ಸಂಸತ್ ನಡಾವಳಿ ಮತ್ತು ಕಾನೂನು ತಿಳುವಳಿಕೆ

ಮೂಲ್ಕಿ: ಸಂಸತ್ ನಡಾವಳಿಗಳು ಮತ್ತು ಕಾನೂನುಗಳ ತಿಳುವಳಿಕೆ ಹೊಂದಿವ ಪ್ರತಿನಿಧಿಗಳಿಂದ ಮಾತ್ರ ಪರಿಣಾಮಕಾರಿಯಾಗಿ ಜನ ಸೇವೆ ನೀಡಲು ಸಾಧ್ಯ ಎಂದು ಜೇಸಿಐ ನ ರಾಜ್ಯ ತರಬೇತುದಾರ ಸುಂದರ ಮೊಯಿಲಿ ಹೇಳಿದರು.
ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಮಹಿಳಾ ಮಂಡಳಿ ಹಾಗೂ ಸೇವಾದಳದ ಸದಸ್ಯರಿಗೆ ಆಡಳಿತ ನಿರ್ವಹಣೆ ಮತ್ತು ಸಂಸತ್ತಿನ ನಡಾವಳಿ ಕುರಿತು ಜರಗಿದ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆವರು ಮಾತನಾಡಿದರು.ಸಂಸತ್ತಿನಿಂದ ಹಿಡಿದು ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳವರೆಗೆ ಕಾರ್ಯ ಕಲಾಪಗಳು ಸುಗಮವಾಗಿ ನಡೆಯಬೇಕಾದರೆ ಸಂಸತ್ತಿನ ನಡಾವಳಿಗಳನ್ನು ಪ್ರತಿಯೊಬ್ಬನು ಸದಸ್ಯನು ಅಗತ್ಯವಾಗಿ ತಿಳಿದುಕೊಂಡು ಅನುಷ್ಠಾನಗೊಳಿಸಿದಲ್ಲಿ ಮಾತ್ರ ಸಂಸ್ಥೆಯ ಉನ್ನತಿ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ರಿಶ್ಚಂದ್ರ ಪಿ ಸಾಲ್ಯಾನ್ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕೊಕ್ಕರಕಲ್,ಕೋಶಾಧಿಕಾರಿ ಪ್ರಕಾಶ್ ಸುವರ್ಣ, ಮಹಿಳಾ ಮಂಡಲದ ಅಧ್ಯಕ್ಷೆ ಸರಸ್ವತಿ ರಾಘು ಸುವರ್ಣ, ಸೇವಾ ದಳದ ದಳಪತಿ ಸತೀಶ್ ಅಂಚನ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Bhagyavan Sanil

Kinnigoli-14101404

 

 

Comments

comments

Comments are closed.

Read previous post:
Kinnigoli-14101402
ಲಾರಿಗೆ ಕಾರು ಡಿಕ್ಕಿ: ಓರ್ವ ಗಂಭೀರ

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಬಳಿ ಉಡುಪಿ ಕಡೆಗೆ ಹೋಗುತ್ತಿದ್ದ ಕಾರೊಂದು ಮಂಗಳೂರು ಕಡೆಗೆ ಬರುತ್ತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಗಂಭೀರ...

Close