ರತ್ನಾಕರ ಪೈ ಕಮ್ಮಾಜೆ

 ಕಿನ್ನಿಗೋಳಿ : ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಮ್ಮಾಜೆ ರತ್ನಾಕರ ಪೈ (ಪ್ರಾಯ 73 ವರ್ಷ) ಅಲ್ಪ ಕಾಲದ ಅನಾರೋಗ್ಯದಿಂದ ಸ್ವಗೃಹ ಕಮ್ಮಾಜೆಯಲ್ಲಿ ಮಂಗಳವಾರ ಬೆಳಿಗ್ಗೆ ನಿಧನ ಹೊಂದಿದರು.
ತಮ್ಮ ಜೀವಿತಾವಧಿ ಕಾಲದಲ್ಲಿ ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಅವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮೂಡಬಿದ್ರೆ ಅಮರನಾಥ ಶೆಟ್ಟಿ ಶಾಸಕ ಹಾಗೂ ಸಚಿವರಾಗಿದ್ದ ಸಂದರ್ಭ ಪಕ್ಷದಲ್ಲಿ ಸಕಿಯ ರಾಜಕಾರಣದಲ್ಲಿದ್ದುಕೊಂಡು ಬಡವರ ಬಗ್ಗೆ ವಿಶೇಷ ಕಾಳಜಿ ಸಹಾನುಭೂತಿ ಹೊಂದಿದ್ದರು. ಅಧಿಕಾರವಧಿಯಲ್ಲಿ ಅನೇಕ ಜನಪರ ಕೆಲಸ ಕಾರ್ಯಗಳಲ್ಲಿ ಮಾಡಿ ಅಪಾರ ಜನ ಮನ್ನಣೆ ಗಳಿಸಿದ್ದರು. ಇತ್ತಿಚಿನ ದಿನಗಳ ವರೆಗೂ ಅಧಿಕಾರವಿಲ್ಲದಿದ್ದರೂ, ಸ್ಥಳಿಯ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯುತಿದ್ದರು.

RathnakaraPai

Comments

comments

Comments are closed.

Read previous post:
Kinnigoli-14101414
ಕಿನ್ನಿಗೋಳಿಯಲ್ಲಿ ಯೋಗ ಶಿಬಿರ ಸಮಾರೋಪ

ಕಿನ್ನಿಗೋಳಿ: ಯೋಗ ಹಾಗೂ ಪ್ರಾಣಾಯಾಮ ಮನುಷ್ಯನಲ್ಲಿ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಒದಗಿಸಿ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಹಿರಿಯ ಸಾಹಿತಿ, ಯೋಗ ಶಿಕ್ಷಕ ಎನ್. ಪಿ. ಶೆಟ್ಟಿ ಹೇಳಿದರು....

Close