ಸುಬ್ರಹ್ಮಣ್ಯ ರೋಟರ‍್ಯಾಕ್ಟ್ ಕ್ಲಬ್ ಗೆ ಸಮಗ್ರ ಪ್ರಶಸ್ತಿ

ಕಿನ್ನಿಗೋಳಿ: ಯುವಕರಲ್ಲಿ ಸ್ಪರ್ಧಾ ಮನೋಬಾವನೆಯಿದ್ದಲ್ಲಿ ಮುಂದಿನ ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಎಂದು ಕಿನ್ನಿಗೋಳಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಹೇಳಿದರು.
ಭಾನುವಾರ ಕಿನ್ನಿಗೋಳಿ ರೋಟರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಕೆನೆರಾ ವಲಯದ ರೋಟರ‍್ಯಾಕ್ಟ್ ಕ್ಲಬ್‌ಗಳ ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕೆ.ಎಸ್.ಎಸ್. ಸುಬ್ರಹ್ಮಣ್ಯ ರೋಟರ‍್ಯಾಕ್ಟ್ ಕ್ಲಬ್ ಸಮಗ್ರ ಪ್ರಶಸ್ತಿ ಪಡೆಯಿತು. ವೈವಿಧ್ಯಮಯ ಕಾರ್ಯಕ್ರಮದಲ್ಲಿ ಕೆ.ಎಸ್.ಎಸ್. ಸುಬ್ರಹ್ಮಣ್ಯ ರೋಟರ‍್ಯಾಕ್ಟ್ ಕ್ಲಬ್ ಪ್ರಥಮ, ಪುತ್ತೂರು ರೋಟರ‍್ಯಾಕ್ಟ್ ಕ್ಲಬ್ ದ್ವಿತೀಯ, ಮೂಡಬಿದ್ರಿ ರೋಟರ‍್ಯಾಕ್ಟ್ ಕ್ಲಬ್ ತೃತೀಯ ಪ್ರಶಸ್ತಿ ಪಡೆದುಕೊಂಡರು.
ಈ ಸಂದರ್ಭ ರೋಟರ‍್ಯಾಕ್ಟ್ ಮಾಜಿ ಜಿಲ್ಲಾ ಪ್ರತಿನಿಧಿಗಳಾದ ಸಮಿತ್ ಫೆರ್ನಾಂಡೀಸ್, ಸುಮಿತ್ ಕುಮಾರ್, ಕೆನೆರಾ ವಲಯ ಪ್ರತಿನಿಧಿ ಸಂತೋಷ್ ಕುಮಾರ್, ಸಾಂಸ್ಕ್ರತಿಕ ಸಂಚಾಲಕ ಪ್ರಣಿಲ್ ಹೆಗ್ಡೆ, ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಕಾರ್ಯದರ್ಶಿ ಸುಧಾಕರ್ ಪೊಸ್ರಾಲ್ ಉಪಸ್ಥಿತರಿದ್ದರು.

Kinnigoli-14101420

Comments

comments

Comments are closed.

Read previous post:
Kinnigoli-13101410
ಮೂಲ್ಕಿ ವಲಯಕ್ಕೆ ಎಕ್ಸಲೆಂಟ್ ಅವಾರ್ಡ್

ಮಂಗಳೂರು: ಸೌತ್ ಕೆನರಾ - ಫೋಟೋಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ - ಉಡುಪಿ ಜಿಲ್ಲೆ, ಇದರ ಮಹಾಸಭೆಯ ಸಂದರ್ಭ ಮೂಲ್ಕಿ ವಲಯಕ್ಕೆ ಎಕ್ಸಲೆಂಟ್ ಆವಾರ್ಡ್ ಲಭಿಸಿದೆ. ಜಿಲ್ಲಾಧ್ಯಕ್ಷ...

Close