ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವುದು ಆದ್ಯ ಕರ್ತವ್ಯ

ಮೂಲ್ಕಿ: ಉತ್ತಮ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಜೀವನದಲ್ಲಿ ಉನ್ನತಿಗಳಿಸಲು ಸಹಕರಿಸಿದ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವುದು ಆದ್ಯ ಕರ್ತವ್ಯ ಎಂದು ಮೂಲ್ಕಿ ಸೀಮೆ ಅರಸರಾದ ದುಗ್ಗಣ ಸಾವಂತರು ಹೇಳಿದರು. ಶ್ರೀ ನಾರಾಯಣ ಸನಿಲ್ ಪದವಿ ಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಬಯಲು ರಂಗಮಂದಿರ ಶಂಕುಸ್ಥಾಪನೆ ಹಾಗೂ ಸುವರ್ಣ ಮಹೋತ್ಸವ ಲಾಂಛನ ಬಿಡುಗಡೆ ಸಮಾರಂಭದಲ್ಲಿ ರಂಗಮಂದಿರದ ಶಂಕುಸ್ಥಾಪನೆ ಹಾಗೂ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ವಿಧ್ಯಾರ್ಥಿಗಳು ತಮ್ಮ ಜೀವನದಲ್ಲಿ ಉನ್ನತ ವಿಧ್ಯಾಭ್ಯಾಸ ಪಡೆದುಕೊಂಡು ಪರೋಪಕಾರಿಗಳಾಗಿ ಬಲಿಷ್ಠ ಭಾರತ ಕಟ್ಟಲು ಮುಂದಾಗಬೇಕು ಎಂದು ಯುವಜನ ಕ್ರೀಡಾ ಸಚಿವರು ತಿಳಿಸಿದರು ಶಾಲೆಯ ಸುವರ್ಣಮಹೋತ್ಸವದ ಅಂಗವಾಗಿ ಶಾಲಾ ಕಟ್ಟಡ ನವೀಕರಣ ನಿರ್ಮಾಣಕ್ಕೆ ಸರಕಾರದ ವತಿಯಿಂದ ೨೬ ಲಕ್ಷ ರೂ.ಗಳನ್ನು ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಪಂಜದಗುತ್ತು ಶಾಂತಾರಾಮ ಶೆಟ್ಟಿಯವರು ಶಾಲೆಯ ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆ ಗೊಳಿಸಿದರು. ಮಾಜಿ ಮಂತ್ರಿ ಅಮರನಾಥ ಶೆಟ್ಟಿ,ಹಳೆಯಂಗಡಿ ಪಂ.ಅಧ್ಯಕ್ಷೆ ಪೂರ್ಣಿಮಾ ಮಧು, ಉಪಾಧ್ಯಕ್ಷ ಅಬ್ದುಲ್ ಖಾದರ್,ಸುವರ್ಣೋದ್ಯಮಿ ಬಿ.ಸೂರ್ಯಕುಮಾರ್, ವಸಂತ್ ಬೆರ್ನಾರ್ಡ್, ಪ್ರಕಾಶ್ ಶೆಟ್ಟಿ, ಜಿ.ಪಂ.ಸದಸ್ಯೆ ಆಶಾ ರತ್ನಾಕರ್ ಸುವರ್ಣ, ತಾ.ಪಂ. ಸದಸ್ಯೆ ಸಾವಿತ್ರಿ ಸುವರ್ಣ, ರಾಜು ಕುಂದರ್ , ರತ್ನಾಕರ ಶೆಟ್ಟಿಗಾರ್,ಪಡುಪಣಂಬೂರು ಗ್ರಾ.ಪಂ.ಉಪಾಧ್ಯಕ್ಷೆ ಕುಸುಮಾ ಚಂದ್ರಶೇಖರ್ ,ಶಾಲೆಯ ಮುಖ್ಯೋಪಾದ್ಯಾಯರಾದ ಮೈಕೆಲ್ ಡಿಸೋಜ,ಕಾಲೇಜಿನ ಪ್ರಾಂಶುಪಾಲೆ ಗಿರಿಜವ್ವ ಮೆಣಸಿನಕಾಯಿ ಮತ್ತಿತರರು ಭಾಗವಹಿಸಿದ್ದರು. ಗೌತಮ್ ಜೈನ್ ಸ್ವಾಗತಿಸಿದರು ಶಿಕ್ಷಕಿ ಜ್ಯೋತಿ ಚೇಳ್ಯಾರು ಕಾರ‍್ಯಕ್ರಮ ನಿರೂಪಿಸಿದರು.

Bhagyavan Sanil

Kinnigoli-13101402

 

Comments

comments

Comments are closed.

Read previous post:
Kinnigoli-13101401
ದಸರಾ-ದೀಪಾವಳಿ ವಿಶೇಷಾಂಕ ಬಿಡುಗಡೆ

 ಕಿನ್ನಿಗೋಳಿ: ಕಳೆದ 68 ವರ್ಷಗಳಿಂದ ಕಿನ್ನಿಗೋಳಿಯಂತಹ ಗ್ರಾಮಾಂತರ ಪ್ರದೇಶದಲ್ಲಿ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ, ಕರ್ನಾಟಕ ರಾಜ್ಯದ ಮಾಸಪತ್ರಿಕೆಗಳಲ್ಲಿ ಪ್ರಥಮ ಸ್ಥಾನದಲ್ಲಿರುವ, ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ ಯುಗಪುರುಷ ಕನ್ನಡ...

Close