ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ನೀಡುವುದು ಅಗತ್ಯ

ಮೂಲ್ಕಿ: ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಂಡು ಜೀವ ವೈವಿಧ್ಯಗಳ ಉನ್ನತಿಗೆ ಶ್ರಮಿಸುವುದು ಬೆಳೆಹಬ್ಬದ ಪ್ರಯುಕ್ತ ನಾವು ನಡೆಸುವ ಆದ್ಯ ಕರ್ತವ್ಯವಾಗಬೇಕು ಎಂದು ಮೂಲ್ಕಿ ಪಟ್ಟಣ ಪಂಚಾಯತಿ ಸದಸ್ಯ ಹರ್ಷರಾಜ ಶೆಟ್ಟಿ ಜಿಎಂ ಹೇಳಿದರು.
ಸಿ.ಎಸ್.ಐ ಯುನಿಟಿ ಚರ್ಚು ಬೆಳೆಹಬ್ಬದ ಪ್ರಯುಕ್ತ ನಡೆದ ಪಂದ್ಯಾಕೂಟದ ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಮ್ಮ ಪರಿಸರ ಅಂತರ್ಜಲ ರಕ್ಷಣೆ ನಮ್ಮ ಧ್ಯೇಯವಾಗುವುದರೊಂದಿಗೆ ಕೃಷಿಯ ಬಗ್ಗೆ ಹೆಚ್ಚಿನ ಆಸಕ್ತಿ ನೀಡುವುದು ಬಹಳ ಅಗತ್ಯ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಯುನಿಟಿ ಚರ್ಚು ಸಭಾಪಾಲಕ ರೆ.ಸಂತೋಷ್ ಕುಮಾರ್ ವಹಿಸಿದ್ದರು. ಅತಿಥಿಗಳಾಗಿ, ಸಿ.ಎಸ್.ಐ ಬಾಲಿಕಾಶ್ರಮದ ಮುಖ್ಯಸ್ಥೆ ರೆ.ಶಶಿಕಲಾ, ಸಂಯೋಜಕ ರಾಜೇಶ್ ಐಸಾಕ್,ಕಾರ್ಯದರ್ಶಿ ಅಶ್ವಿನಿ ಸೋನಿಯಾ, ಕೋಶಾಧಿಕಾರಿ ಪ್ರವೀಣ್ ಆನಂದ ಉಪಸ್ಥಿತರಿದ್ದರು.
ಪ್ರವಿಣ್ ಆನಂದ ಸ್ವಾಗತಿಸಿದರು. ಪ್ರೊ.ಸ್ಯಾಮ್ ಮಾಬೆನ್ ಮತ್ತು ಅನಿತಾ ಪಲ್ಲಟ್ ನಿರೂಪಿಸಿದರು. ಅಶ್ವಿನಿ ಸೋನಿಯಾ ವಂದಿಸಿದರು.

Bhagyavan Sanil

Kinnigoli-14101406

Comments

comments

Comments are closed.

Read previous post:
Kinnigoli-14101405
ತೆನೆಹಬ್ಬದ ವಿಶೇಷ ಪೂಜೆ

ಮೂಲ್ಕಿ: ಮೂಲ್ಕಿಯ ಸಿ.ಎಸ್.ಐ ಚರ್ಚುನಲ್ಲಿ  ಸಿ.ಎಸ್.ಐ ದಕ್ಷಿಣ ಧರ್ಮ ಪ್ರಾಂಥ್ಯದ ವಿಶ್ರಾಂತ  ಬಿಷಪ್ ರೆ.ಡಾ.ಸಿ.ಎಲ್ ಪುರ್ತಾದೊ ಮತ್ತು ಸಭಾಪಾಲಕ ರೆ.ಸಂತೋಷ್ ಕುಮಾರ್ ನೇತೃತ್ವದಲ್ಲಿ ಭಾನುವಾರ ತೆನೆಹಬ್ಬದ ವಿಶೇಷ...

Close