ತೋಕೂರು ದೇವಳದ ಶಿಲಾ ಮೂಹೂರ್ತ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ಜೀರ್ಣೋದ್ದಾರ ಪ್ರಯುಕ್ತ ೫ಕೋಟಿ ರೂ ವೆಚ್ಚದಲ್ಲಿ ನೂತನ ಶಿಲಾಮಯ ಶ್ರೀ ಸುಬ್ರಹ್ಮಣ್ಯ ದೇವರು, ಮಹಾಗಣಪತಿ ಮತ್ತು ಶ್ರೀ ದುರ್ಗೆಯ ಗರ್ಭಗುಡಿಯ ಪುನ: ನಿರ್ಮಾಣ ಸುತ್ತು ಪೌಳಿ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗಾಗಿ ಪೂರ್ವಭಾವಿಯಾಗಿ ಬುಧವಾರ ಬೆಳಿಗ್ಗೆ ಶ್ರೀ ಕ್ಷೇತ್ರದಲ್ಲಿ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿಗಳ ಪೌರೋಹಿತ್ಯದೊಂದಿಗೆ ದೇವಳದ ಪ್ರಾಂಗಣದಲ್ಲಿ ದೇವತಾ ಪ್ರಾರ್ಥನೆಗೈದು ಶಿಲಾ ಪೂಜೆ ಮತ್ತು ಶಿಲಾ ಮುಹೂರ್ತ ನಡೆಯಿತು.
ಈ ಸಂದರ್ಭ ಕ್ಷೇತ್ರದ ಸ್ಥಪತಿಗಳಾದ ಕುಡುಪು ಕೃಷ್ಣರಾಜ ತಂತ್ರಿ, ಅರ್ಚಕ ಮಧುಸೂಧನ್ ಭಟ್ , ದೇವಳದ ಆಡಳಿತ ಮೊಕ್ತೇಸರ ತೋಕೂರು ಗುತ್ತು ಭಾಸ್ಕರ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಜಿಗುತ್ತು ಕೆ. ವ್ಯಾಸರಾವ್, ಇಂಜಿನಿಯರ್ ಎಲ್ಲೂರು ವಿಷ್ಣುಮೂರ್ತಿ ಭಟ್, ಶಿಲ್ಪಿ ಅಣ್ಣಪ್ಪ ನಾಯ್ಕ್, ಸಮಿತಿಯ ಗೌರವಾಧ್ಯಕ್ಷರಾದ ಮಾಜಿ ಸಚಿವ ಅಮರನಾಥ ಶೆಟ್ಟಿ , ಕಾರ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಮಿತಿಯ ಗೌರವ ಸಲಹೆಗಾರರಾದ ಅತ್ತೂರು ಹೊಸಲೊಟ್ಟು ಬಾಬು ಶೆಟ್ಟಿ, ಕೊಲ್ನಾಡು ಉತ್ರುಂಜೆ ಭುಜಂಗ. ಎಮ್ ಶೆಟ್ಟಿ, ಪದ್ಮನಾಭ ಆಚಾರ್ಯ, ಕೆ.ಭುವನಾಭಿರಾಮ ಉಡುಪ, ಉಮಾನಾಥ ಕೋಟ್ಯಾನ್, ವಿನೋದ್ ಸಾಲ್ಯಾನ್ ಪಡುಪಣಂಬೂರು, ರಾಮಚಂದ್ರ ನಾಯ್ಕ್, ಟಿ.ಜಿ. ಭಂಡಾರಿ, ಹರಿದಾಸ್ ಭಟ್ ವಿನೋದ್ ಬೆಳ್ಳಾಯರು, ಗುಣಪಾಲ ಶೆಟ್ಟಿ, ಚಂದ್ರಶೇಖರ್ ನಾನಿಲ್, ಗುರುರಾಜ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-14101415

Comments

comments

Comments are closed.

Read previous post:
Kinnigoli-09101408
ಡಿವೈನ್ ಕಾಲ್ ಸೆಂಟರ್ ದಶಮಾನೋತ್ಸವ

ಮೂಲ್ಕಿ: ಶಾಂತಿಯುತ ಮನೋಭಾವನೆಯಿಂದ ಏಕಾಗ್ರತೆಯಲ್ಲಿ ನಡೆಸುವ ಪ್ರಾರ್ಥನೆಯು ನಮ್ಮ ಜೀವನದ ಕಷ್ಟಗಳನ್ನು ದೂರಮಾಡಿ ಮಾನಸಿಕ ಶಾಂತಿ ಹಾಗೂ ದೈಹಿಕ ಆರೋಗ್ಯ ನೀಡುವುದು ಎಂದು ಶಿವಮೊಗ್ಗಧರ್ಮ ಪ್ರಾಂಥ್ಯದ ಬಿಷಪ್...

Close