ಡಿವೈನ್ ಕಾಲ್ ಸೆಂಟರ್ ದಶಮಾನೋತ್ಸವ

ಮೂಲ್ಕಿ: ಶಾಂತಿಯುತ ಮನೋಭಾವನೆಯಿಂದ ಏಕಾಗ್ರತೆಯಲ್ಲಿ ನಡೆಸುವ ಪ್ರಾರ್ಥನೆಯು ನಮ್ಮ ಜೀವನದ ಕಷ್ಟಗಳನ್ನು ದೂರಮಾಡಿ ಮಾನಸಿಕ ಶಾಂತಿ ಹಾಗೂ ದೈಹಿಕ ಆರೋಗ್ಯ ನೀಡುವುದು ಎಂದು ಶಿವಮೊಗ್ಗಧರ್ಮ ಪ್ರಾಂಥ್ಯದ ಬಿಷಪ್ ರೆ.ಪ್ರಾನ್ಸೀಸ್ ಸೆರಾವೊ ಹೇಳಿದರು. ಮೂಲ್ಕಿ ದೈವಿಕ ಕರೆ ಕೇಂದ್ರ(ಡಿವೈನ್ ಕಾಲ್ ಸೆಂಟರ್)ನ ದಶಮಾನೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ನೆರವೇರಿಸಿ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನದ ಸಂಕಷ್ಟಗಳನ್ನು ಶೀಘ್ರ ಪರಿಹಾರ ಕಂಡುಕೊಳ್ಳಲು ಮೂಲ್ಕಿ ದೈವಿಕ ಕರೆ ಕೇಂದ್ರ ಉತ್ತಮ ವಾಗಿದೆ ಎಂದರು.
ಈ ಸಂದರ್ಭ ಮೂಲ್ಕಿ ದೈವಿಕ ಕರೆ ಕೇಂದ್ರ ನಿರ್ದೇಶಕರಾದ ಫಾ.ವಲೇರಿಯನ್ ಫಾಸ್ ಫೆರ್ನಾಂಡೀಸ್ ಮಾತನಾಡಿ, ಗ್ರಾಮೀಣ ಪ್ರದೇಶವಾದ ಮೂಲ್ಕಿಯಲ್ಲಿರುವ ಕೇಂದ್ರದಲ್ಲಿ ನಿರಂತರ ಪ್ರಾರ್ಥನಾ ಕೂಟಗಳನ್ನು ನಡೆಸಲಾಗುತ್ತಿದ್ದು ಆರ್ಥಿಕ,ಸಾಮಾಜಿಕ, ಮಾನಸಿಕ,ದೈಹಿಕ ಸಮಸ್ಯೆಗಳಿಂದ ಬಳಲಿರುವ ಜನರು ಬಂದು ತಮ್ಮ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದರಿಂದ ಭಕ್ತಜನ ಸಂದಣಿ ಹೆಚ್ಚಾಗಿದ್ದು ಇದಕ್ಕಾಗಿ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು. ರಾತ್ರಿ ಪೂಜೆಯ ಸಂದರ್ಭ ಬೈಬಲ್ ಪಾರಾಯಣ, ಪವಿತ್ರ ಪರಮ ಪ್ರಸಾದ ಮೆರವಣಿಗೆಯೊಂದಿಗೆ ನಡೆಯಿತು.
ಕೇಂದ್ರದ ಮಾಜಿ ನಿರ್ದೇಶಕರರಾದ ಪಾ.ಸಿಪ್ರಿಯನ್ ಲೂವಿಸ್, ಪಾ, ಪ್ರಾನ್ಸೀಸ್ ಫೆನಾಂಡೀಸ್,ಫಾ.ಅಬ್ರಹಾಂ ಡಿಸೋಜಾ ರವರನ್ನು ಗೌರವಿಸಲಾಯಿತು.ಫಾ.ಪೌಲ್ ವಟ್ಟತ್ತರಾ,ಫಾ.ವಿನ್ಸೆಂಟ್ ಮೊಂತೇರೊ,ಫಾ.ಆಂಡ್ರು ಡಿಸೋಜಾ ಪಕ್ಷಿಕೆರೆ ,ಫಾ.ನೋರ‍್ಭಟ್ ಲೋಬೋ ಮೂಲ್ಕಿ,ಪಾ.ಅನಿಲ್ ಕಿರಣ್ ಫೆರ್ನಾಂಡೀಸ್,ಪಾ.ವಾಲ್ಡರ್ ಮೆಂಡೋನ್ಸಾ,ಫಾ.ಪ್ರಾಂಕ್ಲಿನ್,ಫಾ. ಬೊನವೆಂಚರ್ ಕಾರವಾರ,ಪಾ.ವಲೇರಿಯನ್ ಫೆರ್ನಾಂಡೀಸ್,ಫಾ.ಇವನ್ ಗೊಮ್ಸ್,ರೋನಿ ಮತ್ತಿತರರು ಉಪಸ್ಥಿತರಿದ್ದರು.

Bhagyavan Sanil

Kinnigoli-09101408

Comments

comments

Comments are closed.

Read previous post:
Kinnigoli-09101407
ಆಯುಧ ಪೂಜೆ ಮತ್ತು ಭಜನಾ ಸತ್ಸಂಗ ಕಾರ್ಯಕ್ರಮ

ಮೂಲ್ಕಿ: ಜೀವನವಶ್ಯಕವಾದ ಸಲಕರಣೆಗಳು,ಪ್ರಕೃತಿ ಪ್ರಾಣಿಗಳಲ್ಲಿ ದೇವರನ್ನು ಕಂಡು ಸೇವೆಗೆ ಕೃತಜ್ಞತೆ ಸಲ್ಲಿಸುವ ಭಾರತೀಯ ಸಂಸ್ಕಾರವೇ ನಾವು ನಡೆಸುವ ಆಯುಧಪೂಜೆಯಾಗಿದೆ ಎಂದು ಹಿರಿಯ ಸಂಕೀರ್ಥನಾಕಾರ ಶ್ರೀನಿವಾಸ ಭಾಗವತ್ ಹೇಳಿದರು.ತೋಕೂರು...

Close