ಸೇವಿಕಾ ಸಮಿತಿಯ ಶಿಕ್ಷಣ ಶಿಬಿರ

 ಕಿನ್ನಿಗೋಳಿ : ಯುವ ಮಹಿಳೆಯರಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯತೆಯ ಬಗ್ಗೆ ಜಾಗೃತಿ ಹಾಗೂ ಯುವ ಪೀಳಿಗೆಯ ಬಾಲಕಿಯರಲ್ಲಿ ಶಿಸ್ತು, ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯ ರಾಷ್ಟ್ರ ಸೇವಿಕಾ ಸಮಿತಿ ಮಾಡುತ್ತಿದೆ. ಎಂದು ತಾಲೂಕು ಕಾರ್ಯವಾಹಿಕಾ ಗಿರಿಜಾ ಭಟ್ ಹೇಳಿದರು.
ಗುರುವಾರ ಕಿನ್ನಿಗೋಳಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಆಶ್ರಯದಲ್ಲಿ ಅ. 9 ರಿಂದ 15 ರ ತನಕ ನಡೆಯುವ ಪ್ರಾರಂಭಿಕ ಶಿಕ್ಷಣ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ತೋಕೂರು ಶಾಲಾ ಶಿಕ್ಷಕಿ ಪುಪ್ಪಾ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದರು.
ಡಾ| ಕಮಲಾ ಪ್ರಭಾಕರ ಭಟ್, ಕಸ್ತೂರಿ ಪಂಜ, ಬೇಬಿ ಕೋಟ್ಯಾನ್, ಲೀಲಾ ಬಂಜನ್, ಶಶಿಕಲಾ, ದೇವಪ್ರಸಾದ್ ಪುನರೂರು, ಈಶ್ವರ್ ಕಟೀಲ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾಮಾಂತರ ಸಂಪರ್ಕ ಪ್ರಮುಖ್ ಮಾಲತಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-14101413

Comments

comments

Comments are closed.

Read previous post:
Kinnigoli-14101412
ಹೆತ್ತವರು ಮಕ್ಕಳ ಭಾವನೆಗಳಿಗೆ ಸ್ಪಂದಿಸಿ

ಮೂಲ್ಕಿ: ಮಕ್ಕಳ ಪ್ರೌಢ ಹಂತದಲ್ಲಿ ಹೆತ್ತವರು ಮಕ್ಕಳ ಭಾವನೆಗಳಿಗೆ ಪೂರಕವಾಗಿ ಸ್ಪಂದಿಸಿ ಅವರಿಗೆ ಸಹಕಾರಿಯಾಗಿ ಉತ್ತಮ ಸಂಸ್ಕಾರ ನಡುವಳಿಕೆಗಳನ್ನು ಅವರಲ್ಲಿ ಮೂಡಿಸಲು ಪ್ರಯತ್ನಿಸುವುದರೊಂದಿಗೆ ಶೈಕ್ಷಣಿಕ ಉನ್ನತಿಗಳಿಸಲು ಸಹಕರಿಸಬೇಕು...

Close