ಕಿನ್ನಿಗೋಳಿ ಮಾರುಕಟ್ಟೆ ಮೀನು ಮಾರಾಟ ಸ್ಥಗಿತ

ಕಿನ್ನಿಗೋಳಿ: ಕಳೆದ ಎರಡು ವಾರದ ಹಿಂದೆಯಷ್ಟೇ ಉದ್ಘಾಟನೆಗೊಂಡ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರುಕಟ್ಟೆಯಲ್ಲಿ  ಮಾರಾಟಗಾರರ ಜಾಗದ ತಕರಾರು ಸಮಸ್ಯೆ ಬಂದ ಹಿನ್ನಲೆಯಲ್ಲಿ ಬುಧವಾರ ಮೀನು ಮಾರಾಟ ಸ್ಥಗಿತಗೊಳಿಸಿ ಮೀನು ಮಾರುಕಟ್ಟೆಯನ್ನು ಮುಚ್ಚಿ ಮೀನು ಮಾರಾಟಗಾರರು ಸ್ವಯಂ ಪ್ರೇರಿತ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಕಳೆದ ತಿಂಗಳಿನವರೆಗೆ ಕಿನ್ನಿಗೋಳಿ ಮಾರುಕಟ್ಟೆಯ ಒಂದು ಭಾಗದಲ್ಲಿ ಎರಡು ಬದಿಗಳಲ್ಲಿ 30 ಕ್ಕೂ ಮಿಕ್ಕಿ ಮಹಿಳೆಯರು ಕ್ರಮ ಬದ್ದವಾಗಿ ಮೀನು ಮಾರಾಟ ಮಾಡುತ್ತಿದ್ದರು ಆದರೆ ಸೆಪ್ಟೆಂಬರ್ ತಿಂಗಳ 29ರಂದು 76.66 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಯೋಜನೆಯ ಹೈಟೆಕ್ ಮಹಿಳಾ ಮೀನು ಮಾರುಕಟ್ಟೆಯಲ್ಲಿ ಉದ್ಘಾಟನೆಗೊಂಡ ನೂತನ ಹೈಟೆಕ್ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಆರಂಭದ ಬಳಿಕ ತಕರಾರು ಶುರುವಾಗಿತ್ತು.
ಪ್ರಾರಂಭದಿಂದಲೂ ಕೆಲವು ಮೀನು ಮಾರಾಟಗಾರರಿಗೆ ಜಾಗ ಕೊರೆತ ಸಮಸ್ಯೆ ಹಾಗೂ ಮಾರಾಟದ ಸಮಸ್ಯೆ ಬಂದಿದ್ದರೂ 15 ದಿನಗಳ ಬಳಿಕ ಸಮಸ್ಯೆ ಹೆಚ್ಚಾಗತೊಡಗಿತು. ಪರಸ್ಪರರಲ್ಲಿ ಅಸಮಧಾನ ದುಗುಡ ತಲೆದೋರಿತ್ತು. ಕಟ್ಟಡದ ಬಾಗಿಲಿನ ಬಳಿಗಳಲ್ಲಿನ ಮೀನು ಮಾರಾಟಗಾರರಿಗೆ ಹೆಚ್ಚು ಮೀನು ಮಾರಾಟ ವ್ಯಾಪಾರವಾದರೆ ಉಳಿದವರಿಗೆ ವ್ಯಾಪಾರ ಬಹುತೇಕ ಕುಂಠಿತವಾಗಿತ್ತು. ಕೆಲವರು ಬೆಳಿಗ್ಗೆನಿಂದಲೇ ತುಂಬಾ ಬಾಕ್ಸ್ ಮೀನು ಮಾರಾಟ ಉತ್ತಮ ವ್ಯಾಪಾರ ನಡೆಸಿದ್ದರಿಂದ ಮಧ್ಯಾಹ್ನದ ಬಳಿಕ ಬರುವ ಮಾರಾಟಗಾರರಿಗೆ ವ್ಯಾಪಾರ ಮಾಡುವರಿಗೆ ಹಾಗೂ ಸಣ್ಣ ಪ್ರಮಾಣದ ಮೀನು ಮಾರಾಟಗಾರರಿಗೆ ತೊಂದರೆಯಾಗಿದೆ. ಇಂತಹ ಹಲವಾರು ಸಮಸ್ಯೆ ಗಳ ಬಗ್ಗೆ ಮಾರುಕಟ್ಟೆ ಮುಚ್ಚಲಾಗಿದೆ ಎಂದು ಮಹಿಳಾ ಮೀನು ಮಾರಾಟಗಾರರ ಸಂಘದ ಮುಖ್ಯಸ್ಥೆ ಗೀತಾ ಮಾಹಿತಿ ನೀಡಿದ್ದಾರೆ.
ಮೀನು ಮಾರಾಟಗಾರರು ಒಟ್ಟಿಗೆ ತಮ್ಮತಮ್ಮಲ್ಲಿಯೇ ಸಮಾಲೋಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ ಅಲ್ಲದೆ ಕಿನ್ನಿಗೋಳಿ ಪಂಚಾಯಿತಿ ಆಡಳಿತ ಕೂಡ ಪಾರದರ್ಶಕ ತೀರ್ಮಾನಕೈಗೊಂಡು ನಿರ್ದೇಶನ ನೀಡಲಾಗಿದೆ.

ಮೀನಿಗಾಗಿ ಬಂದ ಗ್ರಾಹಕರು ಮಾರುಕಟ್ಟೆಯಲ್ಲಿ ಅಲೆದಾಡಿ ಪರ್ಯಾಯಾವಾಗಿ ಮಾಂಸದಂಗಡಿ, ಒಣಮೀನು ಹಾಗೂ ತರಕಾರಿ ಅಂಗಡಿಗಳಿಗೆ ಸಾಗಿ ಪಂಚಾಯಿತಿಯ ಧೋರಣೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.

Kinnigoli-16101402 Kinnigoli-16101403

 

Comments

comments

Comments are closed.

Read previous post:
Kinnigoli-16101401
ರಾಷ್ಟ್ರ ಸೇವಿಕಾ ಶಿಕ್ಷಣ ಶಿಬಿರ ಸಮಾರೋಪ

ಕಿನ್ನಿಗೋಳಿ : ಮಹಿಳೆಯರಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ದೇಶ ಪ್ರೇಮದ ಜಾಗೃತಿ, ಯುವ ಪೀಳಿಗೆಯ ಬಾಲಕಿಯರಲ್ಲಿ ಶಿಸ್ತು ಸಂಸ್ಕಾರ ಸಂಸ್ಕೃತಿ ಆಚಾರ ವಿಚಾರಗಳ ಧರ್ಮ ಜಾಗೃತಿಯ ಅರಿವು ಮೂಡಿಸುವ...

Close