ದಸರಾ-ದೀಪಾವಳಿ ವಿಶೇಷಾಂಕ ಬಿಡುಗಡೆ

 ಕಿನ್ನಿಗೋಳಿ: ಕಳೆದ 68 ವರ್ಷಗಳಿಂದ ಕಿನ್ನಿಗೋಳಿಯಂತಹ ಗ್ರಾಮಾಂತರ ಪ್ರದೇಶದಲ್ಲಿ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ, ಕರ್ನಾಟಕ ರಾಜ್ಯದ ಮಾಸಪತ್ರಿಕೆಗಳಲ್ಲಿ ಪ್ರಥಮ ಸ್ಥಾನದಲ್ಲಿರುವ, ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ ಯುಗಪುರುಷ ಕನ್ನಡ ಮಾಸ ಪತ್ರಿಕೆಯ ದಸರಾ-ದೀಪಾವಳಿ ವಿಶೇಷಾಂಕವನ್ನು ಶನಿವಾರದಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರುಗಳಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹಾಗೂ ಅನಂತಪದ್ಮನಾಭ ಆಸ್ರಣ್ಣರು ಬಿಡುಗಡೆಗೊಳಿಸಿದರು. ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತಿ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕೆ. ಜಿ. ಮಲ್ಯ, ಉಮೇಶ್ ರಾವ್ ಎಕ್ಕಾರು, ಸೋಂದಾ ಭಾಸ್ಕರ ಭಟ್, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ, ಕಿರಣ್ ಮಂಜನಬೈಲ್, ಅಜಾರು ನಾಗರಾಜ ರಾಯ, ಸುಂದರ ಹಾಗೂ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಉಪಸ್ಥಿತರಿದ್ದರು.

Kinnigoli-13101401

Comments

comments

Comments are closed.

Read previous post:
Kinnigoli-14101419
ಹಿಂದು ರುದ್ರ ಭೂಮಿ ಸ್ವಚ್ಚತೆ

ಕಿನ್ನಿಗೋಳಿ: ಕಿನ್ನಿಗೋಳಿಯ ಬಿ ಜೆ ಪಿ ಸ್ಥಾನೀಯ ಸಮಿತಿ ವತಿಯಿಂದ ಗುತ್ತಕಾಡು ಮತ್ತು ಎಳತ್ತೂರು ಪರಿಸರದಲ್ಲಿ ಸ್ವಚತಾ ಕಾರ್ಯಕ್ರಮ ನಡೆಯಿತು, ಈ ಸಂದರ್ಭ ಬಿ.ಜೆ.ಪಿ ಸ್ಥಾನೀಯ ಸಮಿತಿ ಅಧ್ಯಕ್ಷ...

Close