ಲಾರಿಗೆ ಕಾರು ಡಿಕ್ಕಿ: ಓರ್ವ ಗಂಭೀರ

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಬಳಿ ಉಡುಪಿ ಕಡೆಗೆ ಹೋಗುತ್ತಿದ್ದ ಕಾರೊಂದು ಮಂಗಳೂರು ಕಡೆಗೆ ಬರುತ್ತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಗಂಭೀರ ಗಾಯಗೊಂಡು ಮುಕ್ಕ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಮಣಿಪಾಲದ ಕುಂಕುಮ್ ಟೂರ‍್ಸ್-ಟ್ರಾವೆಲ್ಸ್‌ಗೆ ಸೇರಿದ ಕಾರೊಂದು ಬಜಪೆ ವಿಮಾನ ನಿಲ್ದಾಣಕ್ಕೆ ಹೋಗಿ ವಾಪಾಸು ಬರುತ್ತಿದ್ದಾಗ ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೊಂದು ವಾಹನವನ್ನು ಓವರ್‌ಟೇಕ್ ಮಾಡುವ ರಭಸದಲ್ಲಿ ಹುಬ್ಬಳ್ಳಿಯಿಂದ ಮಂಗಳೂರು ಕಡೆಗೆ ಸ್ಟೀಲ್ ಸರಂಜಾಮುಗಳನ್ನು ತರುತ್ತಿದ್ದ ಲಾರಿಯ ಟಯರಿಗೆ ಡಿಕ್ಕಿ ಹೊಡೆದು ಬಳಿಕ ಎಡಬದಿಗೆ ಹೋಗಿ ನಿಂತಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಎದುರು ಭಾಗ ನಜ್ಜುಗುಜ್ಜಾಗಿದ್ದು ಚಾಲಕ ವಾಸುದೇವ ರಾವ್(35)ಕಾಲಿಗೆ,ತಲೆಗೆ ಗಂಭೀರ ಗಾಯಗಳಾಗಿದೆ. ಕಾರಿನಲ್ಲಿ ಇನ್ನೋರ್ವ ಪ್ರಯಾಣಿಕನಿದ್ದು ಅವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಕಾರು ಚಾಲಕ ನಿಯಂತ್ರಣ ತಪ್ಪಿ ಲಾರಿಯ ಟಯರಿಗೆ ಡಿಕ್ಕಿ ಹೊಡೆದರೂ ಲಾರಿಯ ಅಕ್ಸಿಲ್ ತುಂಡಾಗಿದೆ ವಿನ: ಯಾವುದೇ ಹಾನಿ ಸಂಭವಿಸದ್ದು ಆಶ್ಚರ‍್ಯವಾಗಿದೆ.ಆದರೆ ಕಾರು ಡಿಕ್ಕಿ ಹೊಡೆದು ಹೆದ್ದಾರಿಯ ಬದಿಗೆ ಹೋಗಿ ನಿಂತು ಬೃಹತ್ ಕಂದಕಕ್ಕೆ ಬೀಳುವುದಕ್ಕೆ ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ಅಫಘಾತದ ಸಂದರ್ಭ ಕೆಲ ಹೊತ್ತು ಹೆದ್ದಾರಿ ತಡೆ ಉಂಟಾಯಿತು.

Puneethkrishna

Kinnigoli-14101401 Kinnigoli-14101402 Kinnigoli-14101403

Comments

comments

Comments are closed.

Read previous post:
Kinnigoli-14101420
ಸುಬ್ರಹ್ಮಣ್ಯ ರೋಟರ‍್ಯಾಕ್ಟ್ ಕ್ಲಬ್ ಗೆ ಸಮಗ್ರ ಪ್ರಶಸ್ತಿ

ಕಿನ್ನಿಗೋಳಿ: ಯುವಕರಲ್ಲಿ ಸ್ಪರ್ಧಾ ಮನೋಬಾವನೆಯಿದ್ದಲ್ಲಿ ಮುಂದಿನ ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಎಂದು ಕಿನ್ನಿಗೋಳಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ ಹೇಳಿದರು. ಭಾನುವಾರ ಕಿನ್ನಿಗೋಳಿ ರೋಟರಿ...

Close