ಮಹಿಳೆಯರ ಮತ್ತು ಪುರುಷರ ಬ್ಯಾಡ್ಮಿಂಟನ್

ಮೂಲ್ಕಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಗ್ರಾಮಾಂತರ ಮತ್ತು ಮೂಲ್ಕಿ ವಿಜಯಾ ಪದವಿ ಪೂರ್ವ ಕಾಲೇಜು ಸಂಯೋಜನೆಯಲ್ಲಿ ನಡೆದ ತಾಲೂಕು ಮಟ್ಟದ ಮಹಿಳೆಯರ ಮತ್ತು ಪುರುಷರ ಬ್ಯಾಡ್ಮಿಂಟನ್ ಪಂದ್ಯಾಕೂಟದ ಮಹಿಳೆಯರ ವಿಭಾಗದ ಪ್ರಥಮ ಪ್ರಶಸ್ತಿಯನ್ನು ಅತಿಥೇಯ ವಿಜಯಾ ಕಾಲೇಜು ತಂಡ ಗಳಿಸಿದೆ. ಪುರುಷರ ವಿಭಾಗದ ಪ್ರಥಮ ಪ್ರಶಸ್ತಿ ಮಂಗಳೂರು ವಾಮಂಜೂರು ಸಂತ ರೇಮಂಡ್ಸ್ ಪದವಿ ಪೂರ್ವ ಕಾಲೇಜು ಗಳಿಸಿದೆ. ಮಹಿಳೆಯರ ದ್ವಿತೀಯ ಪ್ರಶಸ್ತಿ ವಾಮಂಜೂರು ಸಂತ ರೇಮಂಡ್ಸ್ ಪದವಿ ಪೂರ್ವ ಕಾಲೇಜು ಮತ್ತು ಪುರುಷರ ವಿಭಾಗದ ದ್ವಿತೀಯ ಪ್ರಶಸ್ತಿಯನ್ನು ಶ್ರೀ ಮಹಾವೀರ ಕಾಲೇಜು ಮೂಡಬಿದ್ರೆ ಗಳಿಸಿದೆ. ಉತ್ತಮ ಆಟಗಾರರಾಗಿ ಮೂಲ್ಕಿ ವಿಜಯಾ ಕಾಲೇಜಿನ ಮಾಧುರಿ ಮತ್ತು ಸಂತ ರೇಮಂಡ್ಸ್ ಕಾಲೇಜಿನ ನಿಕಿತ್ ಪ್ರಶಸ್ತಿ ಗಳಿಸಿದ್ದಾರೆ.
ಉದ್ಘಾಟನೆ: ಮೂಲ್ಕಿ ವಿಜಯಾ ಕಾಲೇಜಿನ ಇನ್‌ಡೋರ್ ಸ್ಟೇಡಿಯಮ್‌ನಲ್ಲಿ ಮಂಗಳವಾರ ನಡೆದ ಪಂದ್ಯಾಕೂಟದ ಉದ್ಘಾಟನೆಯನ್ನು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ನಡೆಸಿ, ಕ್ರೀಡಾ ಭಾಗವಹಿಸುವಿಕೆಯು ಆರೋಗ್ಯ ಗಳಿಕೆ ಹಾಗೂ ಬೌಧ್ಧಿಕ ವಿಕಾಸಕ್ಕೆ ಸಹಕರಿಸುವುದರೊಂದಿಗೆ ಕ್ರೀಡಾ ಕ್ಷೇತ್ರದ ಸಾಧನೆ ಜೀವನದ ಉನ್ನತಿ ಗಳಿಸಲು ಸಹಕಾರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ವಹಿಸಿದ್ದರು.ನೇಹಾ ಪ್ರಾರ್ಥಿಸಿದರು. ವಿಜಯಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಪಮೀದಾ ಬೇಗಂ ಸ್ವಾಗತಿಸಿದರು.ಅರುಣಾ ನಿರೂಪಿಸಿದರು. ದೈಹಿಕ ಶಿಕ್ಷಕ ಯತೀಶ್ ಕುಮಾರ್ ವಂದಿಸಿದರು.

Bhagyavan Sanil

Kinnigoli-09101409

Comments

comments

Comments are closed.

Read previous post:
Kinnigoli-14101415
ತೋಕೂರು ದೇವಳದ ಶಿಲಾ ಮೂಹೂರ್ತ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ದಾರ ಪ್ರಯುಕ್ತ ೫ಕೋಟಿ ರೂ ವೆಚ್ಚದಲ್ಲಿ ನೂತನ ಶಿಲಾಮಯ ಶ್ರೀ ಸುಬ್ರಹ್ಮಣ್ಯ ದೇವರು, ಮಹಾಗಣಪತಿ ಮತ್ತು ಶ್ರೀ ದುರ್ಗೆಯ...

Close