ಹೆತ್ತವರು ಮಕ್ಕಳ ಭಾವನೆಗಳಿಗೆ ಸ್ಪಂದಿಸಿ

ಮೂಲ್ಕಿ: ಮಕ್ಕಳ ಪ್ರೌಢ ಹಂತದಲ್ಲಿ ಹೆತ್ತವರು ಮಕ್ಕಳ ಭಾವನೆಗಳಿಗೆ ಪೂರಕವಾಗಿ ಸ್ಪಂದಿಸಿ ಅವರಿಗೆ ಸಹಕಾರಿಯಾಗಿ ಉತ್ತಮ ಸಂಸ್ಕಾರ ನಡುವಳಿಕೆಗಳನ್ನು ಅವರಲ್ಲಿ ಮೂಡಿಸಲು ಪ್ರಯತ್ನಿಸುವುದರೊಂದಿಗೆ ಶೈಕ್ಷಣಿಕ ಉನ್ನತಿಗಳಿಸಲು ಸಹಕರಿಸಬೇಕು ಎಂದು ವಿಜಯಾ ಕಾಲೇಜು ಆಡಳಿತ ಮಂಡಳಿಯ ಮಾಜಿ ಸದಸ್ಯ ಎಚ್.ಮಾಧವ ಸನಿಲ್ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಗುರುವಾರ ನಡೆದ ಶಿಕ್ಷಕ ರಕ್ಷಕ ಸಂಘದ ಸಭೆಯಲ್ಲಿ ಕಾಲೇಜು ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಅವಕಾಶಗಳು ಬಹಳವಿದ್ದು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಭಾಗವಹಿಸುವಿಕೆಗೆ ಹೆತ್ತವರು ಅವಕಾಶ ಕಲ್ಪಿಸಿಕೊಳ್ಳುವುದರೊಂದಿಗೆ ಮಕ್ಕಳ ಬಗ್ಗೆ ಕಾಲ ಕಾಲಕ್ಕೆ ಸರಿಯಾದ ಮಾಹಿತಿ ಪಡೆದು ಅವರ ಉನ್ನತಿಗೆ ಶ್ರಮ ವಹಿಸಬೇಕು ಎಂದರು.
ಈ ಸಂದರ್ಭ ಮಾಧವ ಸನಿಲ್ ಕಾಲೇಜು ಅಭಿವೃದ್ಧಿ ಯೋಜನೆಗೆ ರೂ ೨೫,೦೦೦ ಸಾವಿರ ದೇಣಿಗೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಕಾಲೇಜಿನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್. ಕುಡ್ವಾ ವಹಿಸಿದ್ದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಕೀಲ ಸತೀಶ್ ಕಾಮತ್.ವಿ, ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಆರ್ ಶಂಕರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪಮೀದಾ ಬೇಗಂ,ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ನಾರಾಯಣ,ವಾರ್ಷಿಕ ಸಂಚಿಕೆ ಸಂಪಾದಕ ಪ್ರೊ.ಜಯರಾಮ್ ಬಿ ಉಪಸ್ಥಿತರಿದ್ದರು. ಅಂಕಿತಾ ಪೈ ಸ್ವಾಗತಿಸಿದರು, ಪ್ರೊ. ವಿಜಯ ಕುಮಾರಿ ಸ್ವಾಗತಿಸಿದರು. ಪ್ರೊ ಕೆ.ಆರ್ ಶಂಕರ್ ಮತ್ತು ಪಮೀದಾ ಬೇಗಂ ಪ್ರಸ್ಥಾವಿಸಿದರು. ಸ್ವಾತಿ ನಿರೂಪಿಸಿದರು.ಪ್ರೊ.ಬಿ.ಇ.ಸಂಪತ್ ಕುಮಾರ್ ವಂದಿಸಿದರು.

Bhagyavan Sanil

Kinnigoli-14101412

Comments

comments

Comments are closed.

Read previous post:
Kinnigoli-14101411
ವಾಸುದೇವ ಕಾಮತ್‌ ಅವರಿಗೆ ಸಮ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ ಕಳೆದ 60 ವರ್ಷಗಳಿಂದ ಭಜನಾಸೇವೆ ಗೈಯುತ್ತಿದ್ದ ಭಜನಾ ಹಿರಿಯ ಭಜನಾಕಾರ ವಾಸುದೇವ ಕಾಮತ್‌ರವರನ್ನು ಸಮ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ವಾಸುದೇವ ಕಾಮತ್‌ರವರು ಶ್ರೀ ರಾಮ...

Close