ಆಯುಧ ಪೂಜೆ ಮತ್ತು ಭಜನಾ ಸತ್ಸಂಗ ಕಾರ್ಯಕ್ರಮ

ಮೂಲ್ಕಿ: ಜೀವನವಶ್ಯಕವಾದ ಸಲಕರಣೆಗಳು,ಪ್ರಕೃತಿ ಪ್ರಾಣಿಗಳಲ್ಲಿ ದೇವರನ್ನು ಕಂಡು ಸೇವೆಗೆ ಕೃತಜ್ಞತೆ ಸಲ್ಲಿಸುವ ಭಾರತೀಯ ಸಂಸ್ಕಾರವೇ ನಾವು ನಡೆಸುವ ಆಯುಧಪೂಜೆಯಾಗಿದೆ ಎಂದು ಹಿರಿಯ ಸಂಕೀರ್ಥನಾಕಾರ ಶ್ರೀನಿವಾಸ ಭಾಗವತ್ ಹೇಳಿದರು.ತೋಕೂರು ತಪೋವನದ ಮೂಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆದ ಆಯುಧ ಪೂಜೆ ಮತ್ತು ಭಜನಾ ಸತ್ಸಂಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮನಸ್ಸನ್ನು ಏಕಾಗ್ರತೆಯಲ್ಲಿರಿಸಿ ದೈಹಿಕ ಮತ್ತು ಮಾನಸಿಕ ಸಂಕಷ್ಟಗಳನ್ನು ಮರೆತು ಹಾಡುವ ಸಂಕೀರ್ಥನೆಗಳು ಮಾನಸಿಕ ಶಾಂತಿ ನೀಡುವುದಲ್ಲದೆ ಉತ್ತಮ ಆರೋಗ್ಯ ಗಳಿಸಲು ಸಹಕರಿಸುತ್ತದೆ ಎಂದರು.ಈ ಸಂಧರ್ಭದಲ್ಲಿ ಸಂಸ್ಥೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಭಜನಾ ಸತ್ಸಂಗ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವೈ ಎನ್. ಸಾಲಿಯಾನ್ ಸಂಸ್ಥೆಯ ವತಿಯಿಂದ ಶ್ರೀನಿವಾಸ ಭಾಗವತರನ್ನು ಗೌರವಿಸಿದರು. ತರಬೇತಿ ಅಧಿಕಾರಿ ರಘುರಾಮ ರಾವ್ , ಸಂಜೀವ ದೇವಾಡಿಗ ಮತ್ತು ಶಿಕ್ಷಕ ಮತ್ತು ಶಿಕ್ಷಕೇತರ ಸಿಂಬ್ಬಂದಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಲಕ್ಷ್ಮೀಕಾಂತ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Bhagyawan Sanil

Kinnigoli-09101407

 

Comments

comments

Comments are closed.

Read previous post:
Kinnigoli-09101405
ಹಂಗಾರಕಟ್ಟೆ -ಶ್ರಿಮಠ ಬಾಳೆಕುದ್ರು ಸೀಮೊಲಂಘನ

ಮೂಲ್ಕಿ;  ಶ್ರೀ ನೃಸಿಂಹಾಶ್ರಮ ಶ್ರಿಮಠ ಬಾಳೆಕುದ್ರು ,ಹಂಗಾರಕಟ್ಟೆ ಇವರು  ತನ್ನ ಚಾರ್ತುಮಾಸವನ್ನು ಮುಗಿಸಿ ಸೀಮೊಲಂಘನ ಕಾರ್ಯಕ್ರಮಕ್ಕೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ದೇವಸ್ಥಾನಕ್ಕೆ ಆಗಮಿಸಿದ್ದು ಅವರನ್ನು ವೇದಗೋಷಗಳಿಂದ...

Close