ಕಲ್ಲಮುಂಡ್ಕೂರಿನಲ್ಲಿ ಅಂಚೆ ಕಛೇರಿ ಉದ್ಘಾಟನೆ

 ಕಿನ್ನಿಗೋಳಿ: ಮುಂದಿನ ವರ್ಷಗಳಲ್ಲಿ ಆಧಾರ್ ನೊಂದಣಿ, ವಿದ್ಯುತ್ ಬಿಲ್ಲು ಸಹಿತ ಹಲವಾರು ಸೇವಾ ಯೋಜನೆಗಳು ಗ್ರಾಮೀಣ ಭಾಗದ ಅಂಚೆಕಛೇರಿಗಳಲ್ಲಿಯೂ ಸೇವೆ ಸೌಲಭ್ಯಗಳನ್ನು ನೀಡಲಾಗುತ್ತದೆ. ಎಂದು ಪುತ್ತೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಟಿ. ಜಿ. ನಾಯ್ಕ್ ಹೇಳಿದರು.
ಬುಧವಾರ ನಿಡ್ಡೋಡಿಯಲ್ಲಿ ಕಲ್ಲಮುಂಡ್ಕೂರು ಇಲಾಖಾ ಅಂಚೆಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿನ 1.25ಲಕ್ಷ ಗ್ರಾಮೀಣ ಭಾಗದ ಅಂಚೆ ಕಚೇರಿಗಳನ್ನು ಸುಮಾರು 4,900 ಕೋಟಿ ರೂ ವೆಚ್ಚದಲ್ಲಿ ಕಂಪ್ಯೂಟರೀಕರಣಗೊಳಿಸುವ ಯೋಜನೆಯಿದ್ದು ಇಲ್ಲಿನ ಗ್ರಾಮೀಣ ಅಂಚೆಕಚೇರಿಯ ವ್ಯವಹಾರ ಉತ್ತಮವಾಗಿರುವುದರಿಂದ ಗ್ರಾಮೀಣ ಅಂಚೆಕಛೇರಿಯನ್ನು ಪೂರ್ಣ ಪ್ರಮಾಣದ ಇಲಾಖಾ ಕಛೇರಿಯನ್ನಾಗಿ ಪರಿವರ್ತಿಸಲಾಗಿದೆ ಇತರ ಅಂಚೆ ಇಲಾಖೆಯ ಕಛೇರಿಯಲ್ಲಿ ದೊರಕುವ ಎಲ್ಲಾ ಸೇವಾ ಯೋಜನೆಗಳು ಇಲ್ಲಿ ದೊರೆಯಲಿದೆ ಎಂದು ಸಹಾಯಕ ಅಂಚೆ ಅಧೀಕ್ಷಕ ನವೀನ್‌ಚಂದ್ರ ಹೇಳಿದರು.
ನಿಡ್ಡೋಡಿ ಚರ್ಚ್‌ನ ಧರ್ಮಗುರು ಫಾ. ಜೊಸೆಫ್ ಲೋಬೋ ಶುಭ ಹಾರೈಸಿದರು. ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜೋಕಿಂ ಕೊರೆಯಾ, ವರದರಾಜ ಕಾಮತ್, ಸುಭಾಶ್ಚಂದ್ರ ಪಡಿವಾಳ್, ಸಹಾಯಕ ಅಂಚೆ ಅಧೀಕ್ಷಕರಾದ ಧನಂಜಯ, ದಿನೇಶ್, ಅಂಚೆ ನೀರಿಕ್ಷಕರಾದ ಬೋರ್‌ಸಿಂಗ್ ಮೀನಾ, ರಾಜು ಕೆ, ಅಧಿಕಾರಿಗಳಾದ ಪ್ರಾನ್ಸಿಸ್ ಗೋವಿಸ್, ಕೃಷ್ಣ ನಾಯ್ಕ್, ಅಂಚೆ ಪಾಲಕಿ ರಾಜೇಶ್ವರೀ ಉಪಸ್ಥಿತರಿದ್ದರು. ಈ ಸಂದರ್ಭ ಅಂಚೆ ಕಚೇರಿಗೆ ಸಹಕರಿಸಿದ ಸದಾಶಿವ ಪ್ರಭುರವರನ್ನು ಗೌರವಿಸಲಾಯಿತು.

Kinnigoli-14101416

Comments

comments

Comments are closed.

Read previous post:
Kinnigoli-11101401
ಗೋಪಾಲಕೃಷ್ಣ ಆಸ್ರಣ್ಣ 13ನೆ ಸಂಸ್ಮರಣಾ ಕಾರ್ಯಕ್ರಮ

ಮುಂಬಯಿ : ಶಕ್ತಿಯ ಮೇಲೆ ನಿಜವಾದ ಭಕ್ತಿ ಇದ್ದಲ್ಲಿ ಅದು ನಮ್ಮನ್ನು ಸಂರಕ್ಷಿಸುತ್ತದೆ ಎಂದ ಅವರು ಶಕ್ತಿಗಿಂತ ಭಕ್ತಿಯೇ ಮೇಲು, ಈ ರೀತಿ ಇನ್ನು ಮುಂದೆಯೂ ನಿಮ್ಮೆಲ್ಲರ ವಿಶೇಷ...

Close