ಕಿನ್ನಿಗೋಳಿಯಲ್ಲಿ ಯೋಗ ಶಿಬಿರ ಸಮಾರೋಪ

ಕಿನ್ನಿಗೋಳಿ: ಯೋಗ ಹಾಗೂ ಪ್ರಾಣಾಯಾಮ ಮನುಷ್ಯನಲ್ಲಿ ದೈಹಿಕ ಹಾಗೂ ಮಾನಸಿಕ ಕ್ಷಮತೆಯನ್ನು ಒದಗಿಸಿ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಹಿರಿಯ ಸಾಹಿತಿ, ಯೋಗ ಶಿಕ್ಷಕ ಎನ್. ಪಿ. ಶೆಟ್ಟಿ ಹೇಳಿದರು. ಕಿನ್ನಿಗೋಳಿ ಲಯನ್ಸ್ ಲಯನೆಸ್, ರೋಟರಿ, ಇನ್ನರ್‌ವೀಲ್ ಕ್ಲಬ್ ಹಾಗೂ ಪತಂಜಲಿ ಯೋಗ ಸಮಿತಿ ನೇತ್ರತ್ವದಲ್ಲಿ ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಉಚಿತ ಪ್ರಾಣಾಯಾಮ ಯೋಗ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಈ ಸಂದರ್ಭ ಯೋಗ ಶಿಕ್ಷಕ ಜಯ ಎಮ್. ಶೆಟ್ಟಿ ಕೆಂಚನಕೆರೆಯವರನ್ನು ಸಂಘಟನೆಗಳ ಪರವಾಗಿ ಸನ್ಮಾನಿಸಲಾಯಿತು.
ಯುಗಪುರುಷದ ಭುವನಾಭಿರಾಮ ಉಡುಪ, ಲಯನ್ಸ್ ಕ್ಲಬ್ ಅಧ್ಯಕ್ಷ ಬರ್ಟನ್ ಸಿಕ್ವೇರಾ, ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಇನ್ನರ್ ವೀಲ್ ಅಧ್ಯಕ್ಷೆ ವೀಣಾ ಶೆಟ್ಟಿ , ಜಗದೀಶ ಹೊಳ್ಳ ಶ್ರೀಕಾಂತ್ ಶೆಟ್ಟಿ , ಜಯ ಕುಮಾರ್, ಬಬಿತಾ , ಲಾರೆನ್ಸ್ ಫೆರ್ನಾಂಡಿಸ್, ಜಯಪೂಜಾರಿ ಕುಬೆವೂರು ಉಪಸ್ಥಿತರಿದ್ದರು.

Kinnigoli-14101414

Comments

comments

Comments are closed.

Read previous post:
Kinnigoli-14101413
ಸೇವಿಕಾ ಸಮಿತಿಯ ಶಿಕ್ಷಣ ಶಿಬಿರ

 ಕಿನ್ನಿಗೋಳಿ : ಯುವ ಮಹಿಳೆಯರಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯತೆಯ ಬಗ್ಗೆ ಜಾಗೃತಿ ಹಾಗೂ ಯುವ ಪೀಳಿಗೆಯ ಬಾಲಕಿಯರಲ್ಲಿ ಶಿಸ್ತು, ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಅರಿವು...

Close