ಕಟೀಲು ಎನ್ ಸಿ ಸಿ ವಾರ್ಷಿಕ ಶಿಬಿರ

ಕಟೀಲು: ಕಟೀಲು ಪ್ರೌಢಶಾಲೆಯ ಆಶ್ರಯದಲ್ಲಿ 5ನೇ ಕರ್ನಾಟಕ ನೇವಲ್ ಯುನಿಟ್ ಎನ್.ಸಿ.ಸಿ ಇದರ ವಿಶೇಷ ವಾರ್ಷಿಕ ತರಬೇತಿ ಶಿಬಿರವು ಅಕ್ಟೋಬರ್ 17, 2014ರಿಂದ ಅಕ್ಟೋಬರ್ 16, 2014 ರ ತನಕ ಕಟೀಲು ಪ್ರೌಢಶಾಲೆಯ ವಠಾರದಲ್ಲಿ ನಡೆಯುತಿದೆ. ಈ ತರಬೇತಿ ಶಿಬಿರದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ 20 ಫ್ರೌಢ ಶಾಲೆಗಳ 480 ಕೆಡೆಟ್‌ಗಳು ಮತ್ತು 2 ಪದವಿಕಾಲೇಜುಗಳ 15 ಕೆಡೆಟ್‌ಗಳು ಸೇರಿದಂತೆ ಒಟ್ಟು 495 ಎನ್.ಸಿ.ಸಿ ಕೆಡೆಟ್‌ಗಳು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.
ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸ್ಥೈರ್ಯವನ್ನು ವೃದ್ಧಿಸುವ ಉದ್ದೇಶದಿಂದ ಈ ಶಿಬಿರದಲ್ಲಿ ಕವಾಯತ್, ಆಟೋಟ ಸಹಿತ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸಂಚಾರಿ ಪೋಲೀಸ್ ಇಲಾಖೆಯವರು ಸಂಚಾರಿ ನಿಯಮಗಳ ಕುರಿತು ಉಪನ್ಯಾಸ ನೀಡಿದರು. ಕೆ.ಎಮ್. ಸಿ ಆಸ್ಪತ್ರೆಯ ದಂತ ವೈದ್ಯಕೀಯ ವಿಭಾಗದ ಮೂಲಕ ಎಲ್ಲಾ ಶಿಬಿರಾರ್ಥಿಗಳ ದಂತ ತಪಾಸಣೆ ಮಾಡಲಾಯಿತು. ಆರೋಗ್ಯ ಇಲಾಖೆಯವರು ಸ್ವಚ್ಚತೆ ಮತ್ತು ಆರೋಗ್ಯದ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಕಟೀಲು ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಫೈಯರಿಂಗ್ ತರಬೇತಿಯನ್ನು ನೀಡಲಾಯಿತು. ನಿವೃತ್ತ ಪ್ರಾಧ್ಯಾಪಕರಾದ ಡಾ| ಕ್ಲೆಮೆಂಟ್ ಡಿಸೋಜ ಇವರು ಮಳೆನೀರು ಕೊಯ್ಲಿನ ಬಗ್ಗೆ ಮಾಹಿತಿ ನೀಡಿದರು.
ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ, ಆಟೋಟ ಹಾಗೂ ಎನ್.ಸಿ.ಸಿಗೆ ಸಂಬಂಧ ಪಟ್ಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಮಾಂಡಿಂಗ್ ಆಫೀಸರ್ ಕ್ಯಾಪ್ಟನ್ ಎಮ್ ಸಿ. ಬೆಳ್ಯಪ್ಪ ಇವರ ನಾಯಕತ್ವದಲ್ಲಿ ಈ ಶಿಬಿರ ನಡೆಯುತ್ತಿದೆ. ಉಡುಪಿ 6ನೇ ಕರ್ನಾಟಕ ವಿಭಾಗದ ಕಮಾಂಡಿಂಗ್ ಆಫೀಸರ್ ಸಹಾಯಕ ಶಿಬಿರಾಧಿಕಾರಿಯಾಗಿ ಹಾಗೂ ಎನ್ ಸಿ ಸಿ ಅಧಿಕಾರಿಗಳಾದ ಲೆಪ್ಟಿನೆಂಟ್ ಪುರುಷೋತ್ತಮ ಕೆ. ವಿ, ಮತ್ತು ಫಸ್ಟ್ ಆಫೀಸರ್ ಸಾಯಿನಾಥ್ ಶೆಟ್ಟಿ ಕಟೀಲ್ ಇವರು ಈ ಶಿಬಿರದ ನಿರ್ದೇಶಕರಾಗಿದ್ದಾರೆ. ಬೇರೆ ಬೇರೆ ವಿದ್ಯಾಸಂಸ್ಥೆಗಳ  ಎನ್ ಸಿ ಸಿ ಅಧಿಕಾರಿಗಳು, ನೌಕಾದಳದ ತರಬೇತಿದಾರರು ತರಬೇತಿ ನೀಡುತ್ತಿದ್ದಾರೆ.

Purushothama K V

Kinnigoli-14101409 Kinnigoli-14101410

Comments

comments

Comments are closed.

Read previous post:
Kinnigoli-14101408
ವಿಜಯಾ ಬ್ಯಾಂಕಿನ ಅಧಿಕಾರಿಗಳ ಭೇಟಿ

ಕಟೀಲು:  ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ವಿಜಯಾ ಬ್ಯಾಂಕಿನ ನಿರ್ದೇಶಕರಾದ ರಾಮದಾಸ ಶೆಣೈ, ಕೆ.ಆರ್.ಶೆಣೈ, ಬಿ.ಎಸ್.ರಾಮನ್, ಸಂಜಯ್ ಕುಮಾರ್, ಹರೀಶ್ ಬಳ್ಳಾಲ್, ಆರ್ ಬಿ ಐ ಡೈರೆಕ್ಟರ್ ಅಶೋಕ್...

Close