ಗೋಪಾಲಕೃಷ್ಣ ಆಸ್ರಣ್ಣ 13ನೆ ಸಂಸ್ಮರಣಾ ಕಾರ್ಯಕ್ರಮ

ಮುಂಬಯಿ : ಶಕ್ತಿಯ ಮೇಲೆ ನಿಜವಾದ ಭಕ್ತಿ ಇದ್ದಲ್ಲಿ ಅದು ನಮ್ಮನ್ನು ಸಂರಕ್ಷಿಸುತ್ತದೆ ಎಂದ ಅವರು ಶಕ್ತಿಗಿಂತ ಭಕ್ತಿಯೇ ಮೇಲು, ಈ ರೀತಿ ಇನ್ನು ಮುಂದೆಯೂ ನಿಮ್ಮೆಲ್ಲರ ವಿಶೇಷ ಭಕ್ತಿಯು ಕಟೀಲಿನ ಮೇಲೆ ಇರಲಿ ಎನ್ನುತ್ತಾ ತನ್ನ ತೀರ್ಥರೂಪರಿಗೆ ಯಕ್ಷಗಾನದ ಮೇಲಿದ್ದ ಪ್ರೀತಿ ಹಾಗೂ ಅವರು ರಾಮ ಹಾಗೂ ಕೃಷ್ಣನಾಗಿ ಪಾತ್ರ ನಿರ್ವಹಿಸಿದ ಬಗ್ಗೆ ತಿಳಿಸಿದರು.

ದುಬಾಯಿ ಪದ್ಮನಾಭ ಕಟೀಲು ಅವರ ನೇತೃತ್ವದಲ್ಲಿ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ ಅಭಿಮಾನಿ ಬಳಗ ಮುಂಬಯಿ ಹಾಗೂ ಯುಎಇ ಯ ವತಿಯಿಂದ  ಕುರ್ಲಾ ಬಂಟರ ಭವನದ ಸಭಾಗೃಹದಲ್ಲಿ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣರ 13ನೆಯ ಸಂಸ್ಮರಣಾ ಕಾರ್ಯಕ್ರಮವು  ನಡೆಯಿತು.

ಕಟೀಲು ಕ್ಷೇತ್ರದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣರು ಆಶೀರ್ವಚನವನ್ನು ನೀಡುತ್ತಾ ದೂರದ ದುಬಾಯಿಯಲ್ಲಿ ಇದ್ದುಕೊಂಡು ಕೂಡಾ ಪದ್ಮನಾಭ ಕಟೀಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ದಂಪತಿಗೆ ದೇವಿಯು ಅನುಗ್ರಹಿಸಲಿ ಎನ್ನುತ್ತಾ ಆಶೀರ್ವಾದದೊಂದಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ವಹಿಸಿದ್ದು, ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡುತ್ತಾ ಅನಿವಾರ್ಯ ಕಾರಣಗಳಿಂದ ಒಂದೆರಡು ಕಾರ್ಯಕ್ರಮಗಳ ಹೊರತು ನಾನು ಕಳೆದ ಹದಿಮೂರು ವರ್ಷಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದೇನೆ. ಪದ್ಮನಾಭ ಕಟೀಲು ಅವರ ಯಕ್ಷಗಾನದ ಸೇವೆ ಪ್ರಶಂಸನೀಯ. ಆಶಕ್ತ ಕಲಾವಿದರೆಗೆ ಸಹಾಯ ಮಾಡುದರೊಂದಿಗೆ ಯಕ್ಷಗಾನ ಕಲೆಯನ್ನು ಉಳಿಸುವ ಕೆಲಸ ಹಾಗೂ ದೇವರ ಸೇವೆಯು ಈ ರೀತಿ ಅವರಿಂದ ಮುಂದುವರಿಯುತ್ತಿರಲಿ ಎಂದರು.
ಈ ಸಂದರ್ಭದಲ್ಲಿ ಯಕ್ಷಗಾನಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ ರವಿಚಂದ್ರ ಕನ್ನಡಿಕಟ್ಟೆ, ಚಂದ್ರಶೇಖರ ಧರ್ಮಸ್ಥಳ, ಅಮ್ಮುಂಜೆ ಮೋಹನ, ವಿಸ್ವನಾಥ ಆಚಾರ್ಯ, ಸುನಿಲ್ ಭಂಡಾರಿ, ಸುಭ್ರಮಣ್ಯ ಭಟ್, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ವಿಶ್ವನಾಥ ಶೆಟ್ಟಿ, ದೀಪಕ್ ರಾವ್ ಪೇಜಾವರ ಇವರನ್ನು ಸನ್ಮಾನಿಸಲಾಯಿತು. ದುಬಾಯಿಯಿಂದ ಆಗಮಿಸಿದ ಪದ್ಮರಾಜ್ ಎಕ್ಕಾರ್ ಹಾಗೂ ವಾಸು ಶೆಟ್ಟಿಯವರನ್ನೂ ಗೌರವಿಸಲಾಯಿತು.

ಸುವರ್ಣ ಬಾಬ , ಜಾಗತಿಕ ಬಂಟರ ಸಂಘದ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕಡಂದಲೆ ಸುರೇಶ್ ಭಂಡಾರಿ, ಬಾಬು ಎನ್. ಶೆಟ್ಟಿ, ಬಾಬು ಶೆಟ್ಟಿ, ಮಲಾಡ್, ಶ್ಯಾಮ್ ಎನ್. ಶೆಟ್ಟಿ, ಎಸ್. ಎನ್. ಉಡುಪ ವಿಶ್ವೇಶ್ವರ ಭಟ್, ದೀಪಕ್ ರಾವ್ , ಡಾ, ಸುರೇಶ್ ರಾವ್, ಸಾಂತಿಂಜ ಜನಾರ್ಧನ ಭಟ್, ಸುರೇಶ್ ಭಂಡಾರಿ ಕಡಂದಲೆ, ರತ್ನಾಕರ ಶೆಟ್ಟಿ ಮುಂಡ್ಕೂರು, ಐಕಳ ಗಣೇಶ್ ಶೆಟ್ಟಿ, ಆನಂದ ಶೆಟ್ಟಿ, ಎಕ್ಕಾರ್, ಐಕಳ ವಿಶ್ವನಾಥ ಶೆಟ್ಟಿ, ಸುರೇಶ್ ದುಬಾಯಿ, ರಘು ಪಿ. ಶೆಟ್ಟಿ, ಅಶೋಕ್ ಸಾಲ್ಯಾನ್, ನಿಲೇಶ್ ಶೆಟ್ಟಿಗಾರ್, ಪ್ರಭಾಕರ ಡಿ. ಸುವರ್ಣ, ಶಿವರಾಮ ಭಟ್, ಕೇಶವ ಆಂಚನ್, ಭಾಸ್ಕರ ಸುವರ್ಣ ಕರ್ನಿರೆ, ಚಂದ್ರಶೇಖರ ಬಿ, ಶಾಂತಾರಾಮ್ ಶೆಟ್ಟಿ, ಚಂದ್ರಹಾಸ ರೈ, ಸತೀಶ್ ರಾವ್, ಮೊದಲಾದವರು ಉಪಸ್ಥಿತರಿದ್ದರು.

ಕರ್ನೂರು ಮೋಹನ್ ರೈ ಯವರು ಕಾರ್ಯಕ್ರಮವನ್ನು ನಿರ್ವಹಿಸಿ ವಂದನಾರ್ಪಣೆಗೈದರು. ಪರಿವರ್ತನಾ ಸುದ್ದಿ ನಿಯತಕಾಲಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಪ್ರಕಾಶ್ ಎಂ ಶೆಟ್ಟಿ, ಸುರತ್ಕಲ್, ವೈ. ಕರುಣಾಕರ ಶೆಟ್ಟಿಯವರ ಸಂಚಾಲನೆಯಲ್ಲಿ ಪೆರ್ಡುರು ಮೇಳ ಮತ್ತು ತೆಂಕು ಹಾಗೂ ಬಡಗು ತಿಟ್ಟಿನ ಕಲಾವಿದರಿಂದ ಶ್ರೀನಿವಾಸ – ಶ್ರೀದೇವಿ ಯಕ್ಷಗಾನವನ್ನು ಪ್ರದರ್ಶಿಸಲಾಯಿತು.

Kinnigoli-11101401 Kinnigoli-11101402

 

Comments

comments

Comments are closed.

Read previous post:
Kinnigoli-10101402
ಬಾಲ್‌ಬ್ಯಾಡ್‌ಮಿಂಟನ್ ವಿಭಾಗಮಟ್ಟಕ್ಕೆ ಆಯ್ಕೆ

ಕಿನ್ನಿಗೋಳಿ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅರಂತೋಡು ಸುಳ್ಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬಾಲ್‌ಬ್ಯಾಡ್‌ಮಿಂಟನ್ ಸ್ಪರ್ಧೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ...

Close