲಕ ಆವರ ವ್ಯಕ್ತಿತ್ವವನ್ನು ವಿಕಸನಗೊಳಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವ ಕಾರ್ಯ ಮಾಡುತ್ತಿದೆಯೆಂದು ಜೇಸಿಐನ ವಲಯಾಧ್ಯಕ್ಷ ಜೆಎಫ್‌ಡಿ ಚಂದ್ರಶೇಖರ್ ನಾಯರ್ ಹೇಳಿದರು.
ಮುಲ್ಕಿಯ ಹೋಟೆಲ್ ಆಧಿಧನ್ ನ ಸಭಾಂಗಣದಲ್ಲಿ ಶಾಂಭವಿ ಜೇಸಿಐ ಆಶ್ರಯದಲ್ಲಿ ಜರಗಿದ ಜೇಸಿ ಸಪ್ತಾಹದ ಸಮಾರೋಪ ಹಾಗೂ ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ಆವರು ಮಾತನಾಡಿದರು.ಅಧ್ಯಕ್ಷತೆಯನ್ನು ಮುಲ್ಕಿ ಶಾಂಭವಿ ಜೇಸಿಐನ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ವಹಿಸಿದ್ದು ಕಾರ್ಯಕ್ರಮದಲ್ಲಿ ಹಿರಿಯ ಪ್ರಗತಿಪರ ಕೃಷಿಕ ಪ್ರಭಾಕರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಅತ್ಯಧಿಕ ಅಂಕ ಗಳಿಸಿ ಸಾಧನೆಗೈದ ಪ್ರಜ್ನಾ,ಮಯೂರಿ ಮತ್ತು ಕವನ್ ರಾಜ್ ರನ್ನು ಗೌರವಿಸಲಾಯಿತು.ಜೇಸಿ ಸದಸ್ಯ ಉದ್ಯಮಿ ಹರೀಂದ್ರ ಸುವರ್ಣರಿಗೆ ಕಮಲ ಪತ್ರ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.ಹಾಗೂ ಪೂರ್ವಾದ್ಯಕ್ಷರನ್ನು ಗೌರವಿಲಾಯಿತು.
ವಲಯ ಉಪಧ್ಯಕ್ಷ ದತ್ತಾತ್ರೇಯ,ವಲಯ ಕಾರ್ಯದರ್ಶಿ ಸುಜಿತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಮುಲ್ಕಿ ಶಾಂಭವಿ ಜೇಸಿಐ ಸಂಸ್ತೆಯ ಕಾರ್ಯದರ್ಶಿ ತ್ರಿವಿಕ್ರಮ ಪ್ರಭು,ಜೇಸಿ ಸಪ್ತಾಹದ ಮಹಾ ನಿರ್ದೇಶಕ ಪ್ರದೀಪ್ ಮುಲ್ಕಿ, ಸಂಯಾಜಕರಾದ ರೋಹಿತ್ ಶೆಟ್ಟಿ,ನವೀನ್ ಶೆಟ್ಟಿ, ಉಪಸ್ತಿತರಿದ್ದರು.
ಜೇಸಿಐ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು,ಪ್ರದೀಪ್ ಮುಲ್ಕಿ ವಂದಿಸಿದರು.

Prakash Suvarna

Kinnigoli-08101408 Kinnigoli-08101411 Kinnigoli-08101410 Kinnigoli-08101409

Comments

comments

Comments are closed.

Read previous post:
gana sambrama new
ಯಕ್ಷಗಾನ ಗಾನ ಸಂಭ್ರಮ

ಯಕ್ಷಗಾನ  ಗಾನ ಸಂಭ್ರಮ

Close